ನಲ್ಮೆಯ ‘ಕನ್ನಡ ಕಥಾಗುಚ್ಚ’ – ಚನ್ನಕೇಶವ ಜಿ ಲಾಳನಕಟ್ಟೆಕನ್ನಡ ಕಥಾಗುಚ್ಚ ನಾಲ್ಕನೇ ವಾರ್ಷಿಕೋತ್ಸಕ್ಕಾಗಿ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದ ವಿಶೇಷ ಗೀತೆ ಓದುಗರ ಮುಂದೆ. ಓದಿ…

ಕೋಟೆಯ ನಾಡಲಿ
ದೀಪವ ಹಚ್ಚುತ
ಕನ್ನಡ ಮೊಳಗಿತು ಬೆಳಗುತಲಿ
ಬೆಳಕನು ಬೀರಿತು
ಹೊಳಪನು ತೋರಿತು
ಕರುನಾಡ ಸಂಸ್ಕೃತಿ ಮೊಳಗುತಲಿ

ಭಾಷೆಯ ಪುಣ್ಯವ
ಪಸರಿಸಿ ಸಾರುವ
ದ್ವಾದಶ ಮಹಿಳಾ ನಿರ್ವಹಕರು
ತೆರೆಯಲಿ ಕಾಣದೆ
ತರತರ ಕಾರ್ಯವ
ಮಾಡಿದ ನವ ಸಂಘಟಕರು

ಪುಸ್ತಕದರಿವನು
ಮಸ್ತಕಕಿಳಿಸಲು
ಪರಿಪರಿ ಹೇಳಿದ ಅತಿಥಿಗಳು
ಭಾಷೆಯ ಬರೆಯಲು
ಕೋಷದಿ ಉಳಿಯಲು
ಅರಿವನು ತಿಳಿಸಿದ ಧೇನುಗಳು

ಮಾಸಿಕ ಪತ್ರಿಕೆ
ಜಾಗೃತವಾಯಿತು
ನೆಲ್ಮೆಯ ಸಾಹಿತ್ಯ ತೋರಣವು
ಕಥೆಗಳ ಹೂರಣ
ಭಾವದ ಪೂರಣ
ನಿರ್ವಾಹಕ ಸಂಘಟಕ ಮಕರಂದವು

ಸ್ಪರ್ಧೆಯ ಮಾಡುತ
ಪದಕವ ನೀಡುತ
ಬರೆಯಲು ಸ್ಪೂರ್ತಿಯ ವೇದಿಕೆಯು
ಅಮೂಲ್ಯ ಸಮಯವ
ಮೌಲ್ಯದಿ ತೆಗೆದಿಹ
ಹೆಮ್ಮೆಯ ಕನ್ನಡ ಕಥಾಗುಚ್ಚವು.


  • ಚನ್ನಕೇಶವ ಜಿ ಲಾಳನಕಟ್ಟೆ (ಖ್ಯಾತ ಕವಿಗಳು, ಲೇಖಕರು) ಬೆಂಗಳೂರು 

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW