ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಬಿಂಬುಳಿ ಹುಳಿಯನ್ನು ವಿವಿಧ ಖಾದ್ಯಗಳಿಗೆ ಬಳಸುವುದುಂಟು, ಈ ಬಿಂಬುಳಿ ಹುಳಿ ಕುರಿತು ನಾಗೇಂದ್ರ ಸಾಗರ್ ಅವರು ಬರೆದ ಲೇಖನ ತಪ್ಪದೆ ಓದಿ….
ಶಿರಸಿಗೆ ಹೋದವರು ಬರುವ ಹಾದಿಯಲ್ಲಿ ಸಿದ್ದಾಪುರದ ಹತ್ತಿರವಿರುವ ಗೋಳಿ ಕೈ ಗಣಪತಿ ಹೆಗಡೆಯವರಲ್ಲಿಗೆ ಹೋಗಿದ್ದೆವು. ಅನೇಕ ಫಲ ವೃಕ್ಷಗಳನ್ನು ಜತನದಿಂದ ಸಾಕಿರುವ ಹೆಗಡೆಯವರು ಗಿಡದ ತುಂಬ ಭರಪೂರ ಫಸಲು ತುಂಬಿರುವ ಬಿಂಬುಳಿಯನ್ನು ತೋರಿದರು.. ಬಿಂಬುಳಿಯನ್ನು ಹುಳಿಯಾಗಿ ಬಳಸಬಹುದು.
ಕರಾವಳಿ ಭಾಗದಲ್ಲಿ ಈ ಬಿಂಬುಳಿ ತುಂಬಾ ಮಾಮೂಲು.. ಬಳಕೆಯೂ ಹೆಚ್ಚು.. ನಮ್ಮ ಮಲೆನಾಡಲ್ಲಿ ಅಷ್ಟೊಂದಿಲ್ಲ.. ಒಯ್ದು ಬಳಸಿ ಎಂದು ಹೆಗಡೆಯವರು ಬೊಗಸೆಗಟ್ಟಲೆ ಕೊಟ್ಟ ಬಿಂಬುಳಿಯನ್ನು ನಮ್ಮಲ್ಲಿ ಈಗ ಬಗೆ ಬಗೆಯಲ್ಲಿ ಬಳಸಲಾಗುತ್ತಿದೆ.
ಬೇರೆ ಎಲ್ಲ ಖಾದ್ಯಗಳಿಗಿಂತ ವಾಣಿ ಮಾಡುವ ಇದರ ಉಪ್ಪಿನಕಾಯಿ ನನಗೆ ಬಲು ಇಷ್ಟ.. ಬಿಂಬುಳಿ, ಹಸಿ ಮೆಣಸು ಹೆಚ್ಚಿ, ಉಪ್ಪಿನ ಜೊತೆಗೆ ಬೆರೆಸಿ ಇಟ್ಟು ಮಾಗಿದ ಮೇಲೆ ಮಸಾಲೆ ಬೆರೆಸಿ ಮಂದವಾದ ಉಪ್ಪಿನಕಾಯಿ ಸಿದ್ಧ.. ತುಂಬಾ ದಿನ ಬಾಳಿಕೆ ಬಾರದು.. ಆದರೆ ನನ್ನ ಬೆಳಗಿನ ಕುಚ್ಚಲಕ್ಕಿ ಗಂಜಿ ಊಟದ ಜೊತೆ ನೆಂಚಿಕೊಳ್ಳಲು ಬಿಂಬುಳಿ ಉಪ್ಪಿನಕಾಯಿ ತುಂಬಾ ಫೇವರೇಟ್ ಎನ್ನಲಡ್ಡಿಯಿಲ್ಲ.
- ನಾಗೇಂದ್ರ ಸಾಗರ್