ಕೂಗಿಲೆಯೇ ನಿನ್ನ ಧನಿಯಲ್ಲಿ ಯಾಕಿಷ್ಟು ಸಂಕಟ ಹೇಳಬಹುದೇ?…ಕವಿ, ಲೇಖಕ ಪ್ರೊ.ರೂಪೇಶ್ ಪುತ್ತೂರು ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಕವಿತೆ, ತಪ್ಪದೆ ಓದಿ…
ಒಂಬಟ್ಟಿಯಾಗಿ ಕೂಗುವ
ಮಾಮರದ ಮೇಲಿನ ಕೋಗಿಲೆಯೇ
ನಿನ್ನ
ನುಣ್ಣಗಿನ ಈ ಹಾಡಿನಲ್ಲಿ
ಯಾಕಿಷ್ಟು ಸಂಕಟ ಹೇಳಬಹುದೇ?
ಮಾವಿನ ರಸ ಹೀರಿದಕೊಕ್ಕುಗಳೊಳಗೆ
ಇಷ್ಟು ಭಾರವಾದ ನೋವು ಅಡಗಿದೆಯೋ!!!!
ಮಧುರಮನೋಹರ ರಾಗಗಳು ಅದರೊಳ್
ಇಂದು ಎಲ್ಲೆಲ್ಲಿಯೂ ಹುದುಗಿಲ್ಲವೇ?
ಪುಕ್ಕಗಳುದಿರದಂತೆ ರೆಕ್ಕೆ ಬಡಿತದೊಳ್
ಹಾರಟವಾಗುವುದು ನಿಷ್ಕ್ರಿಯವೆನೆಗೆ
ಮಾಮರವೆಂದು ಪೇಳಿದರೂ ಪರವೂರೊಳ್
ತಿರುಳಿನ ರುಚಿ ಬೇರ್ಬೇರೆಯೆನೆಗೆ
ವಿವಿಧ ಸತ್ವಸಾರವುಣಿಪದೆಂಗೆ ನಾ
ರಾಗದೊಳ್ ನುಡಿಯಲಿ……
ಹೌದು ವಸಂತ ಸುರೆ
ನನ್ನೀ ದೇಶವೂ ವಿವಿಧ ತಿರುಳಾಲಿಂಗಿಸಿದೆ
ಆ ಸಾರವೆಲ್ಲವೂ ಒಂದಾದೊಡೆಯೇ
ಅದರಿಂ ಕೇಳ್ವದು ನಿನಗೆ
ಏಕತೆ ಎಂಬ ರುಚಿ.
ಒಬ್ಬಂಟಿಯಾಗಿ ನೀ ಹಾಡಿದಂಗೆ
ಈ ಭರತಭೂಮಿ ಎಂದೂ ಆಗದಿರಲಿ
ಇದಿಷ್ಟೇ ನನ್ನೊಳ್ ನಾ ತಿರುಳಿರಿಸುವೆ.
ಮುಂಬರುವ ಪೀಳಿಗೆಗೆ ಕಾಯ್ದಿರುಸುವೆ.
ನಿಮ್ಮವ ನಲ್ಲ
ರೂಪು
- ಪ್ರೊ.ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)