ಉಡುಪಿ ಬಳಿಯ ಕೋಡಿ ಬೆಂಗ್ರೆ ಸಮುದ್ರ ತೀರ ಸುಂದರವಾಗಿದೆ. ಹೆಚ್ಚು ಜನರಿಲ್ಲದ ಪ್ರಶಾಂತ ವಾತಾವರಣ ಇರುವ ಜಾಗ ಇದಾಗಿದೆ, ಇತ್ತೀಚಿಗೆ ಚುಟುಕು ಕವಿ ಶ್ರೀಧರ್ ಕಾಡ್ಲೂರು ಅವರು ಈ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಯ ರಮಣೀಯ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದಿದ್ದಷ್ಟೇ ಅಲ್ಲ, ಅದರ ಬಗ್ಗೆ ಪುಟ್ಟ ಲೇಖನ ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…
ಸುವರ್ಣ, ಸೀತಾ ಹಾಗು ಕೋಡಿ ಅನ್ನುವ ಮೂರು ನದಿ ಸಮುದ್ರ ಸೇರುವುದು ಇಲ್ಲಿಯೆ. ಸುಮಾರು ಹತ್ತು ವರ್ಷಗಳ ಹಿಂದೆ ನೋಡಿ ಬಂದಿದ್ದೆ ಆಗ ಅಷ್ಟೇನು ವ್ಯವಸ್ಥೆ ಇರಲಿಲ್ಲ, ಒಂದು ಅಂಗಡಿ ಕೂಡಾ ಇರದ ಸ್ಥಳ ಅದು. ಆಗ ನಿರ್ಜನ ಪ್ರದೇಶ ಇದ್ದದ್ದು ನೋಡಿ ಭಯವೂ ಆದ್ದದ್ದು ನೆನಪಿದೆ. ಇತ್ತೀಚೆಗೆ ಇಲ್ಲಿ ಒಂದಷ್ಟು ಅಂಗಡಿ, ಐಸ್ ಕ್ರೀಮ್ ಪಾರ್ಲರ್ , ಬೋಟಿಂಗ್, ಕಾಯಾಕಿಂಗ್ ವ್ಯವಸ್ಥೆ ಕೊಡ ಮಾಡಲಾಗಿದೆ. . ಜೊತೆಗೆ Mangrove ಕಾಡಿನೊಳಗೆ ಹೋಗಿ ಬರುವ ವ್ಯವಸ್ಥೆ ಕಲ್ಪಿಸಲಾಗಿದೆ. ಚಿಕ್ಕ ಕಿರಿದಾದ ರಸ್ತೆಯಲ್ಲಿ ಹೋಗುವಾಗ ಸುತ್ತಲೂ ತೆಂಗಿನ ಮರ, ಹಳೇ ಕಾಲದ ಒಂದಷ್ಟು ಮನೆ, ಒಂದೆಡೆ ನದಿ, ಮತ್ತೊಂದೆಡೆ ಸಮುದ್ರ ನೋಡುತ್ತಾ ಹೋಗುವುದೇ ಒಂದು ಅತ್ಯದ್ಭುತ ಅನುಭವ.
ಉಡುಪಿಯಿಂದ ಲೋಕಲ್ ಬಸ್ ಕೊಡಾ ಈ ಕೊನೆ ಮುಟ್ಟುವವರೆಗೆ ಇವೆ. ತಮ್ಮದೇ ವಾಹನದಲ್ಲಿ ಬರುವವರು ಉಡುಪಿಯಿಂದ ಹೊರಟು ಕುಂದಾಪುರದ ಕಡೆ ಹೈವೇ ಮೇಲೆ ಹೊರಟು ನಾಲ್ಕು ಕಿ ಮಿ ಸಾಗಿದರೆ ಸಂತೆಕಟ್ಟೆ ಅನ್ನೋ ಒಂದು ಜಂಕ್ಷನ್ ಸಿಗುತ್ತದೆ (ಬಲಗಡೆ ದೊಡ್ಡದಾದ Robosoft ಅನ್ನುವ ಕಂಪನಿ ಕೂಡಾ ಕಾಣುತ್ತದೆ) ಅಲ್ಲಿಂದ ಎಡಕ್ಕೆ ಹೋದರೆ ಸೀದಾ ಒಂದೇ ರೋಡು ನಿಮ್ಮನ್ನು ಇಲ್ಲಿಗೆ ತಲುಪಿಸುವುದು
ಹೋಗಿ ಬನ್ನಿ ನೀವುಗಳು ಒಮ್ಮೆ.
- ಶ್ರೀಧರ್ ಕಾಡ್ಲೂರು