ಇದು ಕಥೆಯಲ್ಲ ಜೀವನ – ಪ್ರವೀಣ ಮ ಹೊಸಮನಿ

ಆತನಿಗೆ ಸೈನಿಕನಾಗಿ ದೇಶಕಾಯಬೇಕು, ನಾಡಿನ ಜನರ ಪ್ರೀತಿ ಗೆಲ್ಲಬೇಕು ಎನ್ನುವ ನೂರಾರು ಕನಸ್ಸುಗಳನ್ನು ಹೊತ್ತ ಹುಡುಗ, ಆದರೆ ವಿಧಿಯಾಟವೇ ಬೇರೆಯಾಗಿತ್ತು ಕತೆಯ ಮುಂದಿನ ಭಾಗ ತಿಳಿಯಬೇಕಾದರೆ ಪ್ರವೀಣ ಮ ಹೊಸಮನಿ ಅವರ ಕತೆಯನ್ನು ಓದಿ…

ಅದೊಂದು ಬಾಲ್ಯ, ಮೊಂಡುತನ, ಕೆಲವೊಮ್ಮೆ ಆಟವೇ ಮನದಟ್ಟಾಗುವ ಬದುಕದು. ಕ್ಷಣಿಕ ಖುಷಿಯ ಉಲ್ಲಾಸ  ಹಾಸು ಹೊಕ್ಕಾಗುವ ಜೀವನವನವದು. ಬಾಲ್ಯಾವಸ್ಥೆಯಿಂದ ಪ್ರಾಥಮಿಕಕ್ಕೆ, ಪ್ರಾಥಮಿಕದಿಂದ ಪ್ರೌಢಕ್ಕೆ ಶಾಲಾ ಹಂತವಾಗಿ ಮುನ್ನುಗುತ್ತಲೇ ಬಂದ ಕ್ಷಣವದು.

ಬಡತನದ ಪರಸ್ಥಿತಿಯಲ್ಲಿ ನನಗೊಂದು ಆಸೆಯೆಂಬ ಕನಸೊತ್ತಿದ್ದ ಹುಡುಗನ್ನೊಬ್ಬ ಆ ಹುಡುಗನ ಕನಸು ‘ಭಾರತ ದೇಶದ ಸೈನಿಕ’ನಾಗುವಾಸೆ. ಕ್ರಿಕೆಟ್ ಆಟದಲ್ಲಿ ಮಿಂದ ಹುಚ್ಚುತನ ಆತನದು. ಆ ಕ್ರಿಕೆಟ್ ಪ್ರೀತಿಯ ಹುಚ್ಚೆ ಆತನ ಬದುಕಿನ ಜೀವನಕ್ಕೆ ಮುಳ್ಳಿನ ಹಚ್ಚೆಯಂತಾಗಿ ಮಚ್ಚೆ ಉಳಿಯಿತು. ಪ್ರೌಢ ಶಾಲಾ ಹಂತದಲ್ಲಿ ದುರಾದೃಷ್ಟವಶಾತ್ ಕ್ರಿಕೆಟ್ ಆಡುವ ಸಮಯದಲ್ಲಿ ಈತನದು ಬ್ಯಾಟಿಂಗ್ ಸಮಯ ಬೌಲರ್ ನ  ಬೌಲಿಂಗ್ ದಾಳಿಗೆ ನೇರವಾಗಿ ಚೆಂಡು ಬಹು ರಭಸದಿಂದ ಬಂದು ಆತನ ಒಂದು ಕಣ್ಣಿಗೆ ಬಂದು ತಾಗಿತು. ಮುಖ್ಯ ಕಾರಣ ಇದೇ. ಆದರೂ ದಿವಸ ಕಳೆದಂತೆಲ್ಲ ಆತನು ತನ್ನ  ದೇಹದ ಅಮೂಲ್ಯ ಅಂಗ ನೇತ್ರದ ಕಾಳಜಿನೇ ವಹಿಸದೆ ದಿವಸವನ್ನು ಮುನ್ನುಗುತ್ತಲೇ ಬಂದ ಜೊತೆಗೆ ಪದವಿ ಪೂರ್ವ ವ್ಯಾಸಂಗವನ್ನು ಪೂರೈಸಿದ. ಕ್ರಮೇಣ ಅದು ನೋವತ್ತಾ ಬಂತು. ಏನ್ ಮಾಡೋದು ಇದೇನು ಹೀಗ ನೋವುತ್ತಿದೆಯಲ್ಲಾ ಎಂದು ತಿಳಿದು ಅದಕ್ಕು ಜಗ್ಗರಿಯದೆ ಇದೇನ ನೋವ ಮಹಾ ಬಿಡು ಅನ್ನೋ ಹುಚ್ಚು ಮೊಂಡುತನದಲ್ಲೇ ಮುಂದಾದ.

ಫೋಟೋ ಕೃಪೆ : thecricketmonthly

ಮನೆಯಲ್ಲಿ ಈತನು ಹೇಳಿದ್ದು ‘ರಸ್ತೆ ಪಕ್ಕಾ ಹೋಗ್ತಿರಬೇಕಾದ್ರೆ ಲಾರಿ ಟೈರಗೆ ಸಣ್ಣ ಕಲ್ಲು ತಾಗಿ ಅದು ಅದರ ಒತ್ತಡದಿಂದ ಆ ಕಲ್ಲು ನನ್ನ ಕಣ್ಣಗೆ ಬಂದು ಬಡಿತಮಾऽऽ ಎಂದ.ಇನ್ನೇನೂ ನಿಜಾ ಹೇಳಿದ್ರೆ ಬಯ್ಯೋದಕ್ಕ ಶುರು ಮಾಡ್ತಾರೆಂದು ಹುಸಿನುಡಿದ ಮಗಾ!…ಹೀಗೆ ಅದನ್ನು ನೇತ್ರ ವಿಶಿಷ್ಟ ವೈದ್ಯರ ಚಿಕಿತ್ಸೆಗೆ ಒಳಪಡಿಸಿ ತಕ್ಷಣದ ನಿವಾರಣೆಗೆ ಕೆಲ ಔಷಧಿಗಳನ್ನ ಕೊಟ್ಟು ಮತ್ತೆ ಪುನಃ ವಾರ ಬಿಟ್ಟ ಬನ್ನಿ ಎಂದ ವೈದ್ಯರು. ಔಷಧಿ, ಮಾತ್ರೆ ಎಲ್ಲವೂ ಮುಗಿಯಿತು, ಪುನಃ ಮತ್ತೆ ವೈದ್ಯರನ್ನ ಕಾಣಲು ಬಂದ್ರು. ಕಣ್ಣಿನ ಬಗ್ಗೆ ಸೂಕ್ತ ಮಾಹಿತಿಯನ್ನು ಪರೀಕ್ಷೆ ಮಾಡಿ ಅವರನ್ನು ಹುಬ್ಬಳ್ಳಿಯ ಪ್ರತಿಷ್ಠಿತ ಹೆಸರಾಂತ ವೈಶಿಷ್ಟ್ಯ ಹೊಂದಿರುವ ಆಸ್ಪತ್ರೆ “ಜೋಶಿ ಕಣ್ಣಿನ ಆಸ್ಪತ್ರೆ”ಗೆ ತೋರಿಸಿ ಎಂದು ಪರಿಶೀಲಿಸಿದ ದಾಖಲಾತಿಯ ಆದರದ ಮೇಲೆ ಕೊಟ್ಟು ಕಳುಹಿದರು. ಜೋಶಿ ಆಸ್ಪತ್ರೆಯ ಪರಿಶೀಲಿಸಿದ ಪ್ರಕಾರ ಆತನಿಗೆ ಆಪರೇಷನ್ ಮಾಡುವುದು ಎಂದು ಹೇಳಿದರು. ಆಪರೇಷನ್ ಕೂಡಾ ಆಯ್ತು. ಬಡತನದ ಪರಸ್ಥಿತಿಯಲ್ಲಿ ‘ಹರಿ’ ಬೇಕು ಅಂತಾನೆ ಪರೀಕ್ಷೆ ಒಡ್ತಾನೇ ಅನಿಸುತ್ತೆ. ಅಸಹಾಯಕ ತಂದೆ – ತಾಯಿಗಳು, ಬದಲಾಗಿ ಬೆಳೆದು ನಿಂತ ತಂಗಿ ಒಂದ ಕಡೆ, ಅವಳು ಓದು ಸಹ ಒಂದ ಹಂತಕ್ಕೆ ಬಂದು ಈಗ ಬಿ.ಕಾಂ ಪದವೀಧರೆಯಾಗಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿದ್ದಾಳೆ. ಈತ ಕಿರಿಮಗಾ, ಹಿರಿ ಮಗಾ ಕೂಡಾ ಅನೇಕ ಸರಕಾರಿ ಹುದ್ದೆಗಳಿಗೆ ಪ್ರಯತ್ನಿಸಿ, ಕೊನೆಗೆ ಬೇಸತ್ತು ಬೇಸಾಯದ ಕಡೆಗೆ ವಾಲಿದ. ಮಧ್ಯೆದ ಮಗ ಮದ್ಯ ವ್ಯಸನೀಯಾಗಿದ್ದ. ಅವನನ್ನು ಮನಸ್ಸೊಲಿಸಿ ದೂರದ ಹಾಸನಕ್ಕೆ ಕಂಪನಿಗೆಂದು ಕಳುಹಿಸಿದರು. ಕಣ್ಣ ಆಪರೇಷನ್ ಮುಗಿತು. ಮತ್ತೆ ಜೀವನ ಎಂದಿನಂತೆ ಸಾಗುತ್ತಲೇ ಬಂತು. ಬರುಬರುತ್ತ ದಿನಗಾಳದ್ವು, ತಿಂಗಳಾಯ್ತು, ವರ್ಷವು ಮುಗಿತಾನೇ ಬಂತು ಆತನ ಕಣ್ಣು ಮೊದ್ಲು ಮತ್ತು ಈಗಿನದಕೂ ಅಸ್ಪಷ್ಟವಾಗಿ ಗೋಚರದ ಅನುಭವ ಆತನಿಗೆ. ಸರಿ, ಇರಲಿ ಮತ್ತೆ ಹುಬ್ಬಳ್ಳಿಗೆ ಹೋದ್ರೆ ಆಯ್ತು ತೋರಸ್ಕೋಬಹುದೆಂದು ಮತ್ತೆ ಬಂದು ಕಣ್ಣಿನ ಪರಿಶೀಲನೆಗೆ ಹಾಜರಾಗಿ ವೈದ್ಯರು ಮಾತನ್ನ ಕೇಳತಾ ಬಂದ. ಇದು ಸಹ ಹಾಗೆಯೇ ದಿನ, ತಿಂಗಳು, ವರ್ಷ, ಮತ್ತೇ ಅದೇ ದಾರಿ ಅದೆ ಚಿಕಿತ್ಸೆ ಮೇಲಿಂದ ಮೇಲೆ ಲೇಸರ್ ಆಪರೇಷನ್ ಹೀಗೆಯೇ ಮುಂದಹೋಯ್ತು. ಒಂದಿನಾ ವೈದ್ಯರನ್ನು ಈತ “ಏನ್ರಿ ಸರ್ ಹಿಂಗೆ ಆಗಕತ್ತರೀ ….ನನ್ನ ಕಣ್ಣ ಮತ್ತ ಮುಂದಿಂದ ಹೆಂಗ್ರೀ ಸರಾऽऽ”ಅಂತ ಕೇಳಿದಾಗ ಆಗ ವೈದ್ಯರ ಹೇಳಿದ ಮಾತು ನಿಜಕ್ಕೂ ಎದೆ ಕಸ್ಸೆನಿಸುವ ಭಾವ.

ಏನಿಲ್ಲ ತಮ್ಮಾ, ಅದು ಕಣ್ಣ ನಿನ್ ವಯಸ್ಸ ಹೆಂಗ ಹೆಂಗ ಆಗ್ತಾವಲಾ ಹಂಗ ಹಂಗ ನಿನ್ ಆ ಕಣ್ಣಿನ ಸಾಮರ್ಥ್ಯನು ಹೋಗುತ್ ಪಾ…” ಎಂದಾಗ ಅಬ್ಬೋ, ಎಂದು ನಿಟ್ಟುಸಿರು ಬಿಟ್ಟು ನಿಂತು ಇನ್ನೇನು ಜೀವನದ ಆಸೆಯನ್ನೇ ಬದಿಗೊತ್ತಿ ಇದ್ದುದರಲ್ಲೆ ತೃಪ್ತಿಯಿಂದ ಇರಬೇಕು ಅನ್ನೋ ಮನಸ್ಸುಮಾಡಿದ. ಇದಕ್ಕೂ ಮುಂಚೆ ಸೈನಿಕನಾಗಲೂ ಕೊನೆಯ ಹಂತದ ಪರೀಕ್ಷೆವರೆಗೂ ಹೋಗಿ ಕೊನೆಗೆ ವೈದ್ಯಕೀಯ ಪರೀಕ್ಷೆಯಲ್ಲಿ ಕಣ್ಣಿನ ದೋಷದಿಂದ ಹೊರಹಾಕಿದಾಗ ಆತನ ಮನ ಎಂತಾ ಸಂಕಟವನ್ನ ಅನುಭವಿಸ್ಲಿಕ್ಕಿಲ್ಲ. ನಾನು ನನ್ನದು ಎಂದು ಬದುಕಿದವನೇ ಅಲ್ಲ ಪ್ರೀತಿ ಪಾತ್ರರೊಂದಿಗೆ ಸದಾ ಅವರ ತೊಡರುಗಳ ನಿವಾರಣೆಯಾಗ್ಲಿ, ಸ್ನೇಹಿತರ ಮನ,ಮನೆ ಮಗನಾಗಿ ತನ್ನ ಸಂತೋಷವನ್ನ ಅಲ್ಲಿಂದ ಹೋರಹಾಕ್ತಿದಾನೆ.ಭಾರವೆಂದೆನಿಸದೆ ಎಲ್ಲರಿಗೂ ಆಭಾರಿ ಎಂತೆಂದಿರುವವನು. ಪರಸ್ಥಿತಿಯ ನಡುವೆ ವಿದ್ಯಾಭ್ಯಾಸಕ್ಕೆ ವಿರಾಮಾವನ್ನಿಟ್ಟು ತನ್ನ ತಂಗಿಯ ಓದು ಮನೆಯ ಬದುಕು ಮನೆಯವರ ಮನಸ್ಥಿಗೆ ಒಂದಾಗಿ ಕಾಲ ಕಳಿಯುತ್ತಿದ್ದಾನೆ.

ಮುಕ್ತವಾಗಿ ಎಲ್ಲಿಯೂ ಹೇಳಿಕೊಳ್ಳದ ಅಳಲು ಒಡನಾಟದ ಸ್ನೇಹಿತರ ಗಮನಕ್ಕೆ ತನ್ನ ವಿಷಯನ್ನ ತಂದಾಗ ಸ್ನೇಹಿತರು ಅರಿತು ಏನೂ ಅರಿಯದಂತೆ ಸ್ತಬ್ಧಚಿತ್ರದಂತೆ ಆದರು.ಆತನ ಬಾಲ್ಯದ ನೆನಪನ್ನು ಕೆದಕಿ ನೋಡಿದಾಗ ಹೇಗಿದ್ದ ಆಗऽ!,,ಅನ್ನೋ ಮನಸ್ಸು ಮರುಗುತ್ತೆ..

ಈ ಕಥೆಯಿಂದ ಹೇಳಬಯೋಸದಿಷ್ಟೇ –

ನಿಮಗೂ ನಿಮ್ಮ ಜವಾಬ್ದಾರಿಗಳಿರುತ್ತೇ, ಅನೇಕ ಸಮಸ್ಯೆಗಳೂ ಕೂಡಾ ಇರುತ್ತೆ, ಬಡತನವು ಇರಬಹುದು, ನಿಮ್ಮ ಕ್ಷುಲ್ಲಕ ಖುಷಿಗೆ ನಿಮ್ಮ ಬದುಕುವ ಬದುಕಿನ ಶೈಲಿಯೇ ಬದಲಾಗದಂತೆ ನೀವು ಬದಲಾಗದೆ ಒಳ್ಳೆಯದಕ್ಕೆ ಬದಲಾಗಿ. ನಿಮ್ಮ ಕುಟುಂಬ ನಿಮ್ಮ ಒಳಿತಿನ ದಾರಿಗೆ ಸದಾ ಹವಣಿಸುತ್ತಿರುವ ಆಕಾಂಕ್ಷಿಯ ಬಣವೆಯಂತಿರುತ್ತೇ ಎನ್ನುವುದೇ ಈ ಕಥೆಯ ಮುಖ್ಯ ಆಶಯ.

ಗುರು, ಸ್ನೇಹ ಬಳಗ, ಪೋಷಕರ ಮತ್ತು ನಂಬಿದ ದೈವದ ಆಶೀರ್ವಾದ ಸದಾ ಆತನನ್ನು ಸಂತೃಪ್ತಿಯಂದಿಡಲಿ ಎಂದು ಪ್ರಾರ್ಥೀಸುವೆ. ಇದು ನನ್ನ ಬಾಲ್ಯದ ಆತ್ಮೀಯ ಗೆಳೆಯನ ನೈಜಾರಿತ ಕಥೆ..


  • ಪ್ರವೀಣ ಮ ಹೊಸಮನಿ, ನಾಗಠಾಣ. ವಿಜಯಪುರ ಜಿಲ್ಲೆ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW