‘ನೀಲಿಯ ಬಾನಲಿ, ತೇಲುವ ಚಂದ್ರಮ’…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಕವನದ ಸುಂದರ ಸಾಲುಗಳು, ಮುಂದೆ ಓದಿ.
ಚಂದಿರನಿರುವೆಡೆ
ಸುಂದರವಡಗಿದೆ
ಚಂದದ ಮಗುವಲಿ ಕಾಣುತಿದೆ
ಅಂದದ ಬೆಳಕಿಗೆ
ನಂದದ ಹೊಳಪಿದೆ
ಕುಂದದ ಚಿತ್ತವು ಮಗುವಿಗಿದೆ
ನೀಲಿಯ ಬಾನಲಿ
ತೇಲುವ ಚಂದ್ರಮ
ಪಾಲಿಸು ಕಂದನ ಬೆಳಗುತಲಿ
ಆಲಿಸಿ ಮೊರೆಯನು
ಗೇಲಿಯ ಮಾಡದೆ
ತೇಲಿಸು ಜಗವನು ತಿಂಗಳಲಿ
ತಿಂಗಳ ಬೆಳಕಿದೆ
ತಂಗಿದ ಮಗುವಿಗೆ
ಸಂಗವ ಸೇರುವ ಬಯಕೆಯಿದೆ
ಅಂಗಳದೊಳಗಡೆ
ಕಂಗಳು ನೋಡಿವೆ
ಗಂಗಳದೂಟವು ಮುಗಿಯುತಿದೆ
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು