ಭಕ್ತಿ ಪಂಥದಲ್ಲಿ ಕನಕದಾಸರು ಅಗ್ರಮಾನ್ಯರು. ಜಾತಿ-ಮತ ಭೇದವನ್ನು ಧಿಕ್ಕರಿಸಿ ಶ್ರೀ ಹರಿಯ ಆರಾಧನೆಯಲ್ಲಿ ತಮ್ಮನ್ನು ಮೀಸಲಿರಿಸಿದವರು,” ಕುಲ ಕುಲವೆಂದೂ ಹೊಡೆದಾದಿರಿ… ನಿಮ್ಮ ಕುಲದ ನೆಲೆ ಕಂಡಿರಾ ” ಎಂದು ಎಚ್ಚರಿಸಿವರು ನಮ್ಮ ಕನಕದಾಸರು. ಸರ್ವರಿಗೂ ಕನಕದಾಸ ಜಯಂತಿಯ ಶುಭಾಶಯಗಳು. ಕವಿಯತ್ರಿ ರೇಶ್ಮಾಗುಳೇದಗುಡ್ಡಾಕರ್ ಒಂದು ಕವನ.
ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ . ಇಲ್ಲಿಯ ವರೆಗೆ ಒಟ್ಟು 316 ಕಿರ್ತನೆಗಳು ಲಭ್ಯವಾಗಿವೆ. ಕರ್ನಾಟಕ ಕೀರ್ತನ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ.
ಎಲೆ ,ಹೂ,ಹಣ್ಣು, ಜಲ.
ಅರ್ಪಿಸಲು ಸಾದ್ಯವಿಲ್ಲ ಶ್ರೀ ಹರಿ …..
ನಿತ್ಯ ನನ್ನೊಳಗೆ ಉದಯಿಸುವ
ಸಂಕಟ,ನಿರಾಶೆ ,ಬಯಕೆಗಳ ಆರ್ಪಿಸಲೇ
ನಿನ್ನ ಪಾದದಡಿಗೆ ….!?
ಬಿಸಿ ಪಾಯಸ,ಕಜ್ಜಾಯ,
ಪಾಂಚಾಮೃತವ ಅರ್ಪಿಸಲು
ನಾ ಶಕ್ತಳಿಲ್ಲ ಕಾಯಜಾಪಿತನೇ ….
ಕಾಡುವ ಭವಬಂಧನಗಳು,
ಸುತ್ತಿ ನಿಂದನೆಗಳು ,ಗಾಳಿಮಾತುಗಳ
ನೈವೇದ್ಯಗೆ ಇಡಲೇ ನಿನ್ನ ಆರಾಧನೆಗೆ ….!?
ಮಠ ,ಮಂದಿರವ
ನಿರ್ಮಿಸಿ ವಿಜೃಂಬಣೆಯ
ಪೂಜೆಯ ಮಾಡಿ ಆರ್ಭಟದ ತೋರಿಕೆ
ಜಪವ ಮಾಡಲು ನಾ ಯೋಗ್ಯಳಿಲ್ಲ
ಹೇ..ಆದಿಕೇಶವರಾಯ …
ಸುಳಿಸುಳಿದು ಬೆಂಬತ್ತಿರುವ ವೈಫಲ್ಯಗಳ
ಒಪ್ಪಿಸಲೇ ನಿನ್ನ ಪೊಜೆಗೆ …..!
- ರೇಶ್ಮಾಗುಳೇದಗುಡ್ಡಾಕರ್