ನೇತಾಜಿ ನೀವು ಅಸಹಾಯ ಶೂರ ಭಾರತಾಂಬೆಯ ಹೆಮ್ಮೆ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಪರಾಕ್ರಮದ ಕೆಚ್ಚು
ಸ್ವಾತಂತ್ರ್ಯದ ಕಿಚ್ಚು
ದೇಶಪ್ರೇಮದ ಮೆಚ್ಚು
ತೋಳ್ಬಲದ ನೆಚ್ಚು
ಯುವಶಕ್ತಿಯಲಿ ನಂಬಿಕೆ
ಮೌಲ್ಯಗಳ ಶ್ರೀಮಂತಿಕೆ
ಮನೆತನದ ಸುಸಂಸ್ಕೃತಿಕೆ
ಧ್ಯೇಯಸಾಧನೆಯ ಪ್ರಾಮಾಣಿಕತೆ
ಜನತೆಯ ದಾರುಣತೆಗೆ
ಮಿಡಿತ
ಗುಲಾಮಗಿರಿಯ ಬಿಡುಗಡೆಯ ತ್ವರಿತ
ಅರವಿಂದ,ವಿವೇಕಾನಂದರಿಂದ ಪ್ರೇರಿತ
ಆತ್ಮಶ್ರೀ ಅವಲಂಬಿತ ಸ್ವಾತಂತ್ರ್ಯ ಕನಸುತ
ಧುಮುಕಿದರು ಧಿಕ್ಕರಿಸಿ
ತಮ್ಮ ಸ್ವಾರ್ಥವ
ಸ್ವಾಯತ್ತತೆಯ ಕನಸಿನ ಅಮೃತತ್ವದ ಸ್ವಾವಲಂಬನೆಯ
ಗುರಿ ಸಾಧನೆಯ ಗಮ್ಯದೆಡೆಗೆ
ನೇತಾಜಿ ನೀವು ಅಸಹಾಯ ಶೂರ
ಭಾರತಾಂಬೆಯ ಹೆಮ್ಮೆಯ ಅಮರ ಕುವರ
ಕೇಳುತಿದ್ದರೆ ನಿಮ್ಮ ಜೀವನದ ಪ್ರವರ
ಧಮನಿಧಮನಿಯಲಿ ಹೇಡಿಗೂ ಬಿಸಿನೆತ್ತರುಕ್ಕಿಸುವ ಹೆಮ್ಮೆಯ ಸರದಾರ
ಕ್ರಾಂತಿಯಾ ಕಿಡಿ
ಬಿಡುಗಡೆಗೆ ರಹದಾರಿ
ನಾಯಕತ್ವದ ನುಡಿ
ರೇಡಿಯೋ ಪ್ರಸಾರದ ಒಡನಾಡಿ
ದೇಶದಾ ದುಸ್ಥಿತಿಗೆ ಹಿಡಿದು ಕನ್ನಡಿ
ಬರೆದಿರಿ ಶೀಘ್ರ ಸ್ವಾತಂತ್ರ್ಯಕೆ ಮುನ್ನುಡಿ
ವಿದೇಶೀ ನೆಲದಲ್ಲೂ ಗಳಿಸಿತೊ
ಮನ್ನಣೆಯ
ದ್ರೋಹಿಗಳ ನಿದ್ದೆಗೆಡಿಸಿತೋ
ಆಜಾದ್ ಹಿಂದ್ ಪಡೆ
ಕಡೆಗಣಿಸಿಲ್ಲ ನೇತಾಜಿ ಮಹಿಳೆಯ ಶಕ್ತಿಯ
ಕಟ್ಟಿದರು ಹೆಮ್ಮೆಯ ಝಾನ್ಸಿ ಪಡೆಯ
ಒರಿಸ್ಸಾದ ಕಟಕ್ನಲಿ ಜನಿಸಿದ
ಕ್ಷಾತ್ರ
ಜಾನಕೀನಾಥ್ ಬೋಸ್ ಪ್ರಭಾವತಿಯರ ಧೀರಪುತ್ರ
ನಡುಗಿಸಿತು ಬ್ರಿಟಿಷರ ಆಡಳಿತ ಯಂತ್ರ
ಅಜರಾಮರವಾಯಿತು ಈ ಸ್ವಾತಂತ್ರ್ಯ ನಕ್ಷತ್ರ
ಮರೆಯಬಾರದ ಹೆಸರು
ಭಾರತದ ಚರಿತ್ರೆಯಲಿ
ಮರೆತರೆ ಅನರ್ಹರು ನಾವು
ಜೀವಿಸಲು ಇಲ್ಲಿ
ಯುವಶಕ್ತಿಯ ಕೆಚ್ಚು ಮಿಡಿಯಲು ಬೇಕು ಈ ಹೆಸರು
ಭಾರತಾಂಬೆಯ ಧಮನಿಯಲಿ
ಧನ್ಯರಾಗುವ ನಾವು ಸ್ತುತಿಸುತ
ಇವರ
ಮಣಿಯುತ ಧನ್ಯರಾಗುವ ನಾವು
ಈ ಅಸೀಮ ಚೇತನಕೆ ಅದುವೆ ವ
*
ಜೈ ಹಿಂದ್
‘ಕದಂ ಕದಂ ಬಢಾಯೇ ಜಾ…ಖುಷಿ ಕಾ ಗೀತ್ ಗಾಯೇಜಾ…
ಯೇ ಜಿಂದಗಿ ಹೈ ಕೌಮ್ ಕೀ …
ಕೌಮ್ ಪೇ ಲುಟಾಯೆ ಜಾ’
ನೇತಾಜೀ ಕೀ ಜೈ
ಪ್ಯಾರಾ ಹೈ ನಾಮ್ ಬೋಲೋ ಸುಭಾಷ್ ಚಂದ್ರ ಬೋಸ್ ಜೀ ಕೀ….ಜೈ
ಜನವರಿ ಇಪ್ಪತ್ತಮೂರು ಎರಡು ಸಾವಿರದ ಇಪ್ಪತ್ತೈದು.
- ಶಿವದೇವಿ ಅವನೀಶಚಂದ್ರ
