‘ಪ್ರೀತಿ’ ಕವನ – ನಿಜಗುಣಿ ಎಸ್ ಕೆಂಗನಾಳ

ಎರಡು ಅಕ್ಷರದ ಪ್ರೀತಿ ಸಾವಿರಾರು ಭಾವವನ್ನು ತುಂಬುತ್ತದೆ, ಆ ಪ್ರೀತಿಯ ಕುರಿತು ಕವಿ ನಿಜಗುಣಿ ಎಸ್ ಕೆಂಗನಾಳ ಅವರು ಬರೆದಿರುವ ಸುಂದರ ಕವಿತೆ, ತಪ್ಪದೆ ಓದಿ…

ಈ ಪ್ರೀತಿ ಅನ್ನೋ ಎರಡು ಅಕ್ಷರ
ಅಂದ್ರೇ ಈ ಎರಡು ಹೃದಯಗಳ ನಡುವೆ
ಇರುವ ಒಂದು ಪವಿತ್ರವಾದ ಅನುಭಂದ.
ಈ ಒಂದು ಸುಂದರವಾದ ಅನುಭಂದನೇ
ಈ ಒಂದು ಪವಿತ್ರವಾದ ಸಂಬಂಧ.

ಈ ಒಂದು ಪವಿತ್ರವಾದ ಸಂಬಂಧ
ಗಟ್ಟಿಯಾಗಿ ಇರಬೇಕು ಪ್ರತಿಯೊಂದು
ಕುಟುಂಬಗಳ ಅಂತರಾಳದ ಒಳಾಂಗಣ.
ಈ ಒಳಾಂಗಣದ ಗುಟ್ಟು, ಮಾದರಿಯಾಗಿ
ನಿಲ್ಲಬೇಕು ಪ್ರತಿಯೊಂದು ಹೃದಯಗಳ
ಅಂತರಾಳ.

ಈ ಒಂದು ಹೃದಯಗಳ ಅಂತರಾಳದಿ
ಹಂತ ಹಂತವಾಗಿ, ಅರಳುವಂತಾ ಹತ್ತಾರು
ಕನಸುಗಳು, ಸಾವಿರಾರು ಹಳೆಯ
ನೇನಪುಗಳು, ಎಲ್ಲವೂ ಈ ಪ್ರೀತಿಯೆಂಬ
ಎರಡು ಮನಸ್ಸುಗಳ ನಡುವಿನ ಸಂಭಂದಕ್ಕೆ
ಮನ ಮೀಡಿಯುವಂತಾ ಅಡಿಪಾಯ.

ಈ ಒಂದು ಸುಂದರವಾದ ಅಡಿಪಾಯವೇ
ಈ ಪ್ರಕೃತಿಯ ಒಂದು ನಿಜವಾದ ಗುಣವಾಗಿ,
ಗಂಡು ಹೆಣ್ಣಿನ ಮನದಲ್ಲಿ ಒಂದು ಹೊಸತನದ
ಇತಿಹಾಸವನ್ನು ಸೃಷ್ಟಿಸುವ ಒಂದೊಳ್ಳೇ
ಗುಣವೂ ಈ ಪ್ರೀತಿಯೆಂಬ ಎರಡು ಅಕ್ಷರಕ್ಕೆ ಇದೆ.
ಇದನ್ನು ಅರೆತು ಎಚ್ಚರಿಕೆಯಿಂದ ಹೆಜ್ಜೆ ಇಟ್ಟವರೇ
ಪ್ರೀತಿಯನ್ನ ಗೆಲ್ಲುವವರಂತೆ.


  • ನಿಜಗುಣಿ ಎಸ್ ಕೆಂಗನಾಳ (ಸಾಹಿತಿಗಳು, ರಂಗಭೂಮಿ, ಕಲಾವಿದರು) ಕಲಬುರಗಿ

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW