ಫೆಬ್ರವರಿ ,ಮಾರ್ಚ್, ಎಪ್ರಿಲ್ ತಿಂಗಳು ಗಳಲ್ಲಿ ಸಿಕ್ಕುವ ಹಣ್ಣು ತಿನ್ನಲು ಯೋಗ್ಯ. ಅದರ ಮಹತ್ವದ ಬಗ್ಗೆ ನಟಿ ವೈದ್ಯೆ ಸುಮನಾ ಮಳಲಗದ್ದೆ ಅವರು ಬರೆದಿರುವ ಒಂದು ಲೇಖನವನ್ನು ತಪ್ಪದೆ ಓದಿ…
ಒಂದು ಜಾತಿಯ ನೇರಳೆ ಗಾತ್ರದಲ್ಲಿ ದೊಡ್ಡ ಬೇಳೆಯುವುದು ಮೇ, ಜೂನ್ ತಿಂಗಳಲ್ಲಿ ಇದು ಗಂಟಲು ನೋವು ಉಂಟುಮಾಡುತ್ತದೆ. ನಮ್ಮಲ್ಲಿ ಇದನ್ನು ಗಂಟಲಗಳಲ್ಲೆ ಅಂತ ಕರೀತಾರೆ.
ಎಲೆ, ಚಕ್ಕೆ, ಬೀಜ, ಹಣ್ಣು ಗಳಲ್ಲಿ ಔಷಧಿ ಗುಣ ತುಂಬಾ ಇದೆ.
1)ಪಕ್ವಗೊಂಡ ಹಣವನ್ನು ಸ್ವಚ್ಚ ಮಾಡಿ ನೆರಳಲ್ಲಿ ಒಣಗಿಸಿ ಪುಡಿ ಮಾಡಿ ಮಾವಿನ ವಾಟೆಯ ಪುಡಿಯನ್ನು ಸೇರಿಸಿ ಹುರಿದು ಸಮಪ್ರಮಾಣದಲ್ಲಿ ಅಳಲೆಕಾಯಿ ಪುಡಿ ಸೇರಿಸಿ ತೆಗೆದು ಕೊಳ್ಳುವುದರಿಂದ ಹಳೆಯ ಆಮಶಂಕೆ, ಬೇದಿ ಗುಣವಾಗುತ್ತದೆ.
2)ಸುಮಾರು 50ರಿಂದ 60 ಗ್ರಾಂ ಹಣ್ಣನ್ನು 250ಗ್ರಾಂ ನೀರುಹಾಕಿ ಕುದಿಸಿ ಮುಚ್ಚಿ ಇಡಿ. ಅರ್ಧ ಗಂಟೆಯ ನಂತರ ಕಿವುಚಿ ಸೋಸಿ ಇಟ್ಟುಕೊಂಡು ದಿನಕ್ಕೆ ಮೂರು ಬಾರಿ ಕುಡಿಯಿರಿ ಹಣ್ಣಿನ ಸಿಜನ್ ಇರುವವರಿಗೆ. ಇದರಿಂದ ಶುಗರ್ ನಾರ್ಮಲ್ ಆಗುತ್ತದೆ.
ಫೋಟೋ ಕೃಪೆ : google
3) ಸಿಜನ್ ನಲ್ಲಿ ಹಣ್ಣು ತಿನ್ನುವುದರಿಂದ ಹೊಟ್ಟೆಯಲ್ಲಿ ಸೇರಿಕೊಂಡ ಕೂದಲು ,ಕಬ್ಬಿಣದ ತುಂಡು …..ಹೊರಗೆ ಬರಲು ಸಹಾಯಕ.
4)ಇದರ ಬೀಜ ವನ್ನು ಜೇನುತುಪ್ಪ ದಲ್ಲಿ ತೈದು ಅಂಜನ ಇಟ್ಟರೆ ಕಣ್ಣಿನ ದೃಷ್ಟಿ ದೋಷ ಮತ್ತು ಪೊರೆ ನಿವಾರಣೆ ಆಗುತ್ತದೆ.
5)ಇದರ ಬೀಜ ನೆರಳಿನಲ್ಲಿ ಒಣಗಿಸಿ ಕಬ್ಬಿಣದ ಪಾತ್ರೆಯಲ್ಲಿ ಹುರಿದು ಭಸ್ಮ ಮಾಡಿ ಅರ್ಧ ಚಮಚ ಭಸ್ಮ ವನ್ನು ಜೇನುತುಪ್ಪ ಸೇರಿಸಿ ನೆಕ್ಕುತ್ತಿದ್ದರೆ ಜ್ವರ ಮತ್ತು ಅದರಿಂದ ಆಗುವ ವಾಂತಿ ನಿಲ್ಲುತ್ತದೆ.
6)ಬೀಜವನ್ನು ತೈದು ಹಚ್ಚಿದರೆ ಮೊಡವೆ ಗುಣವಾಗುತ್ತದೆ.
7)ಬೀಜವನ್ನು ತೈದು ಹಚ್ಚಿದರೆ ಚಪ್ಪಲಿ ಕಚ್ಚಿ ಆದ ಗಾಯ ಗುಣವಾಗುತ್ತದೆ.
8)ಬೀಜದ ಪುಡಿಯನ್ನು ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆ ಹಾಕಿ ಕುದಿಸಿ ಸೋಸಿ ಕಿವಿ ಗೆ ಹಾಕಿದರೆ ಕರ್ಣಸ್ರಾವ ಗುಣವಾಗುತ್ತದೆ.
9) ಸಮಭಾಗ ನೇರಳೆ ಚಕ್ಕೆ ಮತ್ತು ಮಾವಿನ ಚಕ್ಕೆ ಅರೆಬರೆ ಕುಟ್ಟಿ ಚತುರ್ಥಾಂಶ ಕಷಾಯದಲ್ಲಿ ಜೀರಿಗೆ ಪುಡಿ ಮತ್ತು ದನಿಯಾ ಪುಡಿ ಸೇರಿಸಿ ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಕೊಟ್ಟರೆ ಗರ್ಭಿಣಿ ಸ್ತ್ರೀಯರ ಅತಿಸಾರ ಗುಣವಾಗುತ್ತದೆ.ಏಕೆಂದರೆ ಇವರಿಗೆ ಆದಷ್ಟು ಕಾಳಜಿ ಬೇಕು.
ಫೋಟೋ ಕೃಪೆ : google
10)ಚಕ್ಕೆಯ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ಗಟ್ಟಿಯಾಗಿ ಬಾಯಿ ಹುಣ್ಣು ಗುಣವಾಗುತ್ತದೆ.
11) ಎಲೆಗಳನ್ನು ಪೇಸ್ಟ್ ಮಾಡಿ ದುಷ್ಟ ವೃಣಗಳಿಗೆ ಲೇಪನ ಮಾಡುವುದರಿಂದ ಗುಣವಾಗುತ್ತದೆ.
12)ಎಲೆಗಳನ್ನು ಒಣಗಿಸಿ ಸುಟ್ಟು ಬೂದಿ ಮಾಡಿ ಸೈಂಧವ ಲವಣ ಸೇರಿಸಿ ಹಲ್ಲು ಉಜ್ಜಿದರೆ ಹಲ್ಲಿನ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ.
13) ಎಳೆಯ ಎಲೆಗಳನ್ನು ಸ್ವಲ್ಪ ನೀರು ಸೇರಿಸಿ ಅರೆದು ಬೆಲ್ಲ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಯ ರಕ್ತ ಸ್ರಾವ ನಿಲ್ಲುತ್ತದೆ.
14) ಎಲೆಯ ರಸತೆಗೆದು ಕೂದಲಿಗೆ ಹಚ್ಚಿದರೆ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಸೊಂಪಾಗಿ ಬೆಳೆಯುತ್ತದೆ.
- ಸುಮನಾ ಮಳಲಗದ್ದೆ , ನಾಟಿವೈದ್ಯೆ 9980182883.