“ನೊಬೆಲ್ ಪ್ರಶಸ್ತಿ”ಯ ಹಿನ್ನೆಲೆಜಗತ್ತಿನ ಅತ್ಯುನ್ನತ ಹಾಗೂ ಪ್ರತಿಷ್ಠಿತ ಪ್ರಶಸ್ತಿ ಯಾವುದೆಂದರೆ ಅದು ನೊಬೆಲ್ ಪ್ರಶಸ್ತಿ. ಈ ಪ್ರಶಸ್ತಿಯ ಹುಟ್ಟು, ಹಿನ್ನೆಲೆ ಕುರಿತಾದ ಉಪಯುಕ್ತ ಮಾಹಿತಿಯನ್ನು ಲೇಖಕರಾದ ಶಿವಕುಮಾರ್ ಬಾಣಾವರ ಅವರು ನೀಡಿದ್ದಾರೆ. ಓದಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

ನೊಬೆಲ್ ಪ್ರಶಸ್ತಿಯನ್ನು ಅತ್ಯಂತ ಶ್ರೇಷ್ಠ ವಿಜ್ಞಾನಿಯಾದ ಸ್ವೀಡನ್ ದೇಶದ ಆಲ್ಫ್ರೆಡ್ ನೊಬೆಲ್ ಅವರ ಪುಣ್ಯಸ್ಮರಣೆ ಅಂಗವಾಗಿ ಡಿಸೆಂಬರ್ ೧೦ ರಂದು ಮನುಕುಲದ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ವ್ಯಕ್ತಿಗಳನ್ನು ಪ್ರಪಂಚದಾದ್ಯಂತ ಗುರುತಿಸಿ ಅತ್ಯುನ್ನತ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ನೊಬೆಲ್ ಪ್ರಶಸ್ತಿಯ ಹಿನ್ನೆಲೆ

ಆಲ್ಫ್ರೆಡ್ ನೊಬೆಲ್ ರವರು ಒಬ್ಬ ಸ್ವೀಡನ್ ದೇಶದ ವಿಜ್ಞಾನಿ, ಇವರು ಡೈನಮೈಟ್ ಹಾಗೂ ಜಿಲೆಟಿನ್ ಕಡ್ಡಿಗಳನ್ನು ಆವಿಷ್ಕಾರ ಮಾಡುತ್ತಾರೆ. ಆವಿಷ್ಕಾರದ ಉದ್ದೇಶ ಕಾರ್ಮಿಕರು ರೈಲು ಹಳಿಗಳನ್ನು ಎಳೆಯುವಾಗ ಅಥವಾ ನಿರ್ಮಿಸುವಾಗ ಹಾಗೂ ಅಣೆಕಟ್ಟುಗಳನ್ನು ನಿರ್ಮಿಸುವಾಗ ದೊಡ್ಡ ದೊಡ್ಡ ಕಲ್ಲುಬಂಡೆಗಳು ಎದುರಾಗುತ್ತಿದ್ದವು.

ಕಾರ್ಮಿಕರು ಬಂಡೆಗಳನ್ನು ಪುಡಿಮಾಡಲು ಬಹಳ ಕಷ್ಟಪಡುತ್ತಿದ್ದರು. ಈ ಕೆಲಸವನ್ನು ಮುಗಿಸಲು ಬಹಳ ದಿನಗಳು ಬೇಕಾಗುತಿದ್ದವು . ಹಾಗಾಗಿ ಎದುರಾಗುವ ಬಂಡೆಗಳನ್ನು ಪುಡಿಮಾಡಲು, ಆಲ್ಫ್ರೆಡ್ ನೊಬೆಲ್ ರವರು ಈ ಆವಿಷ್ಕಾರಕ್ಕೆ ಕೈ ಹಾಕುತ್ತಾರೆ. ತಮ್ಮ ಆವಿಷ್ಕಾರಕ್ಕೆ ಪೇಟೆಂಟ್ ಅನ್ನು ತೆಗೆದುಕೊಳ್ಳುತ್ತಾರೆ. ಈ ಆವಿಷ್ಕಾರದಿಂದ ಆಲ್ಫ್ರೆಡ್ ನೊಬೆಲ್ ರವರಿಗೆ ಹಲವಾರು ರಾಷ್ಟ್ರಗಳಿಂದ ಹಣದ ಹೊಳೆಯೇ ಹರಿದು ಬರುತ್ತದೆ.

ಆವಿಷ್ಕಾರದಿಂದ ಹಲವಾರು ವಿದ್ವಂಸಕ ಕೃತ್ಯಗಳು ಆರಂಭವಾಗುತ್ತವೆ. ರೈಲಿನ ಹಳಿಗಳ ಮೇಲೆ, ಅಣೆಕಟ್ಟುಗಳನ್ನು ನಾಶಮಾಡಲು ಡೈನಾಮೈಟ್ ಗಳನ್ನು ಬಳಸಿ, ದುಷ್ಕರ್ಮಿಗಳು ಹಲವಾರು ಜನರ ಪ್ರಾಣವನ್ನು ತೆಗೆದುಕೊಳ್ಳುತ್ತಾರೆ.

ಅದೊಂದು ದಿನ, ಒಂದು ಪ್ರತಿಷ್ಠಿತ ಪತ್ರಿಕೆ ಕಛೇರಿಗೆ ಅನಾಮಧೇಯ ಕರೆಯೊಂದು ಬರುತ್ತದೆ. ಅನಾಮಧೇಯ ವ್ಯಕ್ತಿಯೊಬ್ಬ ನೊಬೆಲ್ ರವರು ವಿಧಿವಶರಾದರೆಂದು ಸುಳ್ಳುಸುದ್ದಿ ನೀಡುತ್ತಾರೆ. ಪತ್ರಿಕೆಯ ಸಂಪಾದಕರು ಈ ವಿಷಯವನ್ನು ಪರಿಶೀಲಿಸದೆ, ಪತ್ರಿಕೆಯಲ್ಲಿ ಸುದ್ದಿಯನ್ನು ಪ್ರಕಟಿಸುತ್ತಾರೆ. ಪ್ರಕಟವಾದ ಸುದ್ದಿಯನ್ನು ಸ್ವತಃ ಆಲ್ಫ್ರೆಡ್ ನೊಬೆಲ್ ರವರೇ ಓದುತ್ತಾರೆ.ಸುದ್ದಿ ಹೀಗಿರುತ್ತದೆ :

ಸಾವಿನ ದಳ್ಳಾಳಿ ಸತ್ತ, ವ್ಯಕ್ತಿ ಹುಟ್ಟಲೇ ಬಾರದಿತ್ತು. ಅನೇಕ ಜನರ ಸಾವಿಗೆ ಕಾರಣಕರ್ತನಾದ ವ್ಯಕ್ತಿ ವಿಧಿವಶರಾದನೆಂದು ಪ್ರಕಟವಾಗಿರುತ್ತದೆ. ಈ ಸುದ್ದಿಯನ್ನು ಓದಿದ ಆಲ್ಫ್ರೆಡ್ ನೊಬೆಲ್ ರವರು ಎಷ್ಟು ದಿನಗಳಿಂದ ಗಳಿಸಿದ ಗೌರವ, ಹಣ ಇದ್ಯಾವುದೂ ನನ್ನದಲ್ಲ, ನನ್ನಿಂದ ಮನುಕುಲಕ್ಕೆ ಬಹಳ ತೊಂದರೆಯಾಗಿದೆ ಎಂದು ತಿಳಿದು, ಒಂದು ಉಯಿಲನ್ನು ಸಿದ್ಧಪಡಿಸುತ್ತಾರೆ.

ಉಯಿಲಿನಲ್ಲಿ. ನಾನು ಸತ್ತ ನಂತರ, ನನ್ನ ಖಾತೆಯಲ್ಲಿ ಇರುವಂತಹ ನಾನು ಗಳಿಸಿರುವ ಎಲ್ಲಾ ಹಣವನ್ನು ಪ್ರತ್ಯೇಕ ಖಾತೆಯಲ್ಲಿ ಇರಿಸಿ, ಅದರಲ್ಲಿ ಬರುವ ಬಡ್ಡಿ ಹಣದಿಂದ ಮನುಕುಲಕ್ಕೆ ಶ್ರಮಿಸುತ್ತಿರುವ ಅಥವಾ ದುಡಿಯುತ್ತಿರುವ ಪ್ರಪಂಚದಾದ್ಯಂತ ಇರುವಂತಹ ವ್ಯಕ್ತಿಗಳಿಗೆ ಯಾವುದೇ ಪ್ರಾದೇಶಿಕತೆ ,ಜಾತಿ ,ಧರ್ಮ , ಲಿಂಗಭೇದ ಇದಾವುದನ್ನು ನೋಡದೆ, ಅವರ ಪರಿಶ್ರಮಕ್ಕೆ ಪ್ರಶಸ್ತಿಯನ್ನು ನೀಡಬೇಕೆಂದು ಬರೆದಿರುತ್ತಾರೆ.

ಆಲ್ಫ್ರೆಡ್ ನೊಬೆಲ್ ರವರು ಡಿಸೆಂಬರ್ ೧೦, ೧೮೯೬ ರಂದು ವಿಧಿವಶರಾಗುತ್ತಾರೆ. ನಾಲ್ಕು ವರ್ಷಗಳ ನಂತರ ಅಂದರೆ ಸಾವಿರದ ಒಂಬೈನೂರ ಒಂದರಿಂದ (೧೯೦೧ ) ನೋಬೆಲ್ ಪ್ರಶಸ್ತಿಯನ್ನು ಅಲ್ಫ್ರೆಡ್ ನೋಬೆಲ್ ರವರ ಪುಣ್ಯಸ್ಮರಣೆ ಅಂಗವಾಗಿ ಡಿಸೆಂಬರ್ ೧೦ ರಂದು ಐದು ಕ್ಷೇತ್ರಗಳಿಗೆ ನೀಡಲು ಪ್ರಾರಂಭಿಸುತ್ತಾರೆ.

ನೊಬೆಲ್ ರವರ ಪೂರ್ಣ ಹೆಸರು : ಆಲ್ಫ್ರೆಡ್ ಬೆರ್ನ್ಹಾರ್ಡ್ ನೊಬೆಲ್,  ಜನನ: ೨೧ ಅಕ್ಟೋಬರ್ ೧೮೩೩ ಮರಣ: ೧೮ ಡಿಸೆಂಬರ್ ೧೮೯೬

ಆ ಐದು ಕ್ಷೇತ್ರಗಳು ಯಾವುವು :

ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ , ಸಾಹಿತ್ಯ ಹಾಗೂ ಶಾಂತಿ. ಹಾಗೂ ೧೯೬೮ ರಲ್ಲಿ ಅರ್ಥಶಾಸ್ತ್ರಕ್ಕೆ ಪ್ರಶಸ್ತಿ ಪ್ರದಾನ ಮಾಡುವುದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ೧೯೬೯ ರಿಂದ ಪ್ರಶಸ್ತಿ ನೀಡಲು ಪ್ರಾರಂಭವಾಗುತ್ತದೆ.

ಪ್ರಸ್ತುತ ಆರು ಕ್ಷೇತ್ರಗಳಿಗೆ ನೀಡಲಾಗುವ ಅತ್ಯುನ್ನತ್ತ ನೊಬೆಲ್ ಪ್ರಶಸ್ತಿ:

ಅರ್ಥಶಾಸ್ತ್ರ , ರಸಾಯನಶಾಸ್ತ್ರ , ವೈದ್ಯಕೀಯ ಭೌತಶಾಸ್ತ್ರ ಹಾಗೂ ಸಾಹಿತ್ಯ ಈ ಐದು ವಿಭಾಗಗಳಿಗೆ “ಸ್ವೀಡನ್” ದೇಶದ ರಾಜಧಾನಿಯಾದ “ಸ್ಟಾಕ್ಹೋಮ್ನ” ನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಹಾಗೆಯೇ ಶಾಂತಿ ವಿಭಾಗಕ್ಕೆ ಮಾತ್ರ “ನಾರ್ವೆ“ಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಭಾರತಕ್ಕೆ ಸಂಬಂಧಿಸಿದ ನೊಬೆಲ್ ಪುರಸ್ಕೃತ ವ್ಯಕ್ತಿಗಳ ಪಟ್ಟಿ :

  • ೧೯೧೩ – ರವೀಂದ್ರನಾಥ ಟಾಗೋರ್ ಅವರು ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ( ಸಾಹಿತ್ಯ ವಿಭಾಗ)

  • ೧೯೩೦ – ಸರ್ ಸಿ.ವಿ ರಾಮನ್ ರವರು ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವಿಜ್ಞಾನಿ (ಭೌತಶಾಸ್ತ್ರ ವಿಭಾಗ)

  • ೧೯೭೯- ಮದರ್ ತೆರೇಸಾ (ಶಾಂತಿ ವಿಭಾಗ) ಮೂಲತಃ ಭಾರತಕ್ಕೆ ಸೇರಿದವರಲ್ಲ

  • ೧೯೯೮ – ಅಮರ್ತ್ಯಸೇನ್ (ಅರ್ಥಶಾಸ್ತ್ರ ವಿಭಾಗ)

  • ೨೦೧೪ – ಕೈಲಾಸ್ ಸತ್ಯಾರ್ಥಿ (ಶಾಂತಿ ವಿಭಾಗ) ಪಾಕಿಸ್ತಾನದ ಮಲಾಲಾ ಯೂಸುಫ್ ರವರೊಂದಿಗೆ ಪ್ರಶಸ್ತಿಯನ್ನು ಹಂಚಿ ಕೊಳ್ಳಲಾಗಿದೆ.

  • ೨೦೧೯ – ಅಭಿಜಿತ್ ಬ್ಯಾನರ್ಜಿ (ಅರ್ಥಶಾಸ್ತ್ರ ವಿಭಾಗ) ಮೂಲತಃ ಭಾರತದವರು, ಅಮೆರಿಕದಲ್ಲಿ ನೆಲೆಸಿರುತ್ತಾರೆ.

  • ಶಿವಕುಮಾರ್ ಬಾಣಾವರ

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW