ಕ್ರೌಂಚಾಸನದ ಮಹತ್ವ – ಮಂಜುನಾಥ್ ಪ್ರಸಾದ್

ಕ್ರೌಂಚಾಸನ ಕಷ್ಟದ ಆಸನವಾದರೂ ಅದರ ಲಾಭ ಸಾಕಷ್ಟಿದೆ.ಅದರ ಕುರಿತು ಮಂಜುನಾಥ್ ಪ್ರಸಾದ್ ಅವರು ಬರೆದ ಒಂದು ಅರೋಗ್ಯ ಮಾಹಿತಿಯನ್ನು ತಪ್ಪದೆ ಓದಿ…

ಆಸನಗಳಲ್ಲಿ ಕಲಿಯಲು ಸ್ವಲ್ಪ ಕಷ್ಟವಾದರೂ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮವಾದ ಆಸನವೆಂದರೆ ಅದು ಕ್ರೌಂಚಾಸನ ಅಥವಾ Heron pose. ಕ್ರೌನ್ಚ ಪಕ್ಷಿ ಎಂದರೆ ನಾವು ಕರೆಯುವ ಬೆಳ್ಳಕ್ಕಿ. ಆಸನದ ಸ್ಥಿತಿಯಲ್ಲಿ ಬೆಳ್ಳಕ್ಕಿ ತರಹ ಕಾಣಿಸುವುದರಿಂದ ಈ ಹೆಸರು.

ಮಾಡುವ ವಿಧಾನ :

ಮೊದಲು ಕಾಲುಗಳನ್ನು ಮುಂದೆ ಚಾಚಿ ನೇರವಾಗಿ ಕುಳಿತುಕೊಳ್ಳಿ. ನಂತರ ಎರಡು ಕಾಲುಗಳನ್ನು ಮಡಚಿ ಬಲ ಮಂಡಿಯ ಮೇಲೆ ಎಡಗಾಲಿನ ಮಣಿಗಂಟನ್ನು ತೆಗೆದುಕೊಳ್ಳಿ. ಹಾಗೂ ಬಲಗಾಲಿನ ಪಾದವನ್ನು ಎರಡೂ ಹಸ್ತಗಳಿಂದ ಹಿಡಿದು ನೇರವಾಗಿ ಮೇಲೆ ಎತ್ತಿ. ಈ ಸ್ಥಿತಿಯಲ್ಲಿ ಎಡಗಾಲಿನ ಮೊಣಕಾಲು ಹೊಟ್ಟೆಗೆ ತಾಗಿರಬೇಕು. ಮೂಗು ಮತ್ತು ಹಣೆಯ ಭಾಗ ಬಲ ಮೊಣಕಾಲಿಗೆ ತಾಗಿರಬೇಕು. ಈ ಸ್ಥಿತಿಯಲ್ಲಿ ಸಹಜ ಉಸಿರಾಟ ಕ್ರಿಯೆ ಇರಲಿ. ಹಾಗೂ 30 ಸೆಕೆಂಡ್ ನಿಂದ ಒಂದೆರಡು ನಿಮಿಷಗಳ ಕಾಲ ಸ್ಥಿತಿಯಲ್ಲಿ ಇರಿ. ನಂತರ ಇದೇ ರೀತಿ ಮತ್ತೊಂದು ಕಡೆ ಆಸನ ಮಾಡಲೇಬೇಕು (ವಿಡಿಯೋ ನೋಡಿ )

ಉಪಯೋಗ:

– ಈ ಆಸನ ಮಾಡುವುದರಿಂದ ತೊಡೆಯ ಮೂಲ, ಮಂಡಿ, ಕಾಲಿನ ಮಣಿಗಂಟುಗಳ ಬಿಗಿತ ದೂರವಾಗುವುದು.

– ತೊಡೆ, ಪೃಷ್ಠ ( buttaks ), ಸೊಂಟದ ಮತ್ತು ಹೊಟ್ಟೆಯ ಭಾಗದ ಕೊಬ್ಬಿನಂಶ ಕರಗುವುದು. ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯಕ.

– ಏಕಾಗ್ರತೆ ಹೆಚ್ಚಾಗುವುದು. ಮಕ್ಕಳಿಗೆ ಉತ್ತಮ ಆಸನ.

– ಗ್ಯಾಸ್ಟ್ರಿಕ್‌, ಮಲಬದ್ಧತೆ, ಡಯಾಬಿಟೀಸ್‌ಗೆ ತೊಂದರೆ ನಿವಾರಣೆಗೆ ಉತ್ತಮ ಆಸನವಿದು.

ಸೂಚನೆ :

ಪ್ರಾರಂಭದಲ್ಲಿ ಬ್ಯಾಲೆನ್ಸ್ ಸಿಗದಿದ್ದರೆ ಬೆನ್ನಿಗೆ ಗೋಡೆ ಅಥವಾ ಕಂಬದ ಸಪೋರ್ಟ್ ತೆಗೆದುಕೊಳ್ಳಿ. ಯಾವುದೇ ಆತುರವಿಲ್ಲದೆ ನಿಧಾನವಾಗಿ ಕಲಿಯಿರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದ್ದಾಗ ಮತ್ತು ಸಂಜೆಯ ಹೊತ್ತಿಗೆ ಮಾಡಿ.

ಮಂಡಿ ನೋವು ಇರುವವರು ಹಾಗೂ ಹೆಣ್ಣು ಮಕ್ಕಳು ತಮ್ಮ ತಿಂಗಳ ಸಮಯದಲ್ಲಿ ಈ ಆಸನ ಮಾಡಬಾರದು.


  •  ಮಂಜುನಾಥ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW