ಬೆಳಿಗ್ಗೆ ಈ ಸುದ್ದಿ ಓದಿ ನಿಜಕ್ಕೂ ದಂಗಾದೆ. ಕಳೆದ ವಾರ ಕುಂದಾಪುರದಲ್ಲಿಯೂ ಕೇವಲ 14 ವರ್ಷದ ಹುಡುಗಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಆಡುವ ವಯಸ್ಸಿನಲ್ಲಿ ಹೃದಯಾಘಾತವೆಂದರೆ ಮಕ್ಕಳನ್ನು ಯಾವ ಒತ್ತಡದಲ್ಲಿ ಬೆಳೆಸುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಇದರ ಕುರಿತು ಲೇಖಕ ಮಂಜುನಾಥ್ ಚಾಂದ್ ಅವರು ಬರೆದಿರುವ ‘ಹೃದಯದ ಮಾತು’ ಪುಸ್ತಕ ನಾಳೆ ಲೋಕಾರ್ಪಣೆ ಕೊಳ್ಳಲಿದೆ, ತಪ್ಪದೆ ಎಲ್ಲರೂ ಬನ್ನಿ…
ಪುಸ್ತಕ : ಹೃದಯದ ಮಾತು
ಲೇಖಕರು : ಮಂಜುನಾಥ್ ಚಾಂದ್
ಸ್ಥಳ : ಡಾ ಸಿ ಅಶ್ವಥ್ ಕಲಾಭವನ, ಎನ್ ಆರ್ ಕಾಲೋನಿ
ದಿನಾಂಕ: ನವೆಂಬರ್ ೧,೨೦೨೨
ಸಮಯ : ಸಂಜೆ ೫ ಗಂಟೆ
ಬೆಳಿಗ್ಗೆ ಈ ಸುದ್ದಿ ಓದಿ ನಿಜಕ್ಕೂ ದಂಗಾದೆ. ಕಳೆದ ವಾರ ಕುಂದಾಪುರದಲ್ಲಿಯೂ ಕೇವಲ 14 ವರ್ಷದ ಹುಡುಗಿ ಹೃದಹಾಘಾತದಿಂದ ಮೃತಪಟ್ಟಿದ್ದಾಳೆ. ಹತ್ತು-ಹದಿನೈದು ವರ್ಷ ವಯಸ್ಸೂ ತಲುಪದ, ಇನ್ನೂ ಲವಲವಿಕೆಯಿಂದ ಆಟವಾಡಿಕೊಂಡಿರುವ ಮಕ್ಕಳು ಹೀಗೆ ಏಕಾಏಕಿ ಹೃದಯಾಘಾತಕ್ಕೆ ಒಳಗಾಗಿ ಹೊರಟುಬಿಡುತ್ತಾರೆ ಎಂದರೆ? ನಿಜಕ್ಕೂ ನಾವು ಮಕ್ಕಳನ್ನು ಯಾವ ಒತ್ತಡದಲ್ಲಿ ಬೆಳೆಸುತ್ತಿದ್ದೇವೆ ಎಂಬುದನ್ನು ಕೇಳಿಕೊಳ್ಳಬೇಕಾಗಿದೆ. ಮೊನ್ನೆ ಮೊನ್ನೆ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ಅವರ ಜೊತೆ ಮಾತನಾಡುತ್ತ ಇಂತಹುದೇ ಪ್ರಸ್ತಾಪ ಬಂತು. ಅವರು ಹೇಳಿದ ಮಾತು ನಿಜಕ್ಕೂ ಕಣ್ಣು ತೆರೆಸುವಂತಹುದು :
“ಇಂತಹ ಒತ್ತಡದ ಜೀವನವನ್ನು ಶುರು ಮಾಡಿರುವವರು ಯಾರು ಹೇಳಿ? ನಾವೇ. ಐದು ವರ್ಷದ, ಆರು ವರ್ಷದ ಮಗುವನ್ನು ಇನ್ನೂ ಬೆಳಗಾಗುವ ಮುನ್ನವೇ ಎಬ್ಬಿಸಿ, ಏಳು ಗಂಟೆಯ ಹೊತ್ತಿಗೆಲ್ಲ ಒಂದು ಪ್ರಾಣಿಯ ರೀತಿಯಲ್ಲಿ ಬಸ್ಸಿನಲ್ಲೋ, ರಿಕ್ಷಾದಲ್ಲೋ, ವ್ಯಾನಿನಲ್ಲೋ ತಂದು ಕೂರಿಸುತ್ತೇವೆ. ಅಕ್ಷರಶಃ ತುಂಬಿ ಶಾಲೆಗೆ ಕಳಿಸಿ ನಮ್ಮ ಜವಾಬ್ದಾರಿ ಕಳಚಿಕೊಂಡು ಬಿಡುತ್ತೇವೆ. ನನ್ನ ಅಭಿಪ್ರಾಯದ ಪ್ರಕಾರ ಕನಿಷ್ಠ ಎರಡನೇ ತರಗತಿಯವರೆಗಾದರೂ ಮಕ್ಕಳ ಶಾಲೆ ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾಗಿ ಹನ್ನೆರಡೂವರೆ ಹೊತ್ತಿಗೆ ಬಿಟ್ಟುಬಿಡಬೇಕು. ದಿನದಿಂದ ದಿನಕ್ಕೆ ನಾವು ಮಕ್ಕಳನ್ನು ಮಕ್ಕಳಾಗಿ ಪರಿಗಣಿಸುವುದೇ ಇಲ್ಲ. ಅವರಲ್ಲಿರುವ ‘ಮಕ್ಕಳತನ’ ‘ಬಾಲ್ಯ’ವನ್ನೇ ಕಿತ್ತುಕೊಳ್ಳುತ್ತಿದ್ದೇವೆ. ಬೆಳಿಗ್ಗೆ ಎದ್ದ ಕೂಡಲೇ ಮಕ್ಕಳಿಗೆ ತಿಂಡಿ ತಿನ್ನಲು, ಹಾಲು ಕುಡಿಯಲು ಸಾಧ್ಯವಿಲ್ಲ. ಅದು ಗೊತ್ತಿದ್ದೂ ನಾವು ಅವರನ್ನು ಅರೆಹೊಟ್ಟೆಯಲ್ಲಿ ಶಾಲೆಗೆ ದಬ್ಬಿಬಿಡುತ್ತೇವೆ. ಇದರಿಂದ ಆಗುವುದು ಏನು? ಮಕ್ಕಳನ್ನು ಚಿಕ್ಕಂದಿನಿಂದಲೇ ಅಪೌಷ್ಟಿಕತೆಯಿಂದ ಬೆಳೆಸುತ್ತೇವೆ. ಮಕ್ಕಳನ್ನು ಯಾವ ಹಂತದಲ್ಲಿ ದೈಹಿಕವಾಗಿ ಗಟ್ಟಿಮಾಡಬೇಕೋ ಅಂತಹ ಹೊತ್ತಿನಲ್ಲೇ ಒತ್ತಡಕ್ಕೆ ತಳ್ಳುತ್ತೇವೆ. ದೈಹಿಕವಾಗಿಯೂ ಮಾನಸಿಕವಾಗಿಯೂ ದುರ್ಬಲರನ್ನಾಗಿ ಮಾಡುತ್ತೇವೆ. ಅವರಿಗೆ ಸಿಗಬೇಕಾದ ಕಾಳಜಿ-ಪ್ರೀತಿಯಿಂದ ಅವರನ್ನು ವಂಚಿತರನ್ನಾಗಿ ಮಾಡುತ್ತೇವೆ….”

ಬೆಳಗಿನ ಜಾವ ಬೆಂಗಳೂರಿನ ಬೀದಿಯಲ್ಲಿ ನಡೆದು ಹೋಗುತ್ತಿದ್ದರೆ ನೈಟಿ ಹಾಕಿಕೊಂಡ ಅಮ್ಮಂದಿರು ಪುಟ್ಟ ಕಂದಮ್ಮಗಳನ್ನು ಸ್ಕೂಲ್ ವ್ಯಾನಿಗೆ ಹತ್ತಿಸಲು ಕಾದು ನಿಂತಿರುವ ದೃಶ್ಯ ಕಣ್ಣಿಗೆ ಬೀಳುತ್ತದೆ. ಇದು ಕೇವಲ ಬೆಂಗಳೂರಿಗೆ, ನಗರಗಳಿಗೆ ಮಾತ್ರ ಇಂದು ಸೀಮಿತವಾಗಿಲ್ಲ. ಹಳ್ಳಿಗಳಿಗೂ ಈ ಚಾಳಿ ಹತ್ತಿಕೊಂಡಿದೆ. ವ್ಯವಸ್ಥೆಯಲ್ಲಿ ಇಂಥವನ್ನೆಲ್ಲ ಪ್ರಶ್ನೆ ಮಾಡುವ ಕನಿಷ್ಠ ಪ್ರಜ್ಞೆಯನ್ನೂ ನಾವು ಕಳೆದುಕೊಂಡಿದ್ದೇವೆಯೇ?
ರಾಜ್ಯೋತ್ಸವದ ದಿನ ಬಿಡುಗಡೆ ಕಾಣಲಿರುವ ‘ಹೃದಯದ ಮಾತು” ಕೃತಿಯಲ್ಲಿ ಡಾ.ಮಂಜುನಾಥ್ ಅವರು ಇಂತಹ ಅನೇಕ ಮನಮುಟ್ಟುವ ಮಾತುಗಳನ್ನು ಹೇಳಿದ್ದಾರೆ. ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ದೂರುವ ನಾವು ಎಲ್ಲಿ ಎಡವಿದ್ದೇವೆ ಎಂದು ಪ್ರಶ್ನೆ ಮಾಡಿಕೊಳ್ಳಲು ಇದು ಸಕಾಲ. ರಾಜ್ಯೋತ್ಸವದ ದಿನ ಬಿಡುಗಡೆ ಕಾಣಲಿರುವ ‘ಹೃದಯದ ಮಾತು” ಕೃತಿಯಲ್ಲಿ ಡಾ.ಮಂಜುನಾಥ್ ಅವರು ಇಂತಹ ಅನೇಕ ಮನಮುಟ್ಟುವ ಮಾತುಗಳನ್ನು ಹೇಳಿದ್ದಾರೆ. ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ದೂರುವ ನಾವು ಎಲ್ಲಿ ಎಡವಿದ್ದೇವೆ ಎಂದು ಪ್ರಶ್ನೆ ಮಾಡಿಕೊಳ್ಳಲು ಇದು ಸಕಾಲ.
ಪ್ರೀ ಆರ್ಡರ್ : 7022122121
Veeralokabooks.com
- ಮಂಜುನಾಥ್ ಚಾಂದ್ , ಪತ್ರಕರ್ತರು, ಲೇಖಕರು
