ರಾಜಕೀಯದ ಸಿಡಿಮದ್ದಿ ಬೆಳಕ ಝಳಕೆ ಗೋಡೆ ಬರಹದ ಸೀಮೆ ಸುಣ್ಣ ಕೊನೆಗಾಣದೆ…ಡಾ. ಕೃಷ್ಣವೇಣಿ.ಆರ್.ಗೌಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಕಟು ಸತ್ತ್ಯದ ಬಿಕ್ಕಟ್ಟುಗಳ
ಬಂಧನಕೆ ತೊಲೆ ಜಂತುಗಳ
ಚೌಕಟ್ಟಿನ ಕಡಿವಾಣ
ಗಲಿಬಿಲಿಯಾದ ಸ್ತಂಭ…..
ಕಷ್ಟ ಸುಖದ ತೋರಿಕೆಯ
ಹೆಬ್ಭಯಕೆಗೆ
ಡಾಂಬಾರಿನ ಟಾರು
ಮಂಜು ಮುಸುಕಲಿ
ಹೇಳ ಹೆಸರಿಲ್ಲದೆ
ಕಂಗೊಳಿಸುತಿದೆ…..
ಸುತ್ತಲೂ ಮುಗಿಲು ಮುಟ್ಟುವ
ಪ್ರಯಾಣದ ಪರಿವೆ
ಇದಕೆ ನೋವು ನಲಿವ
ಚುಕ್ಕೆ ಹತ್ತಿ ಇಳಿಯುತಿದೆ…..
ಬಗೆ ಬಗೆಯ ಇಚ್ಚೆಗೆ
ಸ್ವಾಭಿಮಾನದ ಬಾಯಾರಿಕೆ
ತೃಷೆ ತಣಿಸದೆ
ವಿಧಿಯ ಸೆಣಸಾಟದಿ
ಕನಸು ಸುಡುತಿದೆ….
ದಿಕ್ಕುಗಳ ದಾರಿಯ ದೃಷ್ಟಿ
ಬದಲಾದ ಸುಂದರ ಸಂಗಮದಿ
ಮುಳುಗೇಳುತಿದೆ..
ರಾಜಕೀಯದ ಸಿಡಿಮದ್ದಿನ
ಬೆಳಕ ಝಳಕೆ
ಗೋಡೆ ಬರಹದ ಸೀಮೆ ಸುಣ್ಣ
ಕೊನೆಗಾಣದೆ,,
ಭೋದಿ ಕಣ್ಮುಚ್ಚಿ ಕಲ್ಲಾಗಿದೆ….
ಬರಗಾಲದಿ ಕುಳ್ಳು
ಕಣ್ನೀರ ಕೆರೆಸೆಯಾಗಿದೆ..
ಪಾರಂಪರಿಕ ,ಗಲಾಟೆಯ
ಭರಾಟೆ ಬಾಯಿ ಚಪ್ಪರಿಸುತಿದೆ..
ಪವಿತ್ರ ಅಪವಿತ್ರದ ಜಾಗ್ರುತಿಗೆ
ಹಾಲತೊರೆಯ ಸದ್ದು
ಅಂತರ್ವಾಹಿನಿಯಾಗಿ ಹರಿದಿದೆ…
ಸ್ವಾಸ್ಥ್ಯದ ಸ್ವಚ್ಚ ಮನದ
ಊಫಿರಿಗೆ ದೇಹ
ನಡುಗುತಿದೆ.
ಬಿಗಿ ಹಿಡಿದ ಕೈಯ್ಯ ಕುಲುಕು
ಮೇಲು ಕೀಳೆನ್ನದೆ
ಹಿಮದ ಹೆಜ್ಜೆ ಎಣಿಸುತಿದೆ….
ಕಾರ್ಯದ ಭಾರಕೆ
ದಿಕ್ಪಾಲಕರ ಹೆಬ್ಭಾರದ ಹೊರೆ
ಸಮಯ ಸಂಯಮ ಕಳಚಿ
ತುತ್ತಿನ ಚೀಲಕೆ ಬಾಗಿ ಬೆನ್ನು
ಮೂಕವಾಗಿ ಅಳುತಿದೆ….
ಪುಟಿದೆದ್ದ ಕಂದಮ್ಮಗಳ
ಭಿಕ್ಷಾಟನೆ ಅಂಶ
ಕೂತ ಕಾಲಿಗೂ ತಾಕುತಿದೆ
ಇಚ್ಚೆಯ ಧೂಪ ಮನ ಬಂದಂತೆ ವಿಶ್ವಕೆ ಬೆಳಗುತಿದೆ…..
- ಡಾ. ಕೃಷ್ಣವೇಣಿ.ಆರ್.ಗೌಡ – ವಿಜಯ ನಗರ ಜಿಲ್ಲೆ, ಹೊಸಪೇಟೆ.