ಕರುನಾಡಿನ ಜೀವ – ತುಂಗಭದ್ರೆ

ತುಂಗಭದ್ರಾ ನದಿಯು ದಕ್ಷಿಣ ಭಾರತದಲ್ಲಿ ಹುಟ್ಟಿದ್ದು,ತುಂಗಭದ್ರಾ ನದಿಯು ಹಲವಾರು ಅಣೆಕಟ್ಟುಗಳನ್ನು ಹೊಂದಿದ್ದು. ಅವುಗಳಲ್ಲಿ ಪ್ರಮುಖವಾದವು ಈ ನದಿಗೆ ಅಡ್ಡಲಾಗಿ ಗಾಜನೂರಿನಲ್ಲಿ ಶಿವಮೊಗ್ಗದಿಂದ ಸುಮಾರು 15 ಕಿಮೀ ದೂರದಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಅವಿನಾಶ ಸೆರೆಮನಿ ಅವರು ‘ನದ – ನದಿಗಳ ನಿನಾದ’ ಅಂಕಣದಲ್ಲಿ ತುಂಗಭದ್ರಾ ನದಿ ಕುರಿತಾಗಿದ್ದು , ತಪ್ಪದೆ ಮುಂದೆ ಓದಿ…

ದಕ್ಷಿಣ ಭಾರತದ ಜನರ ಉಸಿರಾಗುತ ಪ್ರಕೃತಿಯ ಸೌಂದರ್ಯದ ರಮಣಿ, ಸಸ್ಯ ಸಂಕುಲದ ಜೀವಾಳು, ದೇವಾಲಯಗಳನ್ನು ಒಡಲೊಳಗಿಟ್ಟು ಪೋಷಿಸುವ ದೇವತೆ, ಸುತ್ತಮುತ್ತಲಿನ ಭೂಮಿಗಳ ದಾಹವನ್ನು ತಣಿಸುವ ಗಂಗಾಮಾತೆ, ಪ್ರಾಕೃತಿಕ ಸಂಪನ್ಮೂಲಗಳನು ಹೆಚ್ವಿಸುತ ಪರಿಸರಕೆ ಚೆಲುವನು ಧಾರೆಯೆರೆಯುತ ಆಗಸವನ್ನೇ ನಿಬ್ಬೆರಗಾಗಿಸುವ ಸುತ್ತಲಿನ ನಿಸರ್ಗದ ರಮಣೀಯ ದೃಶ್ಯಗಳ ರೂಪಕ,ಕಲ್ಲು ಕಲ್ಲುಗಳಿಗೂ ಜೀವ ತುಂಬಿದ ಗಂಗಾ ಮಾತೆ. ಬೆಟ್ಟ ಗುಡ್ಡಗಳಲಿ ವಯ್ಯಾರದಿ ಹರಿಯುವ ಬೆಡಗಿ,ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಕಿ,ಪ್ರಕೃತಿಯ ಮಡಿಲು ಪೋಷಿಸುವ ಗಂಗಾ ತಾಯಿಯೇ ತುಂಗಭದ್ರೆ.

ತುಂಗಭದ್ರಾ ನದಿಯು ದಕ್ಷಿಣ ಭಾರತದಲ್ಲಿ ಹುಟ್ಟಿದ್ದು ತನ್ನದೆಯಾದ ವಿಶಿಷ್ಟತೆಯಿಂದ ಹೆಸರನು ಗಳಿಸಿದೆ.ತುಂಗಾ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಸೇರಿದ್ದರಿಂದ ನದಿಗೆ ತುಂಗಾಭದ್ರಾ ಎಂದು ಹೆಸರಿಡಲಾಯಿತು.ಈ ನದಿಯು ಕರ್ನಾಟಕದಲ್ಲಿಯೇ ಹೆಚ್ಚಿನ ಪ್ರದೇಶವನ್ನು ಆವರಿಸಿದ್ದು,ಪ್ರಸಿದ್ದ ದೇವಾಲಯಗಳು ಕೂಡ ಇದರ ತಟದಲ್ಲಿಯೇ ನೆಲೆಸಿವೆ.ಅವುಗಳಲ್ಲಿ ಪ್ರಮುಖವಾದವು.ಹರಿಹರದ ಈ ನದಿ ದಡದಲ್ಲಿರುವ ಹರಿಹರೇಶ್ವರ ದೇವಾಲಯ,ಗದಗ ಜಿಲ್ಲೆಯ ರೇಣುಕಾದೇವಿಯ ಬಿದರಲ್ಲಮ್ಮ ದೇವಸ್ಥಾನ,ಹಂಪಿಯ ವಿಜಯನಗರ ದೇವಾಲಯ,ಶಿವಾಪುರದ ಶಿವನ ಮಾರ್ಕಂಡೇಶ್ವರ ದೇವಾಲಯ,ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿರುವ ಪಂಪಾವತಿ ದೇವಸ್ಥಾನ.ಹೀಗೆ ಅನೇಕ ದೇವಾಲಯಗಳು ನೆಲೆಗೊಂಡಿವೆ.

ತುಂಗಭದ್ರಾ ನದಿಯು ಹಲವಾರು ಅಣೆಕಟ್ಟುಗಳನ್ನು ಹೊಂದಿದ್ದು. ಅವುಗಳಲ್ಲಿ ಪ್ರಮುಖವಾದವು ಈ ನದಿಗೆ ಅಡ್ಡಲಾಗಿ ಗಾಜನೂರಿನಲ್ಲಿ ಶಿವಮೊಗ್ಗದಿಂದ ಸುಮಾರು 15 ಕಿಮೀ ದೂರದಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಭದ್ರಾ ನದಿಗೆ ಅಡ್ಡಲಾಗಿ ಸುಮಾರು 15ಕಿಮೀ ಲಕ್ಕವಲಿಯಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ.ಈ ಅಣೆಕಟ್ಟುಗಳು ಸಾವಿರಾರು ಹೆಕ್ಟೇರ್ ಭೂಮಿಗಳಿಗೆ ವರದಾನವಾಗಿವೆ. ಅಲ್ಲದೆ ಬಹುಪಯೋಗಿ ಉದ್ದೇಶಗಳಾದ ವಿದ್ಯುತ್ ಉತ್ಪಾದನೆ,ನೀರಾವರಿ,ಪ್ರವಾಹ ತಡೆಗಟ್ಟುವಿಕೆ ಮತ್ತು ನಿಯಂತ್ರಣದಂತ ಮುಖ್ಯ ಉದ್ದೇಶಗಳನ್ನು ಹೊಂದಿವೆ.
ತುಂಗಭದ್ರಾ ಅಣೆಕಟ್ಟನ್ನು ಬಹುಪಯೋಗಿ ಅಣೆಕಟ್ಟು ಎಂದು ಪರಿಗಣಿಸಿದ್ದಾರೆ.ಈ ಅಣೆಕಟ್ಟು ಹೊಸಪೇಟೆಯ ಹತ್ತಿರವಿದ್ದು.ಇದು 135 ಟಿ ಎಂ ಸಿಯಷ್ಟು ನೀರು ಸಂಗ್ರಹಣ ಸಾಮರ್ಥ್ಯವನ್ನು ಹೊಂದಿದೆ.ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತದೆ ಆಗ ಕಾಲುವೆಗಳಿಗೆ ನೀರು ಬಿಡಲಾಗುತ್ತದೆ.ಇಲ್ಲದಿರೆ ಸುತ್ತಲಿನ ಪ್ರದೇಶಗಳು. ಪ್ರವಾಹದ ಭೀತಿಯನ್ನು ಎದುರಿಸುತ್ತವೆ.ಈ ಅಣೆಕಟ್ಟಿನ ನಿರ್ಮಾತೃ ವಾಸ್ತುಶಿಲ್ಪಿ , ಮದ್ರಾಸಿನ ಪ್ರಸಿದ್ಧ ಇಂಜನಿಯರರಾದ ತಿರುಮಲೈ ಅಯ್ಯಂಗಾರ.ಈ ಅಣೆಕಟ್ಟು ಪ್ರವಾಸಿಗರ ತಾಣವಾಗಿ ಮಾರ್ಪಟ್ಟಿದ್ದು ಸರ್ಕಾರವು ಕೂಡ ಜನರನ್ನು ಸೆಳೆಯಲು ವಿವಿಧ ರೀತಿಯಲ್ಲಿ ಕಾರಂಜಿಯ ಸಂಗೀತವನ್ನು ಅಳವಡಿಸಿ ಇದರ ಆಭಿವೃದ್ಧಿಗೆ ಶ್ರಮಿಸುತ್ತಿದೆ.ತುಂಗಭದ್ರಾ ಅಣೆಕಟ್ಟನ್ನು ಪಂಪಾಸಾಗರ ಎಂದು ಕರೆಯುವರು.
ತುಂಗಭದ್ರಾ ಡ್ಯಾಂ ಪಾರಂಪರಿಕ, ಐತಿಹಾಸಿಕ ತಾಣವಾದ ಹಂಪಿ ಬಳಿ ಇದೆ.

ಕರ್ನುಲ್ ಸಮೀಪವಿರುವ ಸುಂಕೆಸೂಲಾ ಬ್ಯಾರೇಜ್ ಅಣೆಕಟ್ಟು 1860ರ ಸುಮಾರಿಗೆ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಅಣೆಕಟ್ಟಿಗೆ ಬ್ರಿಟಿಷ್ ಇಂಜಿನಿಯರ್ ಸರ್ ಅರ್ಥರ್ ಕಾಟನ್ ರಾಯಲಸೀಮೆಗೆ ಭಗೀರಥ ಎಂದು ಶ್ಲಾಘಿಸಿದರು.ಇದನ್ನು ಬ್ರಿಟಿಷ್ ಕಾಲದಲ್ಲಿ ನೌಕಾಯಾನಕ್ಕಾಗಿ ಬಳಸುತ್ತಿದ್ದರು.ಕಡಪ ಜಿಲ್ಲೆಗೆ ನೀರಾವರಿ ಸೌಲಭ್ಯ ಒದಗಿಸಲು ವಿಜಯ ಭಾಸ್ಕರ ರೆಡ್ಡಿಯವರು ತುಂಗಭದ್ರಾ ಬ್ಯಾರೇಜ್ ಆಗಿ ಪುನ ನಿರ್ಮಿಸಿದರು.ಅಲ್ಲದೆ ಇದು ಸಮಾರು 300 ,000 ಪ್ರಮಾಣದಷ್ಟು ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ.

ಇಂದಿನ ತುಂಗಾಭದ್ರಾ ನದಿಯ ವಾಸ್ತವ ಸ್ಥಿತಿಯನ್ನು ಅವಲೋಕಿಸಿದಾಗ ಹಲವಾರು ಸಮಸ್ಯೆಗಳು ನದಿಯನ್ನು ಸುತ್ತುವರಿದಿವೆ. ಪ್ರಮುಖವಾದ ಸಮಸ್ಯೆಯೆಂದರೆ ನದಿಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿಕೊಡಿದ್ದು ನೀರು ಸಂಗ್ರಹಣಾ ಸಾಮರ್ಥ್ಯ ಬರಿ 35 ಟಿ ಎಂ ಸಿ.ಅಲ್ಲದೆ ಕೈಗಾರಿಕೆಗಳು ಬಿಡುವ ವಿಷಪೂರಿತವಾದ ಹೊಗೆಯಿಂದ ಮಾಲಿನವಾಗುತ್ತಿದೆ. ಕರ್ನಾಟಕದ ಈ ನದಿ ಹರಿಯುವ ಜಿಲ್ಲೆಗಳಾದ ಶಿವಮೊಗ್ಗ, ಹಾವೇರಿ, ದಾವಣಗೆರೆ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಕೈಗಾರಿಕೆ ಮತ್ತು ಗಣಿಗಾರಿಕೆ ಅಪಾರ ಪ್ರಮಾಣದ ಕೈಗಾರಿಕಾ ತ್ಯಾಜ್ಯವನ್ನು ಉತ್ಪಾದಿಸುತ್ತದೆ.ಶಿವಮೊಗ್ಗದಿಂದ ಸುಮಾರು 30 ಮಿಲಿಯನ್ ಲೀಟರ್ ತ್ಯಾಜ್ಯವನ್ನು ತುಂಗಾಕೆ ಬಿಡಲಾಗಿದೆ.ಇದರ ಪರಿಣಾಮ ತುಂಗಭದ್ರಾ ನದಿ ದೇಶದ ಅತ್ಯಂತ ಮಾಲಿನ್ಯ ನದಿಗಳಲ್ಲಿ ಒಂದಾಗಿದೆ. ಕೈಗಾರಿಕೆಗಳಿಂದ ಬಿಡುವ ಮಲಿನ ನೀರು ಕಂದು ಬಣ್ಣಕ್ಕೆ ತಿರುಗಿದು ದುರ್ವಾಸನೆಯನ್ನು ಹೊಂದಿದೆ. ಈ ನದಿಯ ಮಾಲಿನ್ಯವು ಜನಜೀವನದ ಮೇಲೆ ಅಪಾರ ದುಷ್ಪರಿಣಾಮ ಬೀರಿದೆ.ಏಕೆಂದರೆ ಅಧಿಕ ಹಳ್ಳಿಗಳು ನೀರಾವರಿ, ಕುಡಿಯುವ ನೀರಿಗಾಗಿ,ಮೀನುಗಾರಿಕೆ, ಜಾನುವಾರುಗಳಿಗೆ,ಸ್ನಾನ ಮಾಡಲು ಬಳಸುತ್ತಾರೆ.ಮಾಲಿನ್ಯದಿಂದ ಅಪಾರ ಮೀನುಗಳು ಸಾವನಪ್ಪಿವೆ.ಇದರಿಂದ ನದಿಯನ್ನೇ ನಂಬಿ ಬದುಕುತ್ತಿರುವ ಮೀನುಗಾರರ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ.

ಒಟ್ಟಿನಲ್ಲಿ ತುಂಗಭದ್ರಾ ನದಿಯು ದಿನೇ ದಿನೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಸರ್ಕಾರವು ಕೈಗಾರಿಕೆಗಳ ತ್ಯಾಜ್ಯವನ್ನು ಬೇರೆಡೆ ಸಾಗಿಸುವ ವ್ಯವಸ್ಥೆ ಮಾಡಬೇಕು. ತುಂಗಭದ್ರಾ ನದಿಯನ್ನು ಉಳಿಸುವ ಅಭಿಯಾನ ಹಮ್ಮಿಕೊಂಡು ಜನರಿಗೆ ಮನವರಿಕೆ ಮಾಡಬೇಕು.ಈ ನದಿ ಸಂರಕ್ಷಿಸುವ ಸಂಪೂರ್ಣ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಹಿಂದಿನ ಸಂಚಿಕೆಗಳು :


  • ಅವಿನಾಶ ಸೆರೆಮನಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW