ಓಹ್ ದೇವಾ..ಈ lockdown ಅಲ್ಲಿ ಅದ್ಯಾವ ಮರ್ಮವ ಇಟ್ಟೆ,
ತಟ್ಟೆಯ ತುಂಬಾ ಊಟವ ಕೊಟ್ಟೆ,
ಚಿಕ್ಕದಾಯಿತು ನನ್ನೆಲ್ಲ ಆಗಿನ ಬಟ್ಟೆ,
ಅಂಗಾತ ಮಲಗಿದರೆ ಆಗಸ ಮುಟ್ಟಿತು ನನ್ನೆಯ ಹೊಟ್ಟೆ,
ನಿಂತರೆ ನೆಲ ಕಾಣದೆ ಕಟ್ಟೆಯಾಯ್ತು ಈ ಹೊಟ್ಟೆ,
ಇದನ್ನು ಕರಗಿಸುವುದೊಂದು ಚಿದಂಬರ ಗುಟ್ಟೆ,
ಅಥವ ಇದೊಂದು ಕೈಗೆಟುಕದ ಹಾರುವ ಚಿಟ್ಟೆ,
ನನ್ನ ಆರೋಗ್ಯದ ಜುಟ್ಟು ಜನಿವಾರ ನಿನ್ನ ಕೈಗೇ ಕೊಟ್ಟೆ.
ಓಹ್ ದೇವಾ..ಈ lockdown ಅಲ್ಲಿ ಅದ್ಯಾವ ಮರ್ಮವ ಇಟ್ಟೆ.
************
ಬಾಲ್ಯದಲ್ಲಾಡಿದೆ ಚಿನ್ನಿ ದಾಂಡ,
ಯೌವನದಲ್ಲಿ ನನ್ನ ಕಂಡು ನಲುಗಿತು ಆನಕೊಂಡ
ಮಧ್ಯವಯಸ್ಸಿನಲ್ಲಿ ಬಂತು ಕೋರೋನ ಕರ್ಮಕಾಂಡ,
Lockdownನಲ್ಲಿ ಮನೆಯಲ್ಲೇ ಮಾಡುತ ಕುಳಿತಿರುವೆ,
ಆಲೂ ಬೋಂಡ.
– ವಿನಯ ಎಂ ಹೆಗಡೆ