ಕಟೀಲಮ್ಮನ ಮಹಿಮೆ ಕುರಿತು ಕವಿಯತ್ರಿ ಸವಿತಾ ಅರುಣ್ ಶೆಟ್ಟಿ ಅವರು ಭಕ್ತಿಪೂರ್ವಕವಾಗಿ ಬರೆದ ಪದ್ಯವಿದು…ಕಟೀಲಮ್ಮನ ಆಶೀರ್ವಾದ ಎಲ್ಲರ ಮೇಲಿರಲಿ…
ನೀನೊಂದು ಸುಂದರ ಮಾಯೆ
ಓ ಜಗನ್ಮಾತೆ,ನೀ ಎಮ್ಮ ಪೊರೆಯೆ
ನೀ ನಿತ್ಯ ಸತ್ಯ ಸುಂದರಿ
ಕಟೀಲಿನಲಿ ನೆಲೆ ನಿಂತ ಶ್ರೀ ಭ್ರಾಮರಿ
ಭಕ್ತಿಯ ಪ್ರಾರ್ಥನೆಯ ನೀ ಆಲಿಸು
ಸದಾ ಮನದಲ್ಲಿ ನೀನೇ ನೆಲೆಸು .
ಭಗವದ್ಭಕ್ತಿಯಿಂದಲೇ ಜೀವನ ಪಾವನ
ನಿನ್ನ ದಯೆಯಿಂದಲೇ ಸುಮಧುರವಾಗಲಿ ಜೀವನಗಾನ
ಆಚರ ಸಚರಗಳಲಿ ಜೀವ ಸಂಚಲನ
ಹರಿಸಲಿ ನಿನ್ನ ಕೀರ್ತನೆ ,ಭಕ್ತಿಗಾಯನ.
ಸಕಲ ಜೀವಕೋಟಿಗಳ ಅಮ್ಮ ನೀನು
ಸಕಲ ಭಗವದ್ಭಕ್ತರ ಸ್ಫೂರ್ತಿ ನೀನು
ನಿನ್ನೊಲುಮೆಯಿರಲಿ ,ತಾಯೆ ಭ್ರಮರಾಂಬೆ .
ನೀನಿಲ್ಲದಿರೆ ಜಗವೇ ಇಲ್ಲವೆಂಬೆ
ಅಮ್ಮ, ನೀನೊಂದು ಸುಂದರ ಮಾಯೆ
ಓ ಜಗನ್ಮಾತೆ, ನೀ ಎಮ್ಮ ಪೊರೆಯೆ.
- ಸವಿತಾ ಅರುಣ್ ಶೆಟ್ಟಿ (ಯುವ ಲೇಖಕರು, ಕವಿಯತ್ರಿ)
