“ಇದು ’ನಾನೆಂಬ’ ಜೀವದ ಜೀವಂತ ಕವಿತೆ. ಪ್ರತಿ ಜೀವದ ಒಳಗಿನ ನಿತ್ಯ ಸತ್ಯ ಭಾವಗೀತೆ. ಇಲ್ಲಿ ನಾನೆಂದರೆ ನಾನಲ್ಲ. ನಾನು, ನೀವು ಸೇರಿದಂತೆ ಎಲ್ಲ. ಇದು ಯಾರು ಓದುತ್ತಾರೋ ಅವರದೆ ಕವಿತೆ. – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಸೃಷ್ಠಿಯೆಂಬ ಲೇಖನಿಯಿಂದ
ಇಳೆಯೆಂಬ ಹಾಳೆಯಲಿ
ದೈವವೆಂಬ ಅದೃಶ್ಯಕವಿ
ಬರೆದ ಕವಿತೆಯೇ ನಾನು.!
ಪಲ್ಲವಿ, ಚರಣ, ಪ್ರಾಸ,
ಸ್ವರ, ಛಂದಸ್ಸು ಸಕಲವೂ
ಅವನ ಶಾಯಿಯ ಲೀಲೆ.!
ಸೋಜಿಗಗಳ ಪದ ಮಾಲೆ.!
ಕಾವ್ಯದ ಜೀವ ಸೌಂದರ್ಯ
ಬದುಕಿನ ಭಾವ ಮಾಧುರ್ಯ
ಎಲ್ಲವೂ ಅವನ ಔದಾರ್ಯ.!
ನಾ ಬರಿಯ ಕವಿತೆ, ಅವನೇ..
ನನ್ನೊಳಗಿನ ಚೈತನ್ಯದೊರತೆ.!!
- ಎ.ಎನ್.ರಮೇಶ್. ಗುಬ್ಬಿ.
