“ನಾನು ಮತ್ತು ನಮ್ಮವರು” – ಪ್ರವೀಣ ಮ ಹೊಸಮನಿ

ಕರ್ನಾಟಕ ಸರಕಾರ ಯುವ ಸ್ಪಂದನ ಇಲಾಖೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ನಿಮ್ಹಾನ್ಸ್ ಇವರ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ 6 ದಿನಗಳ ತರಬೇತಿ ಕುರಿತು ನನ್ನನುಭವ ಪ್ರವೀಣ ಮ ಹೊಸಮನಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಹಳ್ಳಿಯಿಂದ ದೂರದ ರಾಜಧಾನಿಗೆ ಬೆಳಿಸಿದ ನಮ್ಮ ಪಯಣ ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಹೀಗೆ ಹಲವು ಜಿಲ್ಲೆಯಿಂದ ರಾಜಧಾನಿ ಬೆಂಗಳೂರಿಗೆ ಬಂದಿಳಿದು, ನಮ್ಮ ತರಬೇತಿ ಮುಖ್ಯ ಕೇಂದ್ರ ನಿಮ್ಹಾನ್ಸ್ ನಲ್ಲಿರುವ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗ, ಡಾ ಎಂ ವಿ ಗೋವಿಂದಸ್ವಾಮಿ ಕಟ್ಟಡ, ನಿಮ್ಹಾನ್ಸ್, ಹೊಸೂರು ರಸ್ತೆ, ಬೆಂಗಳೂರು ಇಲ್ಲಿ ನಡೆಯಲಿರುವ ಯುವ ಪರಿವರ್ತಕರ ಮೂಲ ಯುವಸ್ಪಂದನ ತರಬೇತಿ ಕಾರ್ಯಕ್ರಮಕ್ಕೆ ನಮ್ಮ ಎಲ್ಲಾ ಅಭ್ಯರ್ಥಿ ಪರಿವಾರ 17/10/2022 ರಿಂದ 22/10/2022 ರವರೆಗೆ ಇಲ್ಲಿಯೇ ನಮ್ಮೀ ಸಮಯಯವನ್ನು 6 ದಿನಗಳ ಕಾಲ ಕಳೆಯಬೇಕಾಯಿತು.

ಅಪರಿಚಿತರರ ನಡು ನಡುವೆ ಕಬಿನಿ ವಸತಿ ಗೃಹ ನಿಮ್ಹಾನ್ಸ್ ನಲ್ಲಿ ನಮ್ಮೆಲ್ಲರನ್ನು ತಲಾ 6 ಜನರನಂತೆ ಕೋಣೆಗಯಲ್ಲಿ ಉಳಿಯುವ ವ್ಯವಸ್ಥೆ ಮಾಡಿದ್ದರು.ಒಟ್ಟು 19 ಜನರ ನಮ್ಮ ಗುಂಪಲ್ಲಿ 4 ಜನ ಹೆಣ್ಣೈಕ್ಳು. ದಿನ ಕಳೆದಂತೆ ತರಬೇತಿಯು ಸುಸೂತ್ರವಾಗಿ ಜರಗತ್ತಲೇ ಬಂದಿತ್ತು. ಹೊತ್ತೊತ್ತಿಗಿ ಊಟಾ, ಐಷಾರಾಮಿ ವಸತಿ ಕೋಣೆಗಳು, ಇದರ ನಡುವೆ ಮನೆಯ ನೆನೆಪೇ ಇಲ್ಲದಂತೆ ಮನಕ್ಕೆ ಭಾಸವಾಯಿತು. ತರಬೇತುದಾರರ ಕುಚೇಷ್ಟೆ ಇವತ್ತಿಗಷ್ಟೇ ಸೀಮಿತವಿರದಂತೆ ಸದಾಕಾಲ ನೆನಪಿನಲ್ಲಿಡುವಂತೆ ಒಂದೊಳ್ಳೆ ನಂಟು ಬೆಳೆದು ಬಂತು..ಸಂಜೆ ಹೊತ್ತಿಗೆ ದಿನದ ತರಬೇತಿ ಕಾಲ ಮುಕ್ತಾಯವಾದ ಬಳಿಕ “ಏನಪ್ಪ ನಮ್ಮ ರೂಮದಾಗ ನಮ್ಮಕ್ಕಿಂತ ಬಾಳ ದೊಡ್ಡ-ದೊಡ್ಡವರ ಅದಾರ ಇವರ ಜೊಡಿ ನಾವ್ ಹೆಂಗ ಇರೋದೋ ಮಾರಾಯಾ” ಅನ್ನೋ ಮುಜುಗರಾ. ಅದೇನೋ ಗೊತ್ತಿಲ್ಲ,  ದಿನೇ ದಿನೇ ಮುಂದುವರೆದಂತೆ ಎಲ್ಲರೂ ನಿಸ್ವಾರ್ಥದ ಪ್ರೀತಿಯ ಬಂಧು ಮಿತ್ರರ ಪಾತ್ರ ತುಂಬಾ ಅನ್ಯುನ್ಯತೆಯ ಭಾವ ತೀರದ ಯಾನದಂತೆ ಬೆಳೆತಾ ಬಂತು. ವಯಸ್ಸಿನ ಅಂತರ ಸುಮಾರಿದ್ರು ಅವರ ಆಪ್ತ ಸ್ನೇಹ ಬಾಂಧುತ್ವ ಮನಸ್ಸನ್ನ ಹಗುರುಮಾಡುವ ಪ್ರೀತಿಯ ತೋರಿದ ನಮ್ಮ ಒಗ್ಗಟ್ಟಿನ ಮಿತ್ರತ್ವ.

ಪ್ರತಿದಿನವೂ ತರಬೇತಿಯ ಮುಕ್ತಾಯದ ನಂತರ ಸಂಜೆ ಉಪಹಾರ ಮುಗಿಸಿ ಕೋಣೆಗೆ ಬಂದಿದ್ದೆ ತಡಾ, ಎಲ್ರೂ… ತಾವ್ ಕಂಡ ಕುಚೇಷ್ಟೆಯ ಉಸಾಬಾರಿಯನ್ನ ವ್ಯಂಗ್ಯವಾಗಿ ಹಂಚಿಕೊಳ್ಳುವ ಪಂಚಾಯಿತಿ ಕಟ್ಟೆಯಂತೆ ನಮ್ಮ ರೂಮ್ ಒಂದು “ವ್ಯಂಗ್ಯ ನ್ಯಾಯಾಲಯದಂತೆ” ಇತ್ತು. ಅಕ್ಕ ಪಕ್ಕಾ ರೂಮಲ್ಲಿದ್ದ ಸ್ನೇಹ ಬಳಗವು ಸಹ ನಮ್ಮ ರೂಮಗೆ ಬರುವುದು ಅವರಿಗೆಲ್ಲ ಈ 6 ದಿನಗಳಲ್ಲಿ ರೂಢಿ ಆಗೋಗಬಿಟ್ತು. ಪ್ರತಿದಿನ ಹೀಗೆ ಮುಂದುವರೆಯುತ್ತಾ ಬಂತು ಒಂದಿನಾ ಒಂದ ವಿಷಯಾ ಅಂತಾ ನಮ್ಮ ಗುಂಪಲ್ಲಿದ್ದ ಒಬ್ಬ ಭೂಪ ಎದ್ದನಿಂತು ದಿನೇ ದಿನೇ ಗೊಳ್ಳು ನಿಮ್ಮ ಸುದ್ದಿಬೇಡಾ ಅಂತಂದು ಅದೇನಿದ್ರು ನಿಮ್ಮ ಜೀವನದಲ್ಲಾದ ನೈಜ್ಯ ವಿಷಯಗಳೇ ಆಗಬೇಕು ಅದು ವ್ಯಂಗ್ಯವಾಗನಾದ್ರೂ ಇರಲಿ… ದುಃಖದ ಸಂಗತಿಯಾದ್ರೂ ಇರಲಿ… ಅದೇನೆ ಇರಲಿ… ನಿಮ್ಮ ತೊಡರು,ಖುಷಿ,ವಿಚಾರವನ್ನ ಹೇಳಿಕೊಳಲಿಕ್ಕೆ ಇದೊಂದು ಮುಕ್ತ ಸಭೆ ಎಂದು ಪರಿಗಣಿಸಿ ಸಭೆಗೆ ಸೇರಲು ಎಲ್ಲರ ಒಪ್ಪಿಗೆಯೂ ಒಮ್ಮತದಿಂದ ಬಂತು…ಹೀಗೇಯೆ ಪ್ರತಿದಿನಾ ಒಬ್ಬೊಬ್ಬರ ವಿಚಾರಗಳನ್ನು ಮುಕ್ತವಾಗಿ ಯಾವುದೇ ಮುಜುಗರಾ ಇಲ್ಲದೇ ಸ್ವಮನಸ್ಸಿಂದ ಹೊರಹಾಕಿದವರು ನನ್ನ ಆತ್ಮೀಯರು.
ನನಗೂ ಇದೇ ಮೊದಲು ಏನಪ್ಪ ಎಲ್ಲ ಹಿಂತಹ ಘಟನೆಯನ್ನು ಮನಸ್ಸಲ್ಲೇ ಇಟ್ಕೊಂಡು ಹೊರನೋಟಕ್ಕೆ ಮುಖದ ಮೇಲೆ ನಗುವಿನಂತೆ ಇರೋದು ನಿಜಕ್ಕೂ ಅರ್ಥೈಸದ ಮಸ್ಸುಳ್ಳವರು ನನ್ನವರೆಂದೆನಿಸಿತು. ಇದರ ಜೊತೆ-ಜೊತೆಗೆ ತಮ್ಮ ಪ್ರೀತಿ-ಪ್ರೇಮದ ಕಥೆಯು ಬಿಚ್ಚಿಟ್ಟರು. ಹೀಗೆ ಸಾಮಾನ್ಯವಾಗಿ ತರಬೇತಿಯಲ್ಲೂ ಅವರ ಮೇಲೆ ಇವರಿಗೆ ಇವರ ಮೇಲೆ ಅವರಿಗೆ ಮನಸ್ಸಾಗಿದೆ ಅಣಾ ಅನ್ನೋ ಮಾತು ಸಹ ಅದನ್ನು ಸಹ ಅಷ್ಟೇ ಕುಶಲದಿಂದ ಖುಷಿಯಾಗಿ ಹೇಳಿಕೊಂಡವರು. ಇವರು ನನ್ನವರಲ್ಲ ನಮ್ಮವರು ಎಂದೆನಿಸಿತು.ಇನ್ನೇನು ತರಬೇತಿ ಮುಗಿಯೋ ಹಂತಕ್ಕ ಬಂತು ನಮ್ಮಲ್ಲಿದ್ದ ಮಿತ್ರರು ಕೆಲ ಹೆಣ್ಣೈಕ್ಳು ಸಹ ತಮ್ಮ ಭಾವನೆಯನ್ನ ಹಂಚಿಕೊಂಡು ಭಾವುಕರಾದರು.ಇನ್ನೂ ನಮ್ಮ ಗಂಡಮಕ್ಳು ಒಬ್ಬರನ್ನೊಬ್ಬರು ತಬ್ಬಕೊಂಡು ಅವ್ರು ಊರಿಗಿ ಹೋಗುವ ಸಮಯದಲ್ಲಿ  ಬಸ್ ಸ್ಟಾಪ್ ವರೆಗೂ ಬಿಟ್ಟ ಬಂದು ಕಣ್ಣಲ್ಲಿಯೇ ನೀರ ಹಿಡದಂತೆ ಭಾವುಕ ಮನಸ್ಸಿಂತೆ ಸ್ಥಬ್ದರಾದವರು.

ನಾನು ಮತ್ತು ನನ್ನವರು. ಈ ರೂಮ್ ಈ ನಮ್ಮ ಪಂಚಾಯಿತಿ ಎಂದಿಗೂ ಮರೆಯದ ಅನುಭವ. ಇದರಲ್ಲಿಯೇ ನನಗೆ ನನ್ನ ಆತ್ಮೀಯವಾಗಿ ನನ್ನ ಸ್ನೇಹಿತ ಒಬ್ಬ ‘ಹರೀಶ್’ ತನ್ನ ಅನುಭವವನ್ನೇ ಹೇಳುವ ಪರಿಯೇ ಚೆಂದವಾಗಿತ್ತು. ಈತ ನನ್ನ ಆತ್ಮೀಯವ, ದಾವಣಗೆರೆ ಜಿಲ್ಲೆಯವ ಆತನೂ ಸಹ ನಾವು ಭಾಗಶಃ  ಅದರಲ್ಲಿ ಉತ್ತರ ಕರ್ನಾಟಕದ ಹೈಕ್ಳೇ ಜಾಸ್ತಿ. ಅವನು ನಮ್ಮ ಮಾತು ನಮ್ಮ ಚೇಷ್ಟೆಗಳ ವಿಷಯ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಸಮಗ್ರವಾಗಿ ನಮ್ಮ ಜೊತೆನೆ ಆಲಿಸಿ ಪಾಲಿಸಿದವ ನಮ್ಮವ ಇವ. ಕೊನೆಗೆ ಅವನು ಹೇಳಿದ ಒಂದ ಮಾತು.. ‘ನಿಮ್ಮನ್ನ ನಿಮ್ಮ ಉತ್ತರ ಕರ್ನಾಟಕದ ಮಂದಿ ಬಗ್ಗೆ ಕೇಳಿದ್ನಿ ಮಾರಾಯ, ಆದ್ರ ಇಲ್ಲಿ ಬಂದ ಗೊತ್ತಾಗಬಿಟ್ತ… ನೀವು ನೋಡೋಕ ಮಾತಾಡ್ಲಕ್ಕ ಅಷ್ಟೇ ಹಾರ್ಡ, ಆದ್ರ ಮನಸ್ಸದಾಗ ಬೇಜಾನ ಶ್ರೀಮಂತ್ರರಿದಿರಿ ಬಿಡ್ರಿಲೇ ಪಾ…’ ಎಂದು ಎಲ್ಲರನ್ನೂ ಪ್ರೀತಿಯಿಂದ ಗಟ್ಟಿಯಾಗಿ ತಬ್ಬಕೊಂಡು ತನ್ನ ಅನಿಸಿಕೆಯನ್ನ ವ್ಯಕ್ತಪಡಿಸಿದ. ನನ್ನ ಆತ್ಮೀಯ ಗೆಳೆಯನಿಗೆ ನನ್ನ ಪ್ರೀತಿಯ ಧನ್ಯವಾದಗಳು..ಇದರನುಭವವಾಗಿ

ಕಣ್ಣಂಚಲಿ ನೀರಿಹಿಡಿದು ದುಃಖವನ್ನು
ಕರಗಿಸಿ ಕೊಳ್ಳುವ ಸ್ನೇಹ ಬಂಧತ್ವ ನನ್ನ
ಹೃದಯಸ್ಪರ್ಶಿ ಗೆಳೆತನ..

ಆಡುವ ಮಾತಲ್ಲಿ ಕೊಂಕಾಗದಂತೆ
ನಿಭಾಯಿಸುವ ಗೆಳೆತನ ನನ್ನ ಸ್ನೇಹಿತರದು
ಹುಡುಗಿಯರ ಕುಚೇಷ್ಟೆಗೆ ಹಾಸ್ಯದ
ಭಾವ ಮೂಡಿಸುವರು ನನ್ನವರು
ನನ್ನ ಸ್ನೇಹಿತರು..

ಅಪರಿಚಿತದಿಂದ ಬಂದು
ಪರಿಚಿತವಾಗಿ ಎದೆಯ ಒಡಲಲ್ಲಿ
ಭತ್ತದ ನಾಟಿಯಂತೆ ನೆಟ್ಟ ಸ್ನೇಹವೃಂದ ನನ್ನ ಸ್ನೇಹದು
ಕಡೆಗೂ ಬಿಟ್ಟು ಹೋಗುವ ನೆಪದಲ್ಲಿ
ಸ್ಪಟಿಕದಂತ್ತಿದ್ದ ಮನಸ್ಸುಗಳಲ್ಲಿ
ಕಲ್ಲರಳಿ ಹೂವಾಯಿತು..

ಬಿಟ್ಟರು ಬಿಡಲಾಗದ ಬಂಧನ
ನನ್ನ ಈ ಗೆಳೆತನ
ನಿಮ್ಮಿ ಈ ಪ್ರೀತಿ ಬಾಂಧವ್ಯಕ್ಕೆ
ನಿಮ್ಮ ..ಪ್ರವೀ.. ಸದಾ ಚಿರಋಣಿ


  • ಪ್ರವೀಣ ಮ ಹೊಸಮನಿ – ಯುವ ಲೇಖಕ, ಕವಿಗಳು, ವಿಜಯಪುರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW