ಪೂಜ್ಯ ಭಾವದ ನೆಲೆ ದೇವನ ಸುತ್ತಿದ ಗಂಗೆಯ ಸೆಲೆ

ಕೃಷ್ಣಾ ನದಿಯು ನಮ್ಮ ದೇಶದ ಮೂರನೇ ಅತಿ ಉದ್ದವಾದ ನದಿಯಾಗಿದ್ದು, ಸವಿಸ್ತಾರವಾಗಿ ಹೆಚ್ಚು ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಕರ್ನಾಟಕದ ಏಕೈಕ ನದಿ. ಅವಿನಾಶ ಸೆರೆಮನಿ ಅವರು ‘ನದ – ನದಿಗಳ ನಿನಾದ’ ಅಂಕಣದಲ್ಲಿ ಕೃಷ್ಣಾ ನದಿ ಕುರಿತಾಗಿದ್ದು , ತಪ್ಪದೆ ಮುಂದೆ ಓದಿ…

ಶಾಂತತೆಯ ಪ್ರಫುಲತೆಯಿಂದ ಸದಾ ಹರಿಯುತ, ಪ್ರಸನ್ನತೆಯ ಗುಣದಿಂದ ಹೊನ್ನಿನಂತ ರೇಷ್ಮೆ ಕಿರಣಗಳನ್ನು ತನ್ನೆಡೆ ಸೆಳೆಯುತ, ಬಂಗಾರದ ಕಣಜವನ್ನು ನಿರ್ಮಿಸುತ, ಪ್ರಶಾಂತ ಭಾವದಿ ಹರಿಯುತ, ಸ್ಥಳಗಳಿಗೆ ಜೀವವನು ತುಂಬುತ ,ನೆಲಕ್ಕೆ ನೆಲೆಯನ್ನು ಕರುಣಿಸುತ, ಒಣಗಿ ಸೊರಗಿ ಹೋಗಿರುವ ಸಸ್ಯಸಂಕುಲಕೆ ಉಸಿರಾಗುತ, ಕಳೆಗುಂದಿದ ರೈತನ ಕೂಸುಗಳ ಮೊಗದಲಿ ನಗೆಯನು ಉಕ್ಕಿಸುತ,ನಂಬಿದ ಸಾವಿರಾರು ಭೂತಾಯಿಂದಿರ ಅಳಲಿಗೆ ಸ್ಪಂದಿಸುತ,ಬತ್ತಿದ ಹಸಿರ ಸಿರಿಯ ಸೌಂದರ್ಯಕೆ ಪುನರಜನ್ಮ ನೀಡುತ,ಉತ್ತಿದ ಬೆಳೆಗಳ ಹಸಿವನ್ನು ತಣಿಸಿ ಪೋಷಣೆಗೆ ಸಹಕರಿಸಿ. ಜೀವವನ್ನೇ ಕಳೆದುಕೊಳ್ಳುವ ಶೋಚನೀಯ ಸ್ಥಿತಿಯಲ್ಲಿದ್ದ ಸಾವಿರಾರು ಸಂಕುಲಗಳಿಗೆ ಜೀವ ತುಂಬುತ್ತಿರುವ ಮಹಾ ಮಾತೆಯೇ ಕೃಷ್ಣೆ.

ಕೃಷ್ಣಾ ನದಿಯು ನಮ್ಮ ದೇಶದ ಮೂರನೇ ಅತಿ ಉದ್ದವಾದ ನದಿಯಾಗಿದ್ದು. ವಿವಿಧ ರಾಜ್ಯಗಳ ನಡುವೆ ಹಾಯ್ದು ಹೋಗಿ ಸಾವಿರಾರು ಹೆಕ್ಟೇರ್ ಭೂಮಿಗಳಿಗೆ ನೀರುಣಿಸಿದ್ದಲ್ಲದೆ, ಜನರ ಸ್ವಾವಲಂಬನೆಯ ಬದುಕಿಗೆ ಆಧಾರವಾಗಿ ಜೀವನಕೆ ವರದಾನವಾಗಿದೆ. ಉಳಿದ ನದಿಗಳಿಗೆ ಹೋಲಿಸಿದರೆ ಇದು ಅತ್ಯಂತ ಅಳ ಮತ್ತು ಸವಿಸ್ತಾರವಾಗಿ ಹೆಚ್ಚು ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಕರ್ನಾಟಕದ ಏಕೈಕ ನದಿ ಎಂದರೆ ತಪ್ಪಾಗಲಾರದು. ಭಾರತದಲ್ಲಿ ಸಿಂಧೂ,ಗೋದಾವರಿ ಮತ್ತು ಗಂಗಾ ನದಿಯ ನಂತರ ಅತಿಹೆಚ್ಚು ಒಳಹರಿವು ಮತ್ತು ಜಲಾನಯನ ಪ್ರದೇಶವನ್ನು ಹೊಂದಿದ ನಾಲ್ಕನೆಯ ಅತಿದೊಡ್ಡ ನದಿಯಾಗಿದೆ.

ಈ ನದಿಯು ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯ ಜೋರ್ ಗ್ರಾಮದಲ್ಲಿ 1300 ಎತ್ತರದ ಪಶ್ಚಿಮಘಟ್ಟದಲ್ಲಿ ಹುಟ್ಟುತ್ತದೆ. ಈ ನದಿಯು ಹೀಗೆ ಹರಿಯುತ್ತಾ ಹರಿಯುತ್ತಾ ಕೊನೆಗೆ ಬಂಗಳಕೊಲ್ಲಿಯನ್ನು ಸೇರುತ್ತದೆ.ಈ ನದಿಯು ಭಾರತದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಮೂಲಕ ಹಾದು ಹೋಗುತ್ತದೆ.ಇದು ಸುಮಾರು 1400 ಕಿಮೀ ಉದ್ದವಿದ್ದು 305 ಕಿಮೀ ಮಹಾರಾಷ್ಟ್ರದಲ್ಲಿ,483 ಕಿಮೀ ಕರ್ನಾಟಕದಲ್ಲಿ , 612 ಕಿಮೀ ಆಂಧ್ರಪ್ರದೇಶದಲ್ಲಿ ಹರಿಯುತ್ತದೆ.ಹೀಗೆ ಹರಿಯುತ್ತ ಸಾಗಿದಂತೆ ಅಲ್ಲಲ್ಲಿ ಪ್ರದೇಶದಲ್ಲಿ ಜನರ ತಮ್ಮ ಜೀವನಕ್ಕಾಗಿ ವಿವಿಧ ರೀತಿಯ ಉದ್ಯೋಗಕ್ಕಾಗಿ ಈ ನದಿ ಅವಲಂಬಿಸಿದ್ದಾರೆ.

ಇದು ಹಲವಾರು ಉಪನದಿಗಳನ್ನು ಹೊಂದಿದ್ದು.ಅದರಲ್ಲಿ 13 ಪ್ರಮುಖವಾದವು.ಘಟಪ್ರಭಾ,ಮಲಪ್ರಭಾ,ಭಿಮಾನದಿ,ತುಂಗಭದ್ರಾ,ಭೀಮಾನದಿ, ಮೂಸಿನದಿ,ಪಂಚಗಂಗಾ,ವಾರ್ನ, ಮತ್ತು ಯರ್ಲಾ.ಇವುಗಳಿಗೆ ಅಣೆಕಟ್ಟುಗಳನ್ನು ಕಟ್ಟಲಾಗಿದ್ದು ಕೃಷಿ ಭೂಮಿಗಳಿಗೆ ನೀರುಣಿಸುತ್ತವೆ. ಅಲ್ಲದೆ ಕೃಷ್ಣಾ ನದಿಯು ಹೆಚ್ಚಾಗಿ ದೇವಸ್ಥಾನಗಳ ಹತ್ತಿರ ಹಾದು ಹೋಗಿದ್ದರಿಂದ ಈ ನದಿ ಹಾಯ್ದು ಹೋದ ಸ್ಥಳಗಳನ್ನು ಜನರು ಪವಿತ್ರವಾದ ಸ್ಥಳಗಳೆಂದು ಪೂಜಿಸಲ್ಪಡುವುದಲ್ಲದೆ ಅಲ್ಲಲ್ಲಿ ದೇಗುಲಗಳು ಕೂಡ ನೆಲೆಗೊಂಡಿವೆ ಉದಾಹರಣೆ ಕೃಷ್ಣಾ ನದಿಯ ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಹತ್ತಿರ ಹೋಗಿದ್ದು.ಇಲ್ಲಿ ನಾಡ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನವು ನೆಲೆಗೊಂಡಿದೆ.ಇಲ್ಲಿ ಆಗಮಿಸುವ ಭಕ್ತರು ನದಿಯಲ್ಲಿ ಮಿಂದು ಪುನೀತರಾಗಿ ವೀರಭದ್ರನ ಕೃಪೆಗೆ ಪಾತ್ರರಾಗುತ್ತಾರೆ.

ಕೂಡಲಸಂಗಮದಲ್ಲಿ ಕೃಷ್ಣಾ ನದಿಯು ಘಟಪ್ರಭಾ ಮತ್ತು ಮಲಪ್ರಭೆಯ ಸೇರುವುದರಿಂದ ಮೂರು ನದಿಗಳ ಸೇರುವಿಕೆಗೆ ಸಂಗಮ ಎಂದು ಹೆಸರು ಬಂದಿದೆ ಹಾಗಾಗಿ ಈ ಸ್ಥಳಕ್ಕೆ ಕೂಡಲಸಂಗಮ ಎಂದು ಕರೆಯುವರು.ಐಕ್ಯ ಮಂಟಪ ಲಿಂಗಾಯತ ಧರ್ಮದ ಸ್ಥಾಪಕರಾದ ವಿಶ್ವಗುರು ಬಸವಣ್ಣನವರ ಪವಿತ್ರ ಸಮಾಧಿಯಲ್ಲಿ ಲಿಂಗವು ಸ್ವಯಂ ಜನ್ಮ ತಾಳಿದೆ ಎಂದು ನಂಬಲಾಗಿದ್ದು ಇದನ್ನು ನದಿಯ ನಡುವಲಿ ಸ್ಥಾಪಿಸಲಾಗಿದ್ದು.ಭಕ್ತರಿಗೆ ಹೋಗಲು ಅನುಕೂಲ ಕಲ್ಪಿಸಲಾಗಿದೆ.ಮತ್ತು ನದಿಯು ಪೂರ್ವಕ್ಕೆ ಮತ್ತೊಂದು ದಿವ್ಯ ಕ್ಷೇತ್ರವಾದ ಶ್ರೀಶೈಲಂ ಕಡೆ ಹರಿಯುತ್ತದೆ.ಆಂಧ್ರಪ್ರದೇಶದ ಕರ್ನುಲ್ ಬಳಿ ಸಂಗಮೇಶ್ವರ ಯಾತ್ರಾ ಕೇಂದ್ರದ ಬಳಿ ತುಂಗಭದ್ರಾ ಮತ್ತು ಭವಾನಾಸಿ ನದಿಗಳು ಕೃಷ್ಣಾ ನದಿಯನ್ನು ಸೇರುತ್ತವೆ.

ಈ ನದಿಯು ಭಕ್ತರ ಪಾಲಿನ ದೇವತೆಯಾಗಿದ್ದು. ಎಲ್ಲರೂ ದೈವ ಭಕ್ತಿಯಿಂದ ಕಾಣುತ್ತಾರೆ. ಇಲ್ಲಿ ಸ್ನಾನ ಮಾಡುವ ಮೂಲಕ ಸಕಲ ಪಾಪ ಕರ್ಮಗಳೆಲ್ಲ ದೂರ ಸರಿದು ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂಬುದು ಜನರ ನಂಬಿಕೆ. ಮಹಾರಾಷ್ಟ್ರ, ಕರ್ನಾಟಕ,ತೆಲಂಗಾಣ ರಾಜ್ಯಗಳ ಬಹಳಷ್ಟು ದೇಗುಲಗಳ ಹತ್ತಿರ ಈ ನದಿ ಸಾಗುವುದರಿಂದ ಇದಕ್ಕೆ ದೇವ ನದಿ ಎಂದು ಭಕ್ತರು ಕರೆಯುವುದುಂಟು. ಈ ನದಿಯ ದಡದಲ್ಲಿ 12 ವರ್ಷಗಳಿಗೊಮ್ಮೆ ಕೃಷ್ಣಾ ಪುಷ್ಕರಂ ಜಾತ್ರೆಯು ನಡೆಯುವುದರಿಂದ ಸಾವಿರಾರು ಭಕ್ತರು ಆಗಮಿಸುವುದರಿಂದ ಪ್ರಮುಖ ಆಕರ್ಷಣಿಯ ಕೇಂದ್ರವಾಗಿದೆ.

ಕೃಷ್ಣಾ ನದಿಯು ವಿಸ್ತಾರವಾದ ಪ್ರಶಾಂತವಾದ ಪ್ರದೇಶವನ್ನು ಹೊಂದಿದ್ದು ವನ್ಯ ಜೀವಿಗಳು, ಸಸ್ಯ ಸಂಕುಲ ಮತ್ತು ಪ್ರಾಣಿ ಸಂಕುಲಗಳಿಗೆ ಪ್ರಾಶಸ್ತ್ಯ ಸ್ಥಳವಾಗಿದೆ. ಈ ನದಿಯ ಕೊನೆ ಘಟ್ಟದಲ್ಲಿ mangro ಕಾಡುಗಳಿದ್ದು.ಈ ಪ್ರದೇಶವನ್ನು ಕೃಷ್ಣ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲಾಗಿದೆ.ಇದು ಹೆಚ್ಚಿನ ಪಕ್ಷಿಗಳಿಗೆ ಮತ್ತು ವಲಸೆ ಬರುವ ವೈವಿಧ್ಯಮಯ ಹಲ್ಕಿಗಳಿಗೆ ನೆಲೆಯಾಗಿದೆ. ಈ ಅಭಯಾರಣ್ಯದಲ್ಲಿ ವಿವಿಧ ರೀತಿ ಪ್ರಾಣಿಗಳನ್ನು ಕಾಣಬಹುದು.ಅಲ್ಲದೆ ಇಲ್ಲಿ ವಿಭಿನ್ನವಾದ ಸಸ್ಯ ಪ್ರಭೇಧಗಳನ್ನು ಕಾಣಬಹುದು.( ರೈಜೋಪೋರಾ,ಅವಿಸೇನಿಯಾ,ಐಜಿಸೇರೋಸ್ ಇತ್ಯಾದಿ)ಅಲ್ಲದೆ ಇದರ ಜಲಾನಯನ ಪ್ರದೇಶದಲ್ಲಿ ವಿವಿಧ ಅಭಯಾರಣ್ಯಗಳು ನೆಲೆಗೊಂಡಿವೆ.ಭದ್ರಾ ವನ್ಯಜೀವಿ,ಕೊಯ್ನಾ, ರಾಧಾನಗರಿ ಹೀಗೆ ವಿವಿಧ ಅಭಯಾರಣ್ಯಗಳು ಅಲ್ಲದೆ ಪಕ್ಷಿಧಾಮಗಳಾದ ಘಟಪ್ರಭಾ ಪಕ್ಷಿಧಾಮ,ಗುಡವಿ ಪಕ್ಷಿಧಾಮಗಳು ಕಂಡು ಬರುತ್ತವೆ.ಒಟ್ಟಿನಲ್ಲಿ ಇದು ಸಸ್ಯಗಳು,ಪ್ರಾಣಿಗಳ ಪಾಲಿಗೆ ಸಂಜೀವಿನಿಯಾಗಿ ಸದಾ ಪೋಷಿಸುತ್ತಿದೆ.

ಈ ನದಿಯ ಮೂಲಕ ಹಲವಾರು ಜಲಪಾತಗಳು ಸೃಷ್ಟಿಯಾಗಿವೆ.ಗೊಡಚೀನ ಮಲಕಿ,ಗೋಕಾಕ,ಮಲ್ಲೆಲ ತಿರಂ ಜಲಪಾತಗಳು ಹಾಲಿನ ನೊರೆಯಂತೆ ಹರಿದು ಸಾವಿರಾರು ಪ್ರವಾಸಿಗರನ್ನು ತನ್ನೆಡೆ ಸೆಳೆದು ಆಕರ್ಷಣೀಯ ಸ್ಥಳವಾಗಿ ನೆಮ್ಮದಿ ಕರುಣಿಸುವ ತಾಣಗಳಾಗಿವೆ.ಈ ನದಿ ಮುಖಾಂತರ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿ ರೈತರ ಭೂಮಿಗಳಿಗೆ ಉಸಿರಾಗಿದೆ.ಅಲ್ಲದೆ ಪ್ರಮುಖ ಅಣೆಕಟ್ಟಾದ ಆಲಮಟ್ಟಿ ಅಣೆಕಟ್ಟು ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗಳನು ತಣಿಸುವುದಲ್ಲದೆ ಪ್ರವಾಸಿ ಕೇಂದ್ರವಾಗಿ ಸಾಕಷ್ಟು ಆದಾಯವನ್ನು ತಂದುಕೊಡುತ್ತದೆ.ಈ ನದಿ ಭಾರತದ ವಿವಿಧ ಜಲ ವಿದ್ಯುತ್ ಕೇಂದ್ರಗಳಿಂದ ಅಧಿಕ ನೀರಿನ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ.ಅಲ್ಲದೆ ಹೆಚ್ಚಿನ ಪ್ರಮಾಣದ ವಿದ್ಯುತನ್ನು ಉತ್ಪಾದಿಸುವ ಕೇಂದ್ರವಾಗಿದೆ.

ಕೃಷ್ಣಾ ನದಿಯು ನಿಸರ್ಗದತ್ತವಾಗಿ ಪರೋಪಕಾರಿಯಾಗುವುದಲ್ಲದೆ ಈ ಜಲಾನಯನ ಪ್ರದೇಶವು ಸಾಕಷ್ಟು ಖನಿಜ ನಿಕ್ಷೇಪಗಳನ್ನು ಹೊಂದಿದೆ.ಈ ಪ್ರದೇಶಗಳಲ್ಲಿ ತೈಲ ಮತ್ತು ಅನಿಲ,ಕಲ್ಲಿದ್ದಲು,ಕಬ್ಬಿಣ,ಸುಣ್ಣದಕಲ್ಲು,ಡಾಲಮೈಟ್,ಚಿನ್ನ,ಲ್ಯಾಟರೈಟ್,ಯುರೇನಿಯಂ.ಮುಂತಾದ ಖನಿಜಗಳು ಶ್ರೀಮಂತಿಕೆಗೆ ಸಾಕ್ಷಿಯಾಗಿವೆ.

ಈ ನದಿಯ ಹೆಚ್ಚಿನ ಪ್ರಮಾಣದ ನೀರು ಕೃಷಿಗೆ ಬಳಕೆಯಾಗುತ್ತಿರುವುದರಿಂದ ಅತ್ಯಂತ ಕಡಿಮೆ ಪ್ರಮಾಣದ ನೀರು ಸಮುದ್ರ ಸೇರುತ್ತ್ತಿದೆ.ಇದರ ಜಲಾನಯನ ಪ್ರದೇಶ ಕಿರಿದಾಗುತ್ತಿದ್ದು, ಪರಿಸರ ವ್ಯವಸ್ಥೆ ಸಾವಿನ ಅಂಚಿನತ್ತ ಸಾಗುತ್ತಿದೆ ಎಂಬುದರ ಸೂಚಕವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನಗರ ಪ್ರದೇಶದ ತ್ಯಾಜ್ಯವು ನದಿ ಸೇರುವುದರಿಂದ ನೀರೆಲ್ಲ ಕಲುಷಿತವಾಗುತ್ತಿದೆ. ಜಲಾನಯನ ಪ್ರದೇಶದ ಜನಸಂಖ್ಯೆ ಮಿತಿಮೀರುತ್ತಿರುವುದರಿಂದ ಮಾಲಿನ್ಯದ ಹೊರೆಯು ನದಿಗೆ ಹೆಚ್ಚಾಗುತ್ತಿದೆ. ಹಾಗಾಗಿ ನದಿಯ ಪ್ರದೇಶದ ಸುತ್ತಲಿನ ಪರಿಸರ ಕಾಪಾಡಿ ನದಿಯನ್ನು ಸಂರಕ್ಷಿಸುವುದು ಎಲ್ಲರ ಹೊಣೆ.

ಕೃಷ್ಣಾ ನದಿ ಬಹಳ ವಿಸ್ತಾರವಾಗಿದ್ದು.ನಗರ ಪ್ರದೇಶಗಳಿಂದ ಬರುವ ತಾಜ್ಯವನ್ನು ಕಟ್ಟುನಿಟ್ಟಾಗಿ ತಡೆದು ಬೇರೆ ವ್ಯವ್ಯಸ್ಥೆ ಮಾಡಿ ನದಿಯನ್ನು ಉಳಿಸಬೇಕಿದೆ.ಅಲ್ಲದೆ ಜಲಾನಯನ ಪ್ರದೇಶದ ಸುತ್ತ ವಾಸಿಸುವ ಜನರಿಗೆ ಅರಿವು ಮೂಡಿಸುವುದರ ಮೂಲಕ ನದಿ ರಕ್ಷಿಸುವಲ್ಲಿ ಅವರ ಪಾತ್ರವನ್ನು ಮನದಟ್ಟಾಗಿಸಿ. ಕೃಷ್ಣೆಯನ್ನು ರಕ್ಷಿಸಬೇಕು.ನಾಡು ಸಮೃದ್ಧವಾಗಿರಬೇಕು.

ಹಿಂದಿನ ಸಂಚಿಕೆಗಳು :


  • ಅವಿನಾಶ ಸೆರೆಮನಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW