ಮಂಕಿಪಾಕ್ಸ್: ಮನುಷ್ಯ ಜಗತ್ತನ್ನು ಪಿಡಿಸಲು ಸಜ್ಜಾದ ವೈರಸ್ಮಂಕಿಪಾಕ್ಸ್ ವೈರಸ್ ವಿಲಕ್ಷಣದಿಂದಾಗಿ ವಿಶ್ವ ಅರೋಗ್ಯ ಸಂಸ್ಥೆಯು (WHO) ಮಂಕಿಪಾಕ್ಸವನ್ನು ಒಂದು ಜಾಗತಿಕ ಅರೋಗ್ಯ ತುರ್ತುಪರಿಸ್ಥಿತಿಯೆಂದು (Global Health Emergency) ಘೋಷಿಸಿದೆ. ಈ ರೋಗದ ಲಕ್ಷಣಗಳೇನು? ಇತ್ಯಾದಿ ವಿಷಯವನ್ನು ಡಾ. ಮಹ್ಮದ ಯುನುಸ.ಶ.ನಬೂಜಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ತಪ್ಪದೆ ಓದಿ…

ಜಗತ್ತನ್ನು ಮನುಷ್ಯ ಆಳಿದರೆ ಮನುಷ್ಯನನ್ನು ಸೂಕ್ಶ್ಮಜೀವಿ ವೈರಸ್ ಆಳುತಿದೆ ಎನ್ನಬಹುದು. ಯಾಕೆಂದರೆ ಇತ್ತೀಚಿಗೆ ಕೊರೋನವೆಂಬ ಹೆಸರಿನ ಸಾಂಕ್ರಾಮಿಕ ರೋಗದಿಂದ ಮನುಷ್ಯ ಜಗತ್ತನ್ನು
ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಕುಗ್ಗಿಸಿದ ವೈರಸ್ ಸೂಕ್ಶ್ಮಜೀವಿಯು ಈಗ ಮತ್ತೆ ಮಂಕಿಪಾಕ್ಸ್ (ಮಂಗನ ಸಿಡುಬುರೋಗ/MPX) ಎಂಬ ಹೆಸರಿನಿಂದ ನಮ್ಮನ್ನು ಪಿಡಿಸಲು ಸಜ್ಜಾಗಿದೆ. ಮಂಕಿಪಾಕ್ಸ್ ವೈರಸ್ ಜಗತ್ತಿಗೆ ಹೊಸದಲ್ಲದಿದ್ದರೂ ಸಧ್ಯ ಇದು ತೋರಿಸುತ್ತಿರುವ ವಿಲಕ್ಷಣದಿಂದಾಗಿ ಮೊನ್ನೆಯೇಷ್ಟೇ ವಿಶ್ವ ಅರೋಗ್ಯ ಸಂಸ್ಥೆಯು (WHO) ಮಂಕಿಪಾಕ್ಸವನ್ನು ಒಂದು ಜಾಗತಿಕ ಅರೋಗ್ಯ ತುರ್ತುಪರಿಸ್ಥಿತಿಯೆಂದು (Global Health Emergency) ಘೋಷಿಸಿದೆ ಮತ್ತು ನಿಜವಾಗ್ಲೂ ಇದೊಂದು ಅಘಾತಕಾರಿ ವಿಷಯವಾಗಿದೆ. ಮೇ 31 ರವರೆಗೆ ನೀರಾಳವಾಗಿದ್ದ ಭಾರತವು ಇತ್ತೀಚಿಗೆ ವರದಿಯಾದ ಪ್ರಕರಣಗಳು ಆತಂಕ ಮತ್ತು ಕಳವಳವನ್ನು ಉಂಟುಮಾಡಿವಿ. ಸಮಾಧಾನಕರ ವಿಷಯವೆಂದರೆ ಈಗಾಗಲೇ ಸಾಮಾನ್ಯ ಸಿಡುಬುರೋಗದ ಲಸಿಕೆಯನ್ನು ತಗೆದುಕೊಂಡವರು ಮಂಕಿಪಾಕ್ಸಗೆ ಸುಲಭವಾಗಿ ತುತ್ತಾಗಲಾರರೆಂದು ಒಂದು ಅಭಿಪ್ರಾಯವಿದೆ. ಆದರೂ ನಮ್ಮ ಕೇಂದ್ರ ಅರೋಗ್ಯ ಇಲಾಖೆಯು ಮಂಕಿಪಾಕ್ಸ್ವನ್ನು ಪರಿಣಾಮಕಾರಿಗೆ ತಡೆಗಟ್ಟಲು ರೋಗದ ಕೈಪಿಡಿಯನ್ನು ಜನಸಾಮಾನ್ಯರ ಮಾಹಿತಿಗಾಗಿ ಪ್ರಖಟಿಸಿದೆ.

ಫೋಟೋ ಕೃಪೆ : india.com

ಮಂಕಿಪಾಕ್ಸನ ವೈಶಿಷ್ಟ್ಯಗಳು :

ಮಂಕಿಪಾಕ್ಸ್ (MPX) ಇದೊಂದು ವೈರಲ್ ಝೂನೋಟಿಕ್ (ಪ್ರಾಣಿಗಳಿಂದ ಬರುವ) ಕಾಯಿಲೆಯಾಗಿದ್ದು, ಇದರ ರೋಗಲಕ್ಷಣಗಳು ಸಾಮಾನ್ಯ ಸಿಡುಬಿನಂತೆಯಿದ್ದರು ತೀವ್ರತೆಯಲ್ಲಿ ಸ್ವಲ್ಪ ಕಡಿಮೆಯಾಗಿವೆ ಮತ್ತು ರೋಗಲಕ್ಷಣಗಳು ಸೋಂಕುತಾಗಿದ 3-21ದಿನಗಳಲ್ಲಿ ಕಾಣಿಸಿಕೊಳ್ಳುತ್ತೇವೆ. ಸೋಂಕುಯುಕ್ತ ಪ್ರಾಣಿಗಳಿಂದ (ಮಂಗಗಳು,ಇಲಿಗಳು, ಅಳಿಲುಗಳಿಂದ) ಮನುಷ್ಯರಿಗೆ ಮತ್ತು ಸೋಂಕುಯುಕ್ತ ರೋಗಿಗಳು ಅರೋಗ್ಯವಂತ ವ್ಯಕ್ತಿಗಳ ಜೊತ್ತೆಗೆ ನೇರ ಅಥವಾ ಪರೋಕ್ಷವಾಗಿ ಸಂಪರ್ಕಕ್ಕೆ ಬರುವದರಿಂದ ಹರಡುತ್ತದೆ. ಮಧ್ಯ ಆಫ್ರಿಕನ್ ಕ್ಲಾಡ್ ಮತ್ತು ಪಚ್ಚಿಮ ಆಫ್ರಿಕನ್ ಕ್ಲಾಡ್ ಎಂಬ ಎರಡು ಪ್ರಬೇಧಗಳಲ್ಲಿ ಮೊದಲೆನೆಯ ಪ್ರಬೇಧವು ಹೆಚ್ಚು ತಿವ್ರತೆಯನ್ನು ಹೊಂದಿದ್ದು ಮತ್ತು ಶೀಘ್ರವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.

ಫೋಟೋ ಕೃಪೆ : google

ಮಂಕಿಪಾಕ್ಸ್ ಸೋಂಕಿತ ಅಂದರೆ ಯಾರು :

ಯಾವುದೇ ವಯಸ್ಸಿನ ವ್ಯಕ್ತಿಯು ಮಂಕಿಪಾಕ್ಸ್ ಪೀಡಿತ ಪ್ರದೇಶಕ್ಕೆ ಹೋಗಿಬಂದ 21ದಿನಗಳವಳಗೆ, ಯಾವುದೇ ಕಾರಣವಿಲ್ಲದೆ ಅವನ ಚರ್ಮದಲ್ಲಿ ದದ್ದು (rash), ಜ್ವರ, ತಲೆನೋವು, ವಿಪರೀತ ಆಯಾಸ ಮತ್ತು ದುಗ್ದರಸ ಗ್ರಂಥಿಯ (Lymphnode)ಬಾವು ಕಾಣಿಸಿಕೊಂಡಿದ್ದೆ ಆದಲ್ಲಿ ಅವನನ್ನು ಮಂಕಿಪಾಕ್ಸ್ ಶಂಕಿತ ವ್ಯಕ್ತಿವೆಂದು (suspected case) ಕರೆಯುತ್ತಾರೆ. ಅರೋಗ್ಯವಂತ ವ್ಯಕ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದರೆ ಅವನನ್ನು ಮಂಕಿಪಾಕ್ಸ್ ಸಂಭವನಿಯ ವ್ಯಕ್ತಿಯೆಂದು (probable case) ಮತ್ತು ಪ್ರಯೋಗಾಲದ ಪರೀಕ್ಷೆಯಿಂದ ದೃಢಪಟ್ಟ ವ್ಯಕ್ತಿಯನ್ನು ಮಂಕಿಪಾಕ್ಸ್ ದೃಢ ವ್ಯಕ್ತಿವೆಂದು (confirmed case) ಕರೆಯುತ್ತಾರೆ. ಸದ್ಯ ಶಂಕಿತ ಮತ್ತು ಸಂಭವನಿಯ ವ್ಯಕ್ತಿಯ ಮಾದರಿಯನ್ನು ಎನ್.ಐ.ವೈ.(NIA) ಯಲ್ಲಿ ಕಳಿಸಿ ದೃಢಪಡಿಸಲಾಗುತ್ತಿದೆ.

ಮಂಕಿಪಾಕ್ಸ್ ಲಕ್ಷಣಗಳು :

ಸಾಮಾನ್ಯವಾಗಿ ಲಕ್ಷಣಗಳು 2-4ವಾರದವರೆಗೆ ರೋಗಿಯನ್ನು ಕಾಡುತ್ತವೆ. ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಹೆಚ್ಚು. ಇದರಿಂದ ಆಗುವ ಸಾವಿನ ಪ್ರಮಾಣವು ಸಧ್ಯ 3-6% ಇದೆಯೆಂದು ತಿಳಿದುಬಂದಿದೆ. ಚರ್ಮ ದದ್ದು (skin rash), ದುಗ್ದರಸ ಗ್ರಂಥಿಯಗಳಲ್ಲಿ ಬಾವು (lymphnode swelling), ಜ್ವರ, ಚಳಿಯಾಗುವುದು, ಬೆವರುವಿಕೆ, ತಲೆನೋವು, ವಿಪರೀತ ಆಯಾಸ, ವಿಪರೀತ ಸುಸ್ತು , ಕೆಮ್ಮು ಮತ್ತು ಗಂಟಲು ಕೆರತ ಹೀಗೆ ಹಲವಾರು ಲಕ್ಷಣಗಳು ಕಂಡುಬರುತ್ತವೆ. ಸರಿಯಾದ ಚಿಕಿತ್ಸೆ ಕೊಡದಿದ್ದರೆ ಹಲವಾರು ತೊಡಕುಗಳಾದ ನಿಮೊನಿಯ, ಸೇಪ್ಸಿಸ್, ಏನ್ಸೆಪಲೈಟಿಸ್ ಮತ್ತು ದೃಷ್ಟಿದೋಷಗಳಿಗೆ ಕಾರಣವಾಗುತ್ತದೆ.


  • ಡಾ.ಮಹ್ಮದ ಯುನುಸ.ಶ.ನಬೂಜಿ (ಸಹಪ್ರಾಧ್ಯಾಪಕರು, ಶ್ರಿ.ಜೆ.ಜಿ.ಸಿ.ಹೆಚ್.ಎಸ್ ಆಯುರ್ವೇದಿಕ ಮೆಡಿಕಲ್ ಕಾಲೇಜು) ಘಟಪ್ರಭಾ.

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW