ವಿಶ್ವ ಆರೋಗ್ಯ ಸಂಸ್ಥೆಯು ಮೇ ೧೭ ರಂದು ‘ಅಧಿಕ ರಕ್ತದ ಒತ್ತಡದ ದಿನ (hypertension) ವನ್ನಾಗಿ ಘೋಷಿಸಿದೆ, ಮುಂದೆ ಓದಿ…
ಆಯುರ್ವೇದದ ಪ್ರಕಾರ ಅಧಿಕ ರಕ್ತದೊತ್ತಡವು ರಕ್ತದಲ್ಲಿನ ಸಮತೋಲನದ ಪೋಷಕಾಂಶಗಳ ಕೊರತೆ ಹಾಗೂ ದೇಹದ ರಕ್ತ ಪರಿಚಲನೆಯ ವೇಗದ ಗತಿಯನ್ನು ಆಧರಿಸಿದೆ.
ಮೆದುಳಿನ ಕಾರ್ಯನಿರ್ವಾಹಕ ಜೀವಕೋಶಗಳಿಗೆ ಸರಿಯಾದ ಆಹಾರ ರಕ್ತದ ಮೂಲಕ ಪೂರೈಕೆಯಾಗದಿದ್ದಾಗ ಹಾಗೂ ದೇಹದ ಹಲವು ಅಂಗಗಳಿಗೆ ರಕ್ತನಾಳಗಳು ತಲುಪದಿದ್ದಾಗ ಮನಸ್ಸು ಹಾಗೂ ದೇಹದ ಮೇಲೆ ಬೀರುವ ಒತ್ತಡಗಳು ಈ ಸಮಸ್ಯೆಗೆ ಮೂಲ ಕಾರಣಗಳಾಗಿವೆ.
ಇನ್ನೊಂದು ವಿಧದಲ್ಲಿ ಇದು ದೇಹದಲ್ಲಿನ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ದೋಷಗಳ (ತ್ರಿದೋಷಗಳಾದ ವಾತ ಪಿತ್ತ ಮತ್ತು ಕಫ) ಅಸಮತೋಲನದ ಆಧಾರದ ಮೇಲೆ ಅನೇಕ ರೋಗಗಳನ್ನು ಉಂಟುಮಾಡುತ್ತದೆ.
ಅಧಿಕ ರಕ್ತದೊತ್ತಡ ಹೊಂದಿರುವ ಜನರು ಉಪ್ಪು(white table salt), ಕರಗದಿರುವ ಕೊಬ್ಬಿನಂಶ (unsaturated fat) ಹಾಗೂ ಹುರಿದ ಬೇಳೆ (protein) , ತೀಕ್ಷ್ಣ ಮಸಾಲೆಯುಳ್ಳ ಸಾಂಬಾರ್ ಪದಾರ್ಥಗಳನ್ನು ತೆಗಿಸಬೇಕಾಗುತ್ತದೆ. ಈ ಆಹಾರ ಶೈಲಿಗಳೇ ಅಧಿಕ ರಕ್ತದೊತ್ತಡಕ್ಕೆ ಕಾರಣಗಳಾಗಿವೆ.
ಬೆಟ್ಟದ ನೆಲ್ಲಿಕಾಯಿ (amla) ರಕ್ತದೊತ್ತಡ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಆಯುರ್ವೇದ ಔಷಧವಾಗಿದೆ ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ರಕ್ತನಾಳಗಳು ವಿಸ್ತರಿಸಲು ಸಹಾಯ ಮಾಡುತ್ತದೆ.
ಪ್ರತಿದಿನ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಆಮ್ಲ ಜ್ಯೂಸು ಸೇವಿಸಿದರೆ ಅದು ಅಧಿಕ ರಕ್ತದೊತ್ತಡ ಮತ್ತು ಇತರ ಹಲವು ಕಾಯಿಲೆಗಳನ್ನು ನಿಯಂತ್ರಿಸಲು ಸಹಕರಿಸುತ್ತದೆ.
ಆರೋಗ್ಯಕರ ಆಹಾರ ಮತ್ತು ಸಂತೋಷದ ಜೀವನ ಶೈಲಿಯ ಜೊತೆ ಜೊತೆಗೆ ಒತ್ತಡ ಮುಕ್ತ ಜೀವನವನ್ನು ರೂಡಿಸಿಕೊಂಡಾಗ ರಕ್ತದೊತ್ತಡವನ್ನು ಶಾಶ್ವತವಾಗಿ ನಿಯಂತ್ರಿಸಬಹುದು.
ಈಗಾಗಲೇ ರಕ್ತದೊತ್ತಡ ಸಮಸ್ಯೆಯಿಂದ ಹಲವು ವರ್ಷಗಳಿಂದ ಮಾತ್ರೆಗಳನ್ನು ಸೇವಿಸುತ್ತಿರುವವರು ಸೂಕ್ತ ಆಯುರ್ವೇದ ವೈದ್ಯರ ಸಲಹೆ ಪಡೆದು ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಂಡು ಆರೋಗ್ಯದಿಂದಿರಲು ಸಾಧ್ಯವಿದೆ.
- ಡಾ. ರಾಜೇಂದ್ರ ಸ್ವಾಮಿ, ದಿ ರಾಯಲ್ ಅಕಾಡೆಮಿ