ಚಾರಣ ಮಾಡಿದಾಗ ಹೊಸ ಅನುಭವ ನೀಡುವ ‘ಮಾಕಳಿ ಬೆಟ್ಟ’ವು ಚಿದಾನಂದ್ ಅವರ ಕ್ಯಾಮೆರಾ ಕಣ್ಣುಗಲ್ಲಿ ಸೆರೆ ಹಿಡಿದಾಗ ಬೆಟ್ಟದ ರಮಣೀಯ ದೃಶ್ಯಗಳು ಕಂಡದ್ದು ಹೀಗೆ ….
‘ಮಾಕಳಿ ಬೇರು’ ಎಂಬ ಔಷಧೀಯ ಸಸ್ಯವು ಹೆಚ್ಚಾಗಿ ಬೆಟ್ಟದಲ್ಲಿ ದೊರೆಯುತ್ತಿದ್ದುದರಿಂದ ಮಾಕಳಿ ಬೆಟ್ಟ ಎಂದು ಹೆಸರಾಗಿದ್ದ ಬೆಟ್ಟವು ವಿಜಯನಗರ ಕಾಲಾವಧಿಯಲ್ಲಿ ಆವತಿ ನಾಡಪ್ರಭುಗಳಾದ ದೊಡ್ಡಬಳ್ಳಾಪುರದ ಪಾಳೇಗಾರರು ನಿರ್ಮಿಸಿದ ಬೃಹತ್ ಕೋಟೆ ಮಾಕಳಿ ಬೆಟ್ಟ ಕೋಟೆ ( ಮಾಕಳೀ ದುರ್ಗ ) ಎಂದು ಕರೆಯಲ್ಪಡುತ್ತಿದೆ.
ಬೃಹತ್ ಗ್ರಾನೈಟ್ ಶಿಲೆಗಳಿಂದ ನಿರ್ಮಿಸಿದ ಕೋಟೆಯು ವಿಜಯನಗರದ ಶೈಲಿ ಗುಣವಾಗಿ ಕೌಶಲಗಳಿಂದ ಕೂಡಿದೆ. ಸೈನ್ಯಕ್ಕೆ ತರಬೇತಿ ನೀಡುವ ಕೇಂದ್ರವಾಗಿದ್ದ ಮಾಕಳಿ ದುರ್ಗವು ಟಿಪ್ಪುಸುಲ್ತಾನನ ಆಳ್ವಿಕೆಗೂ ಸಹ ಒಳಪಟ್ಟು ಋಷಿಮುನಿಗಳ ಹಾಗೂ ಸಾಧು-ಸಂತರ, ಸನ್ಯಾಸಿಗಳ ತಾಣವು ಸಹ ಆಗಿತ್ತು.
- ಕ್ಯಾಮೆರಾ ಹಿಂದಿನ ಕಣ್ಣು : ಚಿದಾನಂದ್ ಯುವ ಸಂಚಲನ