ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ವಿಧಿವಶ

ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದು ಐಎಎಸ್‌ ಸ್ಥಾನಕ್ಕೇರಿದ ಭಾರತದ ಮೊದಲ ಸಾಧಕ ಕೆ.ಶಿವರಾಮ್ ಇನ್ನಿಲ್ಲ. ಅವರಿಗೆ ಅಕ್ಷರ ನಮನಗಳು…

ಕೆ. ಶಿವರಾಮ್ ಅವರು ಡಿಸೆಂಬರ್ 15,1953 ರಂದು ಉರಗಹಳ್ಳಿ (ರಾಮನಗರ) ಜಿಲ್ಲೆಯಲ್ಲಿ ಜನಿಸಿದರು. ಅನಾರೋಗ್ಯ ಕಾರಣದಿಂದ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು ಕೆ. ಶಿವರಾಮ್ ಅವರು ಇಂದು ಹೃದಯಾಘಾತದಿಂದ ವಿಧಿವಶರಾದರು.

ಕೆಂಪಯ್ಯ, ಚಿಕ್ಕ ಬೋರಮ್ಮ ದಂಪತಿಯ ಪುತ್ರ ಶಿವರಾಮ್ ಅವರು, ಓದಿನಲ್ಲಿ ಅತ್ಯಂತ ಚೂಟಿಯಾಗಿದ್ದರು. ಸರ್ಕಾರಿ ಶಾಲೆ ಅದರಲ್ಲಿಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿ ಶಾಲಾ ಶಿಕ್ಷರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ಹೆಚ್ಚಿನ ವ್ಯಾಸಂಗಕ್ಕಾಗಿ  ಬೆಂಗಳೂರಿನ ವಿ ವಿ ಪುರಂನಲ್ಲಿ  ಪದವಿಯನ್ನು ಮುಗಿಸಿ , ಮೈಸೂರ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಎಂ ಎ ಸ್ನಾತಕೋತ್ತರ ಪದವಿ ಪಡೆದರು.

ಕೆ. ಶಿವರಾಮ್ ಅವರು ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಕೆ ಎ ಎಸ ಮತ್ತು  ಐಎಎಸ್ ಪಾಸು ಮಾಡಿದ ಮೊದಲ ಕನ್ನಡಿಗ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಒಬ್ಬ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಕನ್ನಡದ ಹೆಸರಾಂತ ನಟರಾಗಿಯೂ ಪ್ರಖ್ಯಾತಿ ಹೊಂದಿದ್ದಾರೆ. ಬಾ ನಲ್ಲೆ ಮಧು ಚಂದ್ರಕೆ, ವಸಂತ ಕಾವ್ಯ, ಯಾರಿಗೆ ದುಡ್ಡು ಬೇಡ,
ಖಳನಾಯಕ, ಪ್ರತಿಭಟನೆ, ಗೇಮ್ for ಲವ್ ಸೇರಿದಂತೆ ಹಲವಾರು ಸಿನಿಮಾ ನಾಯಕ ನಟನಾಗಲಿ ಮತ್ತು  ಬೆಹಕೆ ಕದಂ, ಜಲ್ತಾ ಬದನ್, ಭೋಲಿ ಭಾಲಿ ಲಡ್ಕಿ ಎನ್ನುವ ಬಾಲಿವುಡ್ ಸಿನಿಮಾಗಳಿಗೂ ನಿರ್ಮಾಪಕರಾಗಿ ಜನಮನ ಗೆದ್ದವರು. ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿ ಅಲ್ಲಿಯೂ ಸೈ ಅನಿಸಿಕೊಂಡವರು.

1993 ರಲ್ಲಿ ತೆರೆ ಕಂಡ ನಾಗತಿಹಳ್ಳಿ ನಿರ್ದೇಶನದ ಕನ್ನಡ ಸಿನಿಮಾ “ಬಾ ನಲ್ಲೆ ಮಧುಚಂದ್ರಕೆ ” ತುಂಬಾ ಕೆ.ಶಿವರಾಮ್ ಅವರಿಗೆ ಅತಿ ಯಶಸ್ಸು ತಂದು ಕೊಟ್ಟ ಪ್ರೇಮ ಕಥೆಯ ಚಿತ್ರ. ಈ ಚಿತ್ರದ ಹಾಡುಗಳು ಮತ್ತು ಕಥೆ ಪ್ರೇಕ್ಷಕರನ್ನು ಚಿತ್ರ ಮಂದಿರದತ್ತ ಸೆಳೆಯಲು ಮುಖ್ಯ ಕಾರಣ ಕತೆಯಲ್ಲಿದ್ದ ಖಡಕ್ ಪೊಲೀಸ್ ಅಧಿಕಾರಿ ಮತ್ತು ಅದರ ಸುತ್ತ ಇದ್ದ ಕತೆ ಪ್ರೇಕ್ಷಕರ ಮನಗೆಲ್ಲಲು ಸಾಧ್ಯವಾಯಿತು. ಶಿವರಾಮ್ ಅವರಿಗೆ  ಭರ್ಜರಿ ಯಶಸ್ಸು ತಂದುಕೊಟ್ಟ ಸಿನಿಮಾ. ‘ಪ್ರತಿಭಟನೆ’ ಎನ್ನುವ ಸಿನಿಮಾ ಹೋರಾಟದ ಕತೆಯಾಗಿದ್ದು, ಅದರಲ್ಲಿನ ಅವರ ಅಭಿನಯ ಶಿವರಾಮ ಅವರಿಗೆ ಇನ್ನಷ್ಟು ಉತ್ತುಂಗಕ್ಕೆ ಏರಿಸಿತು. ಮುಂದೆ ಹಲವಾರು ಸಿನಿಮಾಗಳಲ್ಲಿ ನಾಯಕ ನಟನಾಗಿ ಬಣ್ಣ ಹಚ್ಚುವುದರ ಮೂಲಕ ಜನರ ಪ್ರೀತಿ ಸಂಪಾದಿಸಿದರು.

ಎಷ್ಟೋ ಸಲ ಚಪ್ಪಲಿ ಇಲ್ಲದೇನೇ ನಾನು ಶಾಲೆಗೆ ಹೋಗಿದ್ದೇನೆ. ನಾನು SSLC ಯಲ್ಲಿ ಫೇಲ್ ಕೂಡಾ ಆಗಿದ್ದೆ, ನನ್ನಲ್ಲಿ ಚಿಕ್ಕವನಿರುವಾಗಲೇ ಐಎಎಸ್ ಮಾಡಬೇಕು ಎನ್ನುವ ಛಲವಿತ್ತು. ನಾನು ಕನ್ನಡದಲ್ಲಿ ಐಎಎಸ್ ಪರೀಕ್ಷೆ ತೇರ್ಗಡೆ ಮಾಡಿದೆ ಎಂದು ಮಾಧ್ಯಮಗಳ ಮುಂದೆ ತಾವು ನಡೆದು ಬಂದ ಕಠಿಣ ದಾರಿಯ ಬಗ್ಗೆ ಹೇಳಿದ್ದರು.

1985 ರಲ್ಲಿ ಕೆ ಎ ಎಸ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. 2013ರಲ್ಲಿ ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ, ನಿವೃತ್ತರಾದ ನಂತರ ಭಾರತೀಯ ಕಾಂಗ್ರೆಸ್ ಗೆ ಸೇರ್ಪಡೆ ಮತ್ತೆ ಅದೇ 2013ರಲ್ಲಿ ಬಿಜೆಪಿಗೆ ಸೇರಿಕೊಂಡು ದಲಿತರಿಗಾಗಿ ಹೋರಾಟ ಕೈಗೊಂಡ ವ್ಯಕ್ತಿ ಒಬ್ಬ ನಟ, ನಿರ್ದೇಶಕ, ನಿರ್ಮಾಪಕ ಕೆ. ಶಿವರಾಮ್ ಅವರು.

ಅವರು ತಮ್ಮ ೭೦ ನೆಯ ವಯಸ್ಸಿನಲ್ಲಿ  ಬಂಧುಮಿತ್ರರನ್ನು ಮತ್ತು ಸಾಕಷ್ಟು ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ .  ಇಂತಹ ಧೀಮಂತ ಕನ್ನಡ ನಾಯಕನಿಗೆ ನಮ್ಮೆಲ್ಲರ ಒಂದು ನಮನ….. ಕನ್ನಡ ಜನಮನದಲ್ಲಿ ಅಚ್ಚಳಿಯಾಗಿ ಉಳಿದಿದ್ದಾರೆ.


  • ಡಾ. ಕೃಷ್ಣವೇಣಿ. ಆರ್.ಗೌಡ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW