ಇಂದು ಮಣ್ಣೆತ್ತಿನ ಅಮಾವಾಸ್ಯೆ – ನಟರಾಜ್ ಸೋನಾರ್ಮಣ್ಣೆತ್ತಿನ ಅಮಾವಾಸ್ಯೆ ದಿನ ರೈತರು ತಮ್ಮ ಎಲ್ಲ ಕೃಷಿ ಕಾರ್ಯಗಳಿಗೆ ಮತ್ತು ಎತ್ತುಗಳಿಗೆ ವಿಶ್ರಾಂತಿ ನೀಡುತ್ತಾರೆ. ಮಣ್ಣಿನಿಂದ ಎತ್ತುಗಳನ್ನು ತಯಾರಿ ಪೂಜೆ ಮಾಡುತ್ತಾರೆ. ಇದು ರೈತರಿಗೆ ವಿಶೇಷವಾದ ಹಬ್ಬವಾಗಿದೆ. ಲೇಖಕ ನಟರಾಜ್ ಸೋನಾರ್ ಅವರು ಬರೆದ ಚಿತ್ರ ಬರಹ ಓದಿ…

ಮಣ್ಣೆತ್ತಿನ ಅಮಾವಾಸ್ಯೆ ಜನಪದರ ಹಬ್ಬ,ಹಳ್ಳಿಗರ ಹಬ್ಬ, ಮಣ್ಣಿನ ಮಕ್ಕಳಹಬ್ಬ ಮತ್ತು ಸವ೯ರ ಹಬ್ಬ. ರೈತರು ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳನ್ನು ಪೂಜ್ಯತೆಯಿಂದ ಪೂಜಿಸುತ್ತಾರೆ ಮಣ್ಣು ಅನ್ನ ಕೊಡುವ ಭೂಮಿತಾಯಿ ಈ ಇಬ್ಬರನ್ನು ಪೂಜಿಸುವ ಹಬ್ಬ ಮಣ್ಣಿನಿಂದ ಎತ್ತುಗಳ ಮೂತಿ೯ಮಾಡಿ ಪೂಜಿಸುವ ಸಂಕೇತ.

ಆದ್ಯ ವಚನಕಾರರಾದ ಶ್ರೀ ದಾಸಿಮಯ್ಯನವರು ಸಹ ಹೀಗೆ ಹೇಳುತ್ತಾರೆ.

ಎತ್ತನೇರಿದ ಕತ೯ನೊಬ್ಬನೆ ಜಗಕ್ಕೆಲ್ಲ
ಎತ್ತು ಬೆಳೆದ ಧಾನ್ಯವನುಂಬ
ದೇವರುಗಳೆಲ್ಲ ನಿಮ್ಮ ತೊತ್ತಿನ ಮಕ್ಕಳು ಕಾಣಾ ! ರಾಮನಾಥ|

ಫೋಟೋ ಕೃಪೆ : Prajavani

ಅಂದರೆ ಜಗತ್ತನ್ನು ಸೃಷ್ಟಿ ಸಿದ ಜಗತ್ತಿನ ಜೀವರಾಶಿಗಳನ್ನು ಕಾಪಾಡುವ ಶಿವನ ವಾಹನ (ನಂದಿ) ಎತ್ತುಗಳು ಹೊಲದಲ್ಲಿ ರಂಟೆ ಹೊಡೆದು ಉತ್ತಿ ಬಿತ್ತಿ ಬೆಳೆದ ಧಾನ್ಯವನು ಉಣ್ಣುವ ನಾವುಗಳು ಅವುಗಳನ್ನು ರಕ್ಷಿಸಿ ಪೂಜಿಸಬೇಕು ಎನ್ನುತ್ತಾರೆ ದಾಸಿಮಯ್ಯನವರು.


  • ನಟರಾಜ್ ಸೋನಾರ್  (ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಲೇಖಕರು) ಕುಷ್ಟಗಿ.

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW