ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರು ‘ಖದಿರಾ’ ಮಹತ್ವದ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ,ಖದಿರಾ ಎಂದರೇನು? ಅದರ ಉಪಯೋಗವೇನು ಎನ್ನುವುದನ್ನು ತಪ್ಪದೆ ಮುಂದೆ ಓದಿ…
ಖದಿರಾ ದಶಮೂಲ ಅರಿಷ್ಟದಲ್ಲಿ ಉಪಯೋಗಿಸುವ ಒಂದು ಮೂಲ. ದೈವಿಕವಾಗಿ ಯಜ್ಞದಲ್ಲಿ ಉಪಯೋಗ. ಗಿಡದಲ್ಲಿ ಮುಳ್ಳು ಹೊಂದಿದ್ದರು ತುಂಬಾ ಔಷಧೀಯ ಗುಣವನ್ನೂ ಹೊಂದಿದೆ.
ಇದರ ಸೊಪ್ಪು ಚಕ್ಕೆ ಕಾಯಿ ಇವುಗಳು ಹೆಚ್ಚು ಔಷಧಿಯ ರೂಪದಲ್ಲಿ ಉಪಯುಕ್ತ.
ಫೋಟೋ ಕೃಪೆ :google
1) ಚಕ್ಕೆಯನ್ನು ಕುದಿಸಿ ಕಷಾಯ ಮಾಡಿ ಬೆಲ್ಲ ಹಾಕಿ ಕುಡಿಯುವುದರಿಂದ ಕೆಮ್ಮು ನಿವಾರಣೆ ಆಗುತ್ತದೆ.
2) ಚಕ್ಕೆಯನ್ನು ಎಣ್ಣೆಯಲ್ಲಿ ಕುದಿಸಿ ಹಚ್ಚುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ.
3) ಚಕ್ಕೆಯ ಕಷಾಯದಿಂದ ಗಾಯವನ್ನು ತೊಳೆಯುವುದರಿಂದ ಗಾಯ ಬೇಗನೆ ಒಣಗುತ್ತದೆ.
4) ಕಾಯಿಯನ್ನು ಒಣಗಿಸಿ ಪುಡಿ ಮಾಡಿ ಹಲ್ಲು ಉಜ್ಜುವುದರಿಂದ ಹಲ್ಲು ನೋವು ಗುಣವಾಗುತ್ತದೆ ಮತ್ತು ಹಲ್ಲಿನ ಸಮಸ್ಯೆಗಳು ವಸಡಿನ ಸಮಸ್ಯೆಗಳು ಗುಣವಾಗುತ್ತದೆ.
5) ಚಕ್ಕೆಯನ್ನು ಕಷಾಯ ಮಾಡಿ ಗಂಡುಷ ಎಂದರೆ ಬಾಯಿ ಮುಕ್ಕುಳಿಸುವುದರಿಂದ ಬಾಯಿ ಹುಣ್ಣು ಗುಣವಾಗುತ್ತದೆ.
6) ನಿಯಮಿತವಾಗಿ ಇದರ ಕಷಾಯ ಕುಡಿಯುವುದರಿಂದ ಬೊಜ್ಜು ಕರಗುತ್ತದೆ.
ಫೋಟೋ ಕೃಪೆ :google
7) ಜೀರಿಗೆ ಮತ್ತು ಸೊಪ್ಪಿನ ಕಷಾಯ ತಯಾರಿಸಿ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ.
8) ಸೊಪ್ಪನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ ಗಾಯವಾದ ತಕ್ಷಣ ಗಾಯಕ್ಕೆ ಉಪಯೋಗಿಸುವುದರಿಂದ ರಕ್ತಸ್ರಾವ ನಿಲ್ಲುತ್ತದೆ.
9) ಸೊಪ್ಪನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಸೋಸಿ ಮಕ್ಕಳಿಗೆ ಹಚ್ಚುವುದರಿಂದ ಚರ್ಮ ಹೊಳಪು ಬರುತ್ತದೆ ಮತ್ತು ಗುಳ್ಳೆಗಳು ಗುಣವಾಗುತ್ತದೆ.
10) ಎಲೆಯ ಪೇಸ್ಟ್ ಗೆ ಅರಿಶಿನ ಸೇರಿಸಿ ಹಚ್ಚುವುದರಿಂದ ಮೊಡವೆ ಗುಣವಾಗುತ್ತದೆ.
11) ಕಾಯಿಯ ಕಷಾಯ ಮಾಡಿ ರುಚಿಗೆ ನಿಂಬೆರಸ ಉಪ್ಪು ಹಾಕಿ ಸೇವಿಸುವುದರಿಂದ ಗಂಟಲು ನೋವು ಗುಣವಾಗುತ್ತದೆ.
12) ಖದಿರದ ಯಾವುದೇ ಮೂಲವನ್ನು ಉಪಯೋಗಿಸಿದಾಗ ಹಾಲು ಒಂದು ಗಂಟೆ ಕುಡಿಯುವಂತಿಲ್ಲ.
- ಸುಮನಾ ಮಳಲಗದ್ದೆ 9980182883.