ನಾಲ್ಕು ಹನಿಗವಿತೆಗಳು

ಹೆಚ್. ಪಿ. ಕೃಷ್ಣ ಮೂರ್ತಿ ಅವರ ನಾಲ್ಕು ಹನಿಗವಿತೆಗಳನ್ನು ತಪ್ಪದೆ ಮುಂದೆ ಓದಿ…

ಕೊಡ ಹಿಡಿದು ತಾಸು ಗಟ್ಟಲೆ
ನಲ್ಲಿಯ ಮುಂದೆ ನಿಂತಳು
ನೀರೆ
ಕರುಣೆ ತೋರದ ನಲ್ಲಿ
ಒಂದು ಹನಿಯೂ ಸುರಿಸಲಿಲ್ಲ
ನೀರೇ

***

ವರುಷ ನಲವತ್ತು ದಾಟಿದರೂ
ಮದುವೆಯಾಗಲು ರೈತನಿಗೆ
ಸಿಗಲಿಲ್ಲ ನೀರೆ
ನೊಂದು ಆತ್ಮಹತ್ಯೆಗೆಂದು
ಕೆರೆಗೆ ಹಾರಲು ಬಂದ
ಇರಲಿಲ್ಲ ಅಲ್ಲಿ ನೀರೇ!

***

ಬೇಸಿಗೆಯಲಿ ಬಾಯಾರಿದಾಗ
ನಮ್ಮ ದಾಹ ತೀರಿಸುವುದು
ನೀರೇ
ಚಳಿಗಾಲದಲ್ಲಿ ಚಳಿಯಾದಾಗ
ನಮ್ಮ ಮೈ ಬೆಚ್ಚಗೆ ಮಾಡುವವಳು
ನೀರೆ!

***

ಅವನು ಬಾರಲ್ಲಿ ಕುಡಿಯುವಾಗ
ಮದ್ಯಕ್ಕೆ ಬೆರಿಸಿಕೊಳ್ಳುವುದು
ನೀರೇ
ತೂರಾಡಿ ಮನೆಗೆ ಬಂದಾಗ
ಅವನಿಗೆ ಬೆಂಡೆತ್ತುವವಳು
ನೀರೆ!


  • ಹೆಚ್. ಪಿ. ಕೃಷ್ಣ ಮೂರ್ತಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW