ಲೇಖಕ, ಕವಿ, ಪತ್ರಕರ್ತ ಅಶೋಕ್ ಕುಮಾರ್ ವೈ ಜಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಓದಿ…
ಅವನು
ಹುಣ್ಣಿಮೆಗೆ
ಕೆಂಡ ಸಂಪಿಗೆ
ಹಿಡಿದು
ಬಂದ
ಇವಳು
ಮಲ್ಲಿಗೆಯ
ನಗು ಚೆಲ್ಲಿದಳು
ಚಂದಿರ ಮೈ ತುಂಬಿ
ತುಂಟ ನಗೆ ಬೀರಿದ
ಮುಂಜಾನೆ
ಮಡಿಲ
ತುಂಬಾ
ಕೆಂದಾವರೆ ಅರಳಿತ್ತು
- ಅಶೋಕ್ ಕುಮಾರ್ ವೈ ಜಿ – ಪತ್ರಕರ್ತರು, ಕವಿಗಳು, ಲೇಖಕರು, ಬೆಂಗಳೂರು.