60 ರ ದಶಕದಲ್ಲಿ ಬಾಂಬೆಯಲ್ಲಿ ಎಷ್ಟೋ ಹುಡುಗರು ಬೂಟು ಪಾಲೀಷು ಮಾಡಿ ಜೀವನ ಸಾಗಿಸುವುದು ಸ್ವಾಭಿಮಾನದ ಸಂಕೇತವಾಗಿತ್ತು. 50 ಪೈಸೆಗೂ ಪಾಲೀಷು ಹಾಕಿ ಬೂಟುಗಳ ಹೊಳೆಯುವಂತೆ ಮಾಡಿ ಕಳಿಸುತ್ತಿದ್ದರು. ಡಾ. ಕೃಷ್ಣವೇಣಿ. ಆರ್. ಗೌಡ ಅವರ ಲೇಖನಿಯಲ್ಲಿ ಮೂಡಿಬಂದ ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡ ಸ್ಥಾನ.ತಪ್ಪದೆ ಮುಂದೆ ಓದಿ…
12 ನೇ ಶತಮಾನದಲ್ಲಿ ಹರಳಯ್ಯ ಮತ್ತು ಈತನ ಹೆಂಡತಿ ಚಮ್ಮಾರಿಕೆಯ ಕಾಯಕದಲ್ಲಿ ತೊಡಗಿ, ತಮ್ಮ ತೊಡೆಯ ಚರ್ಮದಿಂದ ಬಸವಣ್ಣ ನಿಗೆ ಆವುಗೆಗಳನ್ನು (ಪಾದರಕ್ಷೆ )ಗಳನ್ನು ಮಾಡಿ ಕೊಟ್ಟಿದ್ದರಂತೆ. ಯಾವುದೇ ಕುಲ, ಮತ, ಭೇದವಿಲ್ಲದ ಈ ಕಲ್ಯಾಣದಲ್ಲಿ ಅವರವರ ಕಾಯಕದಲ್ಲಿ ತೊಡಗುವುದು ಒಂದು ಮಹತ್ ಸಾಧನೆಯಾಗಿತ್ತು. ಅಂದಿನ ಯುಗಕ್ಕೂ ಇಂದಿನ ಯುಗಕ್ಕೂ ತುಲನೆ ಮಾಡಿದಾಗ ಜಾತಿಗೊಂದು ಕಲೆ ಎನ್ನುವ ಹಾಗೆ ಯಾವುದೇ ಕಲ್ಮಶವಿಲ್ಲದೆ ಎಲ್ಲಾ ಮನುಷ್ಯ ಜಾತಿಯ ಚಪ್ಪಲಿಯ ಹೊಲಿದು ಪಾದರಕ್ಷೆಗಳ ಮಾಡಿಕೊಡುವುದು ಜಾತ್ಯತೀತ ಕಾಯಕ ಎಂದರೂ ತಪ್ಪಾಗಲ್ಲ.

ಹೀಗೆ ಮೊನ್ನೆ ನನ್ನ ಮಗನ ಶಾಲೆಯ ಬೂಟು ಕಿತ್ತಿ ಹೋಗಿತ್ತು. ಅದನ್ನು ಸರಿ ಮಾಡಿಸಲು ಹೋದಾಗ ಎಲ್ಲಾ ಅಂಗಡಿ ಮುಗ್ಗಟ್ಟುಗಳ ನಡುವೆ ಒಂದು ಸಣ್ಣ ಛತ್ರಿಯಡಿಯಲ್ಲಿ ಕೂತು ಪ್ರತಿಯೊಬ್ಬರ ಪಾದರಕ್ಷೆಯನ್ನು ಹೊಲಿದು, ಅದಕ್ಕೆ ಪಾಲಿಶ್ ಹಾಕಿ ಹೊಳೆಯುವಂತೆ ಮಾಡುವ ಅವರ ಕಾಯಕ ನೋಡಿ ಮನ ಪುಳಕಿತವಾಯಿತು. ಯಾವುದೇ ಬೇಸರವಿಲ್ಲದೇ ಕಾಲಲ್ಲಿ ಬಿಟ್ಟಿದ್ದನ್ನು ಕೈಯಲ್ಲಿ ಹಿಡಿದು ಹೊಲಿಗೆ ಹಾಕಿ ಜನ ಜಂಗುಳಿಯ ಸ್ನೇಹ ಮಾಡುತ್ತಾ ನಿಷ್ಠೆಯಿಂದ ದುಡಿದು ಜೀವನ ಸಾಗಿಸುವ ಆ ಕಲೆಯ ವ್ಯಕ್ತಿತ್ವ ನಿಜಕ್ಕೂ ದೊಡ್ಡ ಆಗರ.
ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡ ಸ್ಥಾನ. ಹಾಗೇ ಈ ವ್ಯಕ್ತಿತ್ವಕ್ಕೆ ಬೆರಗಾದೆ. ಎಲ್ಲರಿಗೂ ಎಲ್ಲಾ ಕಲೆ ಬರೋಲ್ಲ. ಯಾವುದನ್ನು ಯಾರ ಹತ್ತಿರ ಮಾಡಿಸಬೇಕೋ ಅವರ ಹತ್ತಿರನೇ ಹೋಗಬೇಕು. ಚರ್ಮ ಹದಗೊಳಿಸುವ ಕಲ್ಲು, ಸುತ್ತಿಗೆ, ಡಬ್ಬಣ, ಸೂಜಿ, ಗಟ್ಟಿ ದಾರ, ಪಾಲೀಷು ಇವೆಲ್ಲ ನೋಡ ನೋಡುತ್ತಲೇ 5, 6 ಚಪ್ಪಲಿಗಳು ಸಿದ್ದವಾಗುತ್ತಿದ್ದವು. 60ರ ದಶಕದಲ್ಲಿ ಬಾಂಬೆಯಲ್ಲಿ ಎಷ್ಟೋ ಹುಡುಗರು ಬೂಟು ಪಾಲೀಷು ಮಾಡಿ ಜೀವನ ಸಾಗಿಸುವುದು ಸ್ವಾಭಿಮಾನದ ಸಂಕೇತವಾಗಿತ್ತು. 50 ಪೈಸೆಗೂ ಪಾಲೀಷು ಹಾಕಿ ಬೂಟುಗಳ ಹೊಳೆಯುವಂತೆ ಮಾಡಿ ಕಳಿಸುವುದು ಅಘಮ್ಯ.

ಕೆ. ವಿಶ್ವನಾಥ್ ನಿರ್ದೇಶನದ ಚಿರಂಜೀವಿ, ವಿಜಯ ಶಾಂತಿ ಅಭಿನಯದ ತೆಲುಗು ಸಿನಿಮಾ “ಸ್ವಯಂ ಕೃಷಿ ” ನೆನಪಾಗ ತೊಡಗಿತು. ದೇವಸ್ಥಾನಕ್ಕೆ ಹೋಗಿ ಬರುವವರ ಚಪ್ಪಲಿಗಳನ್ನು ಕಾಯುವುದರಿಂದ ಹಿಡಿದು ಸಣ್ಣ ಬಂಡವಾಳ ದಲ್ಲಿ ಚಪ್ಪಲಿ ಅಂಗಡಿ ತೆಗೆದು ದೊಡ್ಡ ಮಳಿಗೆಯ ಮೂಲಕ ಕಾಯಕ ಎನ್ನುವ ಕೃಷಿ ಮಾಡುವುದರ ಮೂಲಕ ಮೆಚ್ಚುಗೆಯ ಪಾತ್ರ ನೈಜ ಜೀವನ ದ ವ್ಯಕ್ತಿಗತ ವನ್ನು ಎತ್ತಿ ಹಿಡಿಯುತ್ತದೆ.
ಹೀಗೆ ಕಾಯಕದ ತತ್ವದ ದಾರಿ ಸಾಗಿಸುವ ಜಟಕಾ ಬಂಡಿ ಯಾವ ದೌರ್ಬಲ್ಯಕ್ಕೂ ಕಡಿಮೆ ಇಲ್ಲ. ನೈರ್ಮಲ್ಯದ ಭಾವಕ್ಕೆ ದೇಹ ಭಾಗಿ ಮಾಡುವ ಆತ್ಮಾ ಭಿಮಾನದ ಕಸೂತಿಯ ವ್ಯಕ್ತಿತ್ವವನು ಬರವಣಿಗೆ ಮೂಲಕ ಅರ್ಪಿಸ ಬೇಕೆನಿಸಿತು.. ಪಾದರಕ್ಷೆ ಯಲಿ ಹಲವಾರು ರೀತಿಯ ಮಾಡೆಲ್ ಗಳಿದ್ದರೂ ಅವು ಹರಿದು ಹೋದಾಗ ನಾವು ಹೋಗುವುದೇ ಇವರ ಹತ್ತಿರ…
ಆದ್ದರಿಂದ ಈ ಜಾತ್ಯತೀತ ನೆಲ ಸಮಾಜದಡೀ ಬದುಕುವ ಪ್ರತಿಯೊಂದಕ್ಕೂ ಹಕ್ಕಿದೆ. ಅದನ್ನು ಹತ್ತಿಕ್ಕಿ ಕೀಳಾಗಿ ಕಾಣುವ ಬದಲು ಆ ಕಲೆಗೆ ಪ್ರೋತ್ಸಾಹ ಕೊಟ್ಟಾಗ ಈ ಜಗತ್ತೊಳು ಎಲ್ಲವು ಅಮರ. ಇಲ್ಲಿ ಯಾರೂ ಮೇಲು, ಕೇಳಿಲ್ಲ ದೈವ ಸೃಷ್ಟಿಯಲಿ “ಮಾನವ ಜಾತಿ ತಾನೊಂದೇ ವಲಂ”.
ಪ್ರಶ್ನೆಗಳ ತಾರ್ಕಿಕತೆಗೆ ನ್ಯಾಯ ಕಣ್ಮುಚ್ಚಿಕೊಂಡ ಕರಿಪಟ್ಟಿಯಾಗುವುದು ಬೇಡ,, ಕತ್ತಲ ಕೋಣೆಯೊಳು ಬೆಳಕಿನ ಪಲ್ಲಟ
- ಡಾ. ಕೃಷ್ಣವೇಣಿ. ಆರ್. ಗೌಡ
