ವೈ ಜಿ ಅಶೋಕ್ ಕುಮಾರ್ ಅವರ ಲೇಖನಿಯಲ್ಲಿ ಮೂಡಿದ ಪ್ರೇಮ ಕವಿತೆ . ತಪ್ಪದೆ ಮುಂದೆ ಓದಿ…
ಯಾರಿಗೆ ಭೇಟಿ ಮಾಡುವ ಅವಕಾಶವೇ ಸಿಗುವುದಿಲ್ಲವೋ
ಅವರಿಗೆ ಪ್ರೇಮ
ಎಂಬುದು ಅತ್ಯದ್ಭುತವಾಗಿ
ಕಾಣಿಸುತ್ತದೆ.
ಯಾರಿಗೆ ಪ್ರೇಮದ ಭಾಷೆ ತಿಳಿಯುತ್ತದೋ
ಅವರಿಗೆ ಕಣ್ಣು ರೆಪ್ಪೆಯ ಪಿಸು ಮಾತುಗಳು ಅರ್ಥವಾಗುತ್ತದೆ.
ಯಾರ ಹೃದಯ ಪ್ರೇಮದ ನೋವಿಗೆ ತುತ್ತಾಗಿರುತ್ತದೋ ಅವರಿಗೆ ಮತ್ತೊಂದು
ನೊಂದ ಹೃದಯ ಕಾಣಿಸುತ್ತದೆ.
ಯಾರಿಗೆ ಪ್ರೇಮವೇ ಧ್ಯಾನವಾಗಿರುತ್ತದೋ
ಅವರಿಗೆ
ಮೌನದ ಕತ್ತಲಿನಲ್ಲೂ
ಪ್ರೇಮದ ಬೆಳಕು
ಪ್ರಜ್ವಲಿಸುತ್ತದೆ
- ವೈ ಜಿ ಅಶೋಕ್ ಕುಮಾರ್
