‘ಹೆಲಿಕೋಬ್ಯಾಕ್ಟರ್ ಪೈಲೋರಿ’ ಬ್ಯಾಕ್ಟಿರಿಯಾದ ಕಥೆ !!ಅಲ್ಸರ್ ರೋಗಿಗಳಿಗೆ ದುಸ್ವಪ್ನ ಈ ಹೆಲಿಕೋಬ್ಯಾಕ್ಟರ್ ಪೈಲೋರಿ. ಆಸ್ಟ್ರೇಲಿಯಾದ ವೈದ್ಯರಾದ ಬೆರಿ ಮಾರ್ಶಾಲ್ ಮತ್ತು ರೋಬಿನ್ ವಾರೆನ್ ಅವರು ಶಸ್ತ್ರಚಿಕಿತ್ಸೆ ಮಾಡುವಾಗ ಬ್ಯಾಕ್ಟಿರಿಯಾ ಪತ್ತೆಯಾಯಿತು.ಮುಂದೇನಾಯಿತು ಎಂಬುದನ್ನು ಡಾ.ಎನ್.ಬಿ.ಶ್ರೀಧರ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಏನೆನೋ ಅಸಂಭದ್ಧ ಆಹಾರಗಳು, ಸಿಕ್ಕಾಪಟ್ಟೆ ಖಾರ, ಮಾನಸಿಕ ಒತ್ತಡ ಇತ್ಯಾದಿಗಳಿಂದ ಉದರದ ಆಮ್ಲತೆ ಜಾಸ್ತಿಯಾಗಿ ಹೊಟ್ಟೆಯಲ್ಲಿ ಹುಣ್ಣುಗಳಾಗುವುದು ಅನೇಕರಿಗೆ ತಿಳಿದ ವಿಷಯ. ಈಗ ಇದಕ್ಕೆಲ್ಲಾ ಅನೇಕ ಚಿಕಿತ್ಸೆಗಳಿವೆ. ಇದು ಅನೇಕ ಸಲ ಶಸ್ತ್ರಚಿಕಿತ್ಸೆ ಮಾಡಿದರೂ ಸಹ ಕಡಿಮೆಯಾಗುವುದೇ ಇಲ್ಲ. ತಿಂಗತಾನುಗಟ್ಟಲೇ ಔಷಧಿಗಳನ್ನು ಸೇವಿಸದರೂ ಸಹ ಕಡಿಮೆಯಾದಂತೆ ಆಗಿ ಪುನ: ಮರುಕಳಿಸುತ್ತದೆ. ಇದಕ್ಕೆಲ್ಲಾ ಕ್ಷುಲ್ಲಕ ಬ್ಯಾಕ್ಟಿರಿಯಾವೊಂದು ಕಾರಣ ಎಂಬುದು ಗೊತ್ತಾಗಿರುವುದೇ ಇತ್ತೀಚೆಗೆ. ಜಗತ್ತಿನ ಶೇ 50 ರಷ್ಟು ಜನರ ಹೊಟ್ಟೆಯಲ್ಲಿ ಸಾಮಾನ್ಯ ವಾಸಿಯಾಗಿರುವ ಈ ಬ್ಯಾಕ್ಟಿರಿಯಾ ಮಕ್ಕಳಲ್ಲಿ ಬಹಳ ಸಾಮಾನ್ಯವಾಗಿಯೇ ನೆಲೆಬಿಟ್ಟಿರುತ್ತದೆ. ಸಾಮಾನ್ಯವಾಗಿ ಮನುಷ್ಯನ ಹೊಟ್ಟೆಯ ಆಮ್ಲತೆ 2-3 ರಷ್ಟು ಎಂದರೆ ಪ್ರಭಲ ಸಲ್ಫೂರಿಕ್ ಆಮ್ಲದ ಹತ್ತಿರ. ಇದರಲ್ಲಿ ಎಲ್ಲವೂ ಬೆಂದು ಹೋಗಿ ಜೀರ್ಣವಾಗಬಹುದು. ಆದರೆ ಈ ಬ್ಯಾಕ್ಟಿರಿಯಾ ಇದೇ ವಾತಾವರಣದಲ್ಲಿ ಆಮ್ಲತೆಯ ಜೊತೆಯಲ್ಲಿ ಸಂತಸದಿಂದ ಜೀವಿಸುತ್ತದೆ.

ಅಲ್ಸರ್ ರೋಗಿಗಳಿಗೆ ದುಸ್ವಪ್ನ ಈ ಬ್ಯಾಕ್ಟಿರಿಯಾ. ಯಾವಾಗಲೂ ಹೊಟ್ಟೆಯ ಹುಣ್ಣು ಎಂದಿಗೂ ಸಹ ವಾಸಿಯಾಗದಂತೆ ಈ ಕ್ಷುದ್ರ ಜೀವಿ ಕಾರ್ಯ ನಿರ್ವಹಿಸುತ್ತದೆ.
ಅಷ್ಟಕ್ಕೂ ಇಂತಹ ಹೆಲಿಕೋಬ್ಯಾಕ್ಟರ್ ಪೈಲೋರಿ ಎಂಬ ಒಂದು ಬ್ಯಾಕ್ಟಿರಿಯಾ ಹೊಟ್ಟೆಯಲ್ಲಿ ಹುದುಗಿರುತ್ತದೆ ಎಂಬುದು ಗೊತ್ತಾ ಗಿರುವುದೇ 1984 ನೇ ಸಾಲಿನಲ್ಲಿ. ಇದು ಗೊತ್ತಾಗಿರುವುದೂ ಸಹ ಆಕಸ್ಮಿಕವಾಗಿ. ಆಸ್ಟ್ರೇಲಿಯಾದ ವೈದ್ಯರಾದ ಬೆರಿ ಮಾರ್ಶಾಲ್ ಮತ್ತು ರೋಬಿನ್ ವಾರೆನ್ ಇವರು ಉದರಕ್ಕೆ ಹುಣ್ಣಿನ ಶಸ್ತ್ರಚಿಕಿತ್ಸೆ ನಡೆಸುವಾಗ ಅದರಲ್ಲಿನ ಬ್ಯಾಕ್ಟಿರಿಯಾಗಳನ್ನು ಪತ್ತೆ ಮಾಡುವ ನಿರಂತರ ಕಾಯಕದಲ್ಲಿ ನಿರತರಾಗಿದ್ದರು. ಆಕಸ್ಮಾತ್ತಾಗಿ ಅವರಿಗೆ ಹೊಸರೀತಿಯ ಬ್ಯಾಕ್ಟಿರಿಯಾವೊಂದು ಗೋಚರಿಸಿತು.
ಉದರದ ಉರಿಯೂತ ಮತ್ತು ಹುಣ್ಣುಗಳಿಂದ ಪ್ರತ್ಯೇಕಿಸಿದ ವಿವಿಧ ಬ್ಯಾಕ್ಟಿರಿಯಾಗಳನ್ನು ಪರೀಕ್ಷಿಸಿದಾಗ ಇದೊಂದು ಹೊಸ ರೀತಿಯಲ್ಲಿ ಗೋಚರಿಸಿತು.ಇದೊಂದು ರೀತಿಯಲ್ಲಿ ಹೆಲಿಕಾಪ್ಟರ್ ತರ ಇರುವುದರಿಂದ ಹಾಗೂ ಮತ್ತು ಇದನ್ನು ಹೊಟ್ಟೆಯ ಪೈಲೋರಸ್ ಭಾಗದಿಂದ ಬೇರ್ಪಡಿಸಿದ್ದರಿಂದ ಹೆಲಿಕೋಬ್ಯಾಕ್ಟರ್ ಪೈಲೋರಿ ಎಂದು ನಾಮಕರಣ ಮಾಡಲಾಯಿತು. ಸುಮಾರು 600 ಕ್ಕಿಂತ ಜಾಸ್ತಿ ಉದರ ರೋಗಿಗಳ ಹುಣ್ಣುಗಳಿಂದ ಈ ಬ್ಯಾಕ್ಟಿರಿಯಾವನ್ನು ಪ್ರತ್ಯೇಕಿಸಿ ವಿಜ್ಞಾನ ಜಗತ್ತಿಗೆ ಪರಿಚಯಿಸಲಾಯಿತು. ಅದರೆ ವಿಜ್ಞಾನ ಜಗತ್ತು ಇದನ್ನು ಬೇಗ ಒಪ್ಪಿಕೊಳ್ಳಲಿಲ್ಲ. ಪ್ರಭಲ ಹೈಡ್ರೋಕ್ಲೋರಿಕ್ ಆಮ್ಲದಲ್ಲಿ ಈ ಬ್ಯಾಕ್ಟಿರಿಯಾ ಹೇಗೆ ಬದುಕೀತು ಎಂಬುದೇ ಅವರ ಸಂಶಯವಾಗಿತ್ತು. ಅಷ್ಟಕ್ಕೇ ಬಿಡದೆ ಡಾ: ಮಾರ್ಷಲ್‌ಗೆ ಆತನು ಇದನ್ನು ಯಾವುದೂ ಪ್ರಾಣಿಗಳ ಅಥವಾ ಪಶುಗಳ ಮೇಲೆ ಪ್ರಯೋಗ ಮಾಡದಂತೆ ನಿರ್ಬಂಧ ಹೇರಿ ಆತನ ಪ್ರಯೋಗಗಳನ್ನೇ ನಿಷೇಧಿಸಲಾಯಿತು.

Barry J. Marshall and Robin Warren  ಫೋಟೋ ಕೃಪೆ :google

ಛಲ ಬಿಡದ ಮಾರ್ಷಲ್ ಈ ಬ್ಯಾಕ್ಟಿರಿಯಾವನ್ನು ತನ್ನ ಮೇಲೆಯೇ ಪ್ರಯೋಗಿಸಿಕೊಳ್ಳಲು ನಿರ್ಧರಿಸಿದ. ರೋಗಪೀಡಿತನಿಂದ ಬ್ಯಾಕ್ಟಿರಿಯಾವನ್ನು ಪ್ರತ್ಯೇಕಿಸಿ, ಅದನ್ನು ವಿವಿಧ ಮಾಧ್ಯಮಗಳಲ್ಲಿ ಚೆನ್ನಾಗಿ ಬೆಳೆದು ಅದರ ಸಾರವನ್ನು ವಿಷಕಂಠನಂತೆ ಗಟಗಟನೆ ಕುಡಿದು ಬಿಟ್ಟ. ಯುರೇಕಾ !! ಅವನಿಗೆ ವಾಂತಿ, ಹೊಟ್ಟೆ ನೋವು, ಹೊಟ್ಟೆ ಉರಿ, ಉಸಿರಿನ ದುರ್ವಾಸನೆ ಮತ್ತು ಸುಸ್ತು ಎಲ್ಲಾ ಪ್ರಾರಂಭವಾಗಿ ಆತ ಇನ್ನೇನು ಸತ್ತು ಹೋಗುವ ಹಂತಕ್ಕೆ ಬಂದ. ಈತನ ಸ್ನೇಹಿತ ರಾಬಿನ್ ವಾರನ್ ಅವನ ಹೊಟ್ಟೆಯ ಬಯಾಪ್ಸಿ ಮಾಡಿ ಬ್ಯಾಕ್ಟಿರಿಯಾ ಪ್ರತ್ಯೇಕಿಸಿ ವಿಜ್ಞಾನ ಜಗತ್ತಿಗೆ ತೋರಿಸಿದ. ಅದಕ್ಕೆ ತಕ್ಕ ಜೀವನಿರೋಧಕಗಳನ್ನೂ ಸಹ ಕಂಡು ಹಿಡಿಯಲಾಯಿತು. ಇದಕ್ಕೂ ಸಹ ಮಾರ್ಶಲ್ ತಾನೇ ಪ್ರಯೋಗಪಶುವಾಗಿ ಬದುಕಿ ಉಳಿದು ತೋರಿಸಿದ. ಇದಾದ ಮೇಲೆ ವಿಜ್ಞಾನ ಜಗತ್ತು 1994 ರಿಂದ 1996 ರ ಅವಧಿಯಲ್ಲಿ ಇದರ ಮೇಲೆ ಪ್ರಪಂಚದಾದ್ಯಂತ ಪ್ರಯೋಗಗಳಾಗಿ ಅಮೇರಿಕಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಇತ್ಯಾದಿ ಸಂಸ್ಥೆಗಳು ಈ ಪ್ರಯೋಗಗಳ ಫಲಿತಾಂಶಗಳನ್ನು ಒಪ್ಪಿಕೊಂಡು ಹೊಟ್ಟೆಯ ಹುಣ್ಣುಗಳಿಗೆ ಹೆಲಿಕೋಬ್ಯಾಕ್ಟರ್ ಪೈಲೋರಿ ಕಾರಣವೆಂದು ನಿಸ್ಸಂಶಯವಾಗಿ ಒಪ್ಪಿಕೊಳ್ಳಲಾಯಿತು. ಇದಕ್ಕೆ ಆಮ್ಲಜನಕ ರಹಿತ ವಾತಾವರಣದಲ್ಲಿ ಕಾರ್ಯನಿವಹಿಸುವ ಮೆಟ್ರೊಜಿಡಝೋಲ್ ಗುಂಪಿಗೆ ಸೇರಿದ ಸೂಕ್ಶ್ಮನುಣುಜೀವ ನಾಶಕ, ಕ್ಲಾರಿಥ್ರೋಮೈಸಿನ್, ಪೆಂಟಪ್ರೊಝೋಲ್ ಇತ್ಯಾದಿಗಳನ್ನು ನೀಡಲಾಗುತ್ತಿದೆ. ರೋಗಶಾಸ್ತ್ರಜ್ಞ ಡಾ.ರಾಬಿನ್ ವಾರನ್ ಹಾಗೂ ಪ್ರೊಪೆಸರ್ ಬೆರಿ ಮಾರ್ಷಲ್ ಇವರಿಗೆ ವಿಜ್ಞಾನದ ಆವಿಷ್ಕಾರಗಳ ಅತ್ಯುನ್ನತ ನೊಬೆಲ್ ಪ್ರಶಸ್ತಿ ನೀಡಿ 2005 ಪುರಸ್ಕರಿಸಲಾಯಿತು.

Barry J. Marshall and Robin Warren ಫೋಟೋ ಕೃಪೆ :google

ಮೊದಲು ವಾಸಿಯಾಗಲು ಕನಿಷ್ಠ 5-6 ತಿಂಗಳು ತೆಗೆದುಕೊಳ್ಳುತ್ತಿದ್ದ ಅವಧಿ ಈಗ 10-15 ದಿನಕ್ಕೆ ಇಳಿದಿದೆ ಮತ್ತು ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಕ್ಷುಲ್ಲಕ ಜೀವಿಯೊಂದು ಹೊಟ್ಟೆಯಲ್ಲಿ ಅಡಗಿ ಕುಳಿದಿರುವುದನ್ನು ಪತ್ತೆ ಮಾಡಿರುವುದಕ್ಕೆ ವಿಜ್ಞಾನದ ಆವಿಷ್ಕರಣೆ ಕಾರಣವಾಯಿತು ಎಂಬುದು ಇದರಿಂದ ಗೊತ್ತಾಗುವ ವಿಷಯ. ವಿಜ್ಞಾನ ಹೇಗೆ ಕಠೋರವಾದ ಸಾಕ್ಷಿಗಳನ್ನು ಬಯಸುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಸತ್ಯವಾದರೂ ಸಹ ಅದನ್ನು ಮೇಲಿಂದ ಒರೆಗೆ ಹಚ್ಚುವುದೇ ಇದರ ಹೆಮ್ಮೆ. ಇದರಲ್ಲಿ ನಂಬಿಕೆಯ ಮೇಲೆ ಮೇಲೆ ವಿಶ್ವಾಸವಿಡುವ ಪ್ರಶ್ನೆಯೇ ಇಲ್ಲ. ಪ್ರತಿಯೊಂದನ್ನೂ ಸಹ ಪ್ರಶ್ನೆಗೊಡ್ಡುವುದು ಮತ್ತು ಸತ್ಯದ ಒರೆಗೆ ಹಚ್ಚುವುದು ಮತ್ತು ಸಾಕಷ್ಟು ಸಾಕ್ಷಿ ಪುರಾವೆಗಳ ನಂತರ ಮಾತ್ರ ನೂತನ ಆವಿಷ್ಕರಣೆಗಳನ್ನು ಒಪ್ಪು ವುದು ಆಧುನಿಕ ವೈದ್ಯಕೀಯ ಪದ್ಧತಿಯ ವಿಶೇಷತೆ.


  • ಡಾ.ಎನ್.ಬಿ.ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಶಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ

5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW