‘ಮೂರು ಮಂತ್ರಗಳು’ ಕವನ – ದಸ್ತಗಿರಿ ಸಾಬ್

ನಿವೃತ್ತ ಶಿಕ್ಷಕರಾದ ದಸ್ತಗಿರಿ ಸಾಬ್ ಅವರ ಒಂದು ಭಾರತ ದೇಶದ ಪ್ರಗತಿಗೆ ಮೂರು ಮಂತ್ರಗಳನ್ನು ತಪ್ಪದೆ ಓದಿ…

ಭಾರತ ದೇಶದ ಪ್ರಗತಿಯ ಕಾಣಲು
ಮೂರು ಮಂತ್ರಗಳು ಅರಿಯಣ್ಣ.
ಸಾಕ್ಷರತೆಯು ಜನ ನಿಯಂತ್ರಣವು
ಪರಿಸರ ಮಾಲಿನ್ಯ ಕೇಳಣ್ಣ.

ಮನುಜಗೆ ಶಿಕ್ಷಣ ನೀಡಲು ನಾವು
ಸಾಕ್ಷರ ಮಂತ್ರ ಪಠಿ ಸಣ್ಣ.
ಕಲಿಕೆಯ ಕೇಂದ್ರ ಸೇರಣ್ಣ.
ಮನೆ ಮನೆ ತಿರುಗಿ ಮನುಜನ ಸೇರಿಸಿ
ಶಿಕ್ಷಣ ಪ್ರಗತಿಯ ಮಾಡಣ್ಣ.

ಜನ ನಿಯಂತ್ರಣ ಅರಿಯದೆ ಇದ್ದರೆ
ನಿಲ್ಲಲು ನೆಲವು ಇಲ್ಲಣ್ಣ ಜೀವಿಯ ಉಳಿವು ಇಲ್ಲಣ್ಣ.
ಅನ್ನ ಬಟ್ಟೆ ಉದ್ಯೋಗದ ಕೂಗು
ಗಗನಕೆ ಕೇಳಿದೆ ನೋಡಣ್ಣ.

ಪರಿಸರ ಮಾಲಿನ್ಯ ಕಾಪಾಡದಿದ್ದರೆ
ಮನುಜನ ನಾಶ ನೋಡಣ್ಣ ಮುಂದಿನ ಪೀಳಿಗೆ ಇಲ್ಲಣ್ಣ.
ಗಿಡವನ್ನು ಬೆಳೆಸಿ ಹಸಿರನ್ನು ಉಳಿಸಿ
ದೇಶದ ಪ್ರಗತಿಯ ಕಾಣಣ್ಣ.


  • ದಸ್ತಗಿರಿ ಸಾಬ್ – ನಿವೃತ್ತ ಶಿಕ್ಷಕರು, ಗೌರಿಬಿದನೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading