ಮೈ ತುಂಬಲು ಒಡವೆಯಿದೆ ಆದರೆ ಮನೆಯೊಡತಿ ಮನೆಯೊಳಿಲ್ಲ…ಕವಿ ವೈ ಜಿ ಅಶೋಕ್ ಕುಮಾರ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳು, ತಪ್ಪದೆ ಓದಿ …
ಮೈ ತುಂಬಲು
ಒಡವೆಯಿದೆ
ಮನೆಯೊಡತಿ
ಮನೆಯೊಳಿಲ್ಲ…
ಅವನೋ ಬರಿ ಮೈ ದಾಸ
ದಾಸವಾಳ ಗಿಡದಂತೆ ಮಡದಿ
ಮನೆ ತುಂಬಾ ಹೂಗಳು…
ಮಲ್ಲಿಗೆ ಸಂಪಿಗೆಯರು
ಊರ ತುಂಬ ಘಮಲು
ಕಿತ್ತು ಮುಡಿಯುವವರಿಗೆ ಬರವಿಲ್ಲ
ಮೈದುಂಬಿವೆ ಕಾವೇರಿ ಹೇಮಾವತಿ ಕಪಿಲೆಯರು
ಕೇಳುವವರು ಗತಿಯಿಲ್ಲ
ಆದರೂ ನಿತ್ಯ ಸುಮಂಗಲಿಯರು ದಿಕ್ಕೆಟ್ಟು ಹರಿಯುತಿಹರು
ದಿನವೂ ಸೂರ್ಯ ಚಂದ್ರರು ಸರದಿ ಮುಗಿಸಿಹರು…
ಹೂವಿಲ್ಲದ ಹಾಸಿಗೆ
ಮೊಗ್ಗುಗಳು ಮೊಳಕೆಯೊಡೆಯಲಿಲ್ಲ
- ವೈ ಜಿ ಅಶೋಕ್ ಕುಮಾರ್ (ಪತ್ರಕರ್ತರು, ಕವಿಗಳು, ಲೇಖಕರು)
