ಮಾರ್ಗದರ್ಶಿ…! ಕವನ – ಎ.ಎನ್.ರಮೇಶ್.ಗುಬ್ಬಿ

“ಇದು ಪ್ರತಿ ಜೀವದ ಸತ್ಯ ಕವಿತೆ. ಪ್ರತಿ ಬದುಕಿನ ನಿತ್ಯ ಭಾವಗೀತೆ. ಪ್ರತಿ ಎದೆಗೂ ಬೆಳಕ ನೀವ ದಿವ್ಯಪ್ರಣತೆ. ಇಲ್ಲಿ ನಮ್ಮ ನಡೆಗಳಿಗೆ ನಾವೇ ಮಾರ್ಗದರ್ಶಿ. ಕನಸುಗಳಿಗೇ ನಮಗೆ ನಾವೇ ರೂಪದರ್ಶಿ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಜಡವಾದರೆ ಕಲ್ಲು
ಮಿಡಿಯುತಿದ್ದರೆ ಕಲ್ಪ
ಕೆತ್ತಿದರಷ್ಟ್ತೇ ಶಿಲ್ಪ
ಹಾಗೆ ಬಿಟ್ಟರೆ ಶಿಲೆ.!

ಶಿಲೆಯಾಗುವೆಯೋ?
ಶಿಲ್ಪವಾಗುವೆಯೋ?
ಕಲ್ಲಾಗುವೆಯೋ?
ಕಲ್ಪವಾಗುವೆಯೋ?
ಜೀವವಾಗುವೆಯೋ?
ಶವವಾಗುವೆಯೋ?

ಇಲ್ಲಿ ನಿನ್ನದೇ ಆಯ್ಕೆ
ನಿನ್ನದೇ ತೀರ್ಮಾನ.!
ಇಲ್ಲಿ ಎಂದಿಗೂ ನಿನಗೆ
ನೀನೇ ಯಜಮಾನ.!


  • ಎ.ಎನ್.ರಮೇಶ್.ಗುಬ್ಬಿ –  ಲೇಖಕರು, ಕವಿಗಳು, ಕೈಗಾ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW