‘ಕವಿಯ ಭಯ!’ ಕವನ – ಹೆಚ್.ಪಿ.ಕೃಷ್ಣಮೂರ್ತಿ

ಕವಿ ಹೆಚ್.ಪಿ.ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಅರಳಿದ ಹನಿಗವನವನ್ನು ತಪ್ಪದೆ ಮುಂದೆ ಓದಿ…

ಈ ಸರಿ ರಾತ್ರಿಯಲಿ ನಮ್ಮ ಹೊರತು
ಯಾರಿಲ್ಲ ಬಾ
ಎಂದು ಕರೆಯದಿರು ನಲ್ಲ
ನನಗೆ ನಿನ್ನ ಮೇಲೆ ನಂಬಿಕೆ ಇಲ್ಲ
ಅಂತಲ್ಲ
ನಮ್ಮ ಶೃಂಗಾರದಾಟವನು
ಕವಿತೆಯಲಿ ಬಟಾಬಯಲು ಮಾಡುವ
ಚಟ ಹೊತ್ತ ನಿನ್ನೊಳಗಿನ

ಕವಿಯ ಭಯ!

****

ಕಾರ್ಮೋಡದಲ್ಲಡಗಿದ
ತಣ್ಣನೆ ಹನಿಗಳೂ
ನಿನ್ನೆದೆಯ ಮೃದು ಮಧುರ
ಶೀತಲ ಭಾವಗಳೂ
ಒಂದೇ ತಂಪು ತಂಪು
ಹನಿಸಿಬಿಡು ನಲ್ಲೆ
ನನ್ನೆದೆ ಬಯಲಲಿ
ಮೊಳೆತು ಅರಳಲಿ
ಅಗಣಿತ ಭಾವಗೀತೆಗಳ ಮೊಲ್ಲೆ!!

****

ವೃಥಾ
ಸೋರಿಕೆಯಾಗುತಿದೆಯಲ್ಲೇ ಹುಡುಗಿ
ನಿನ್ನ ಮಾದಕ ಕಂಗಳಿಂದ
ಎಷ್ಟೊಂದು
ಶೃಂಗಾರ ಕಾವ್ಯಗಳು!!
ಕ್ರಿಯಾತ್ಮಕವಾಗಿ
ಏಕೆ ಬರೆಯಬಾರದು ಒಮ್ಮೆ
ನಿನ್ನ ತುಟಿ ಲೇಖನಿಯಿಂದ
ನನ್ನ ತನು ಪುಟದ ಮೇಲೆ!?


  • ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW