ಬರಿದಾಗುತ್ತಿರುವ ತೈಲ ನಿಕ್ಷೇಪಗಳು? – (ಭಾಗ- ೧)ಇಂಧನ ತೈಲವು ಹಲವಾರು ರೂಪದಲ್ಲಿ ಸಿಗುತ್ತಿದೆ. ಅವುಗಳಲ್ಲಿ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಮಾತ್ರ  ಪ್ರಮುಖವಾಗಿವೆ. ಕಾರಣ ಜಗತ್ತಿನ ಪ್ರತಿ ಶತ ೬೧ ಶಕ್ತಿಯ ಉತ್ಪಾದನೆ ಈ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲದ ಮೇಲೆ ಅವಲಂಬಿಸಿದೆ. ಇನ್ನಷ್ಟು ವಿಷಯಗಳನ್ನು ಲೇಖಕ ಪ್ರಕಾಶ್ ಉಳ್ಳೆಗಡ್ಡಿ ಅವರು ಓದುಗರೊಂದಿಗೆ ಹಂಚಿಕೊಡಿದ್ದಾರೆ.ಮುಂದೆ ಓದಿ…

ಅರ್ಥಿಕ ಜಗತ್ತಿನ ಜೀವನಾಡಿಯಲ್ಲಿ ಹರಿಯುತ್ತಿರುವುದು ಇಂಧನ. ಇಂಧನವಿಲ್ಲದ ಜಗತ್ತನ್ನ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂಧನ ಹಲವಾರು ರೂಪದಲ್ಲಿ ಸಿಗುತ್ತಿದ್ದರು ಅವುಗಳಲ್ಲಿ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಮಾತ್ರ  ಪ್ರಮುಖವಾಗಿವೆ. ಕಾರಣ ಜಗತ್ತಿನ ೬೧ ಪ್ರತಿಶತ ಶಕ್ತಿಯ ಉತ್ಪಾದನೆ ಈ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲದ ಮೇಲೆ ಅವಲಂಬಿಸಿದೆ. ಬ್ರಹತ ಕೈಗಾರಿಕಾ ಘಟಕಗಳು, ಹೆದ್ದಾರಿಗಳ ನಿರ್ಮಾಣ, ಸರಕು ಸಾಗಣೆ, ವಿಮಾನಯಾನ, ಸಾಗರಯಾನ, ರಸ್ತೆಸಂಚಾರ, ಕಾರು, ಬೈಕು, ದಿನನಿತ್ಯ ಬಳಕೆದಾರರ ಉತ್ಪನ್ನಗಳು ಮುಂತಾದವುಗಳೆಲ್ಲ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲದ ಮೇಲೆಯೇ ಹೆಚ್ಛು ಅವಲಂಬನವಾಗಿವೆ. ಜಗತ್ತಿನ ಆರ್ಥಿಕತೆ, ಜನರ ಜೀವನ ಶೈಲಿ, ದಿನನಿತ್ಯದ ಬೇಕುಬೇಡಗಳಿಗೆ ಈ ಮುಗಿದು ಹೋಗುವ ಸಂಪನ್ಮೂಲಗಳ ಮೇಲೆ ಈ ಪ್ರಮಾಣದಲ್ಲಿ ಮಾನವನ ಅವಲಂಬನವಾಗಿರುವುದು ಸರಿಯೋ ತಪ್ಪೋ ಎಂದು ಪ್ರಶ್ನಿಸಿದರೆ ಉತ್ತರ ತಪ್ಪು ಎನಿಸುತ್ತಿದೆ ಕಾರಣ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲಗಳು ಮುಂದಿನ ೫೦ ವರ್ಷಗಳಿಗೆ ಸಾಕಾಗುವಷ್ಟು ಮಾತ್ರ ಲಭ್ಯವಿದೆ. ಇವುಗಳ ಮೇಲಿನ ಅವಲಂಬನವನ್ನ ಕ್ರಮೇಣ ಕಡಿಮೆ ಮಾಡುತ್ತಾ ಪರ್ಯಾಯ ಇಂಧನಗಳನ್ನ, ಪರ್ಯಾಯ ವ್ತವಸ್ಥೆಗಳನ್ನ ಪರಿಷ್ಕರಿಸಿ ಅಭಿವ್ರದ್ಧಿ ಪಡಿಸಿದ್ದರೆ ಭವಿಷ್ಯ ಭದ್ರವಾಗಿರುತ್ತಿತ್ತು ಆದರೆ ಹಾಗೆ ಮಾಡದೆ ಬರುವ ೨೦೭೦ನೆ ಇಸ್ವಿಗೆ ಬಹುದೊಡ್ಡ ಗಂಡಾಂತರವನ್ನ ಎದುರು ನೋಡುತ್ತಿದ್ದೇವೆ, ಕಾರಣ ಕಚ್ಛಾತೈಲ ಮತ್ತು ನೈಸರ್ಗಿಕ ಅನಿಲ ಆ ವೇಳೆಗೆ ಸಂಪೂರ್ಣವಾಗಿ ಮುಗಿದು, ಪರ್ಯಾಯ ಇಂಧನ ಇಲ್ಲದೆ ಈ ಕಾರು, ಬೈಕು, ವಿಮಾನ, ಹಡಗು, ಕಂಪ್ಯೂಟರಗಳ ಗತಿ ಏನು?. ಇಂದಿನ ಥಳಕು ಬಳಕಿನ ಜಗತ್ತು ಕತ್ತಲೆಯಾಗಲಿದೆಯೇ?. ಮುಂದೆ ಬರುವ ಭೀಕರ ದಾರುಣ ಸ್ಠಿತಿಗೆ ನಾವೆ ಮುನ್ನುಡಿ ಬರೆಯುತ್ತಿದ್ದೆವೆಯೇ?. ಅದರ ಕುರಿತಾಗಿಯೇ ಈ ಲೇಖನ..

ಫೋಟೋ ಕೃಪೆ : timesofoman

ಏನಿದು ಕಚ್ಛಾತೈಲ ಮತ್ತು ನೈಸರ್ಗಿಕ ಅನಿಲ?. ನಮಗೆಲ್ಲ ತಿಳಿದ ಹಾಗೆ ಈ ಭೂಮಿ ಸುಮಾರು ೭೫ ಪ್ರತಿಶತ ನೀರಿನಿಂದ ಆವೃತವಾಗಿದೆ. ಭೂಮಿಯ ಮೇಲೆ ಪ್ರಾಣಿ, ಪಕ್ಷಿ, ಸಸ್ಯಗಳ ಜೀವಸಂಕುಲ ಇರುವಂತೆ ಸಮುದ್ರದ ನೀರಿನಲ್ಲೂ ಕೂಡ ಜೀವಸಂಕುಲ ಇದೆ. ನೀರಿನಲ್ಲಿ ಜೀವಿಸಿ ನಶಿಸಿದ ಜೀವ ಸಂಕುಲ, ಸಸ್ತನಿಗಳು, ಸಸ್ಯಗಳು ಸತ್ತು ಸಮುದ್ರದ ಅಡಿಯನ್ನು ಸೇರಿದವು. ಹೀಗೆ ಸಾವಿರ ಸಾವಿರ ವರ್ಷಗಳಿಂದ ನಿರಂತರ ನಶಿಸಿದ ಕಳೆಬರಗಳು, ಸಮುದ್ರದ ಸಸ್ಯಗಳು, ಆಳವಾದ ನೀರಿನಲ್ಲಿ ಆಮ್ಲಜನಕ ಸಿಗದೆ ಕೊಳೆತು ನಾಶವಾಗದೆ ಒಂದರ ಮೇಲೆ ಇನ್ನೊಂದು ಬಿದ್ದು ದೊಡ್ಡ ದೊಡ್ಡ ಪದರುಗಳೆ ನಿರ್ಮಾಣವಾದವು. ಈ ಪದರುಗಳ ಮೇಲೆ ಅತೀಯಾದ ಒತ್ತಡದಿಂದ ಕೆಳಗಿದ್ದ ಕಳೆಬರಗಳು ರಾಸಾಯನಿಕ ಕ್ರಿಯೆಯಿಂದ ತೈಲ ಮತ್ತು ನೈಸರ್ಗಿಕ ಅನಿಲವಾಗಿ ಮಾರ್ಪಟ್ಟವು, ಕಲ್ಲು ಮಣ್ಣುಗಳ ಪದರಿನಲ್ಲಿ ಬಂದಿಸಲ್ಪಟ್ಟ ಕಚ್ಛಾತೈಲ ಮತ್ತು ನೈಸರ್ಗಿಕ ಅನಿಲಗಳ ದಾಸ್ತಾನುಗಳೇ ನಿಕ್ಷೇಪಗಳಾದವು. ಭೂಮಿಯ ಪದರುಗಳು ಸದಾ ಬದಲಾಗುತ್ತಿರುವ ಕಾರಣ ಕ್ರಮೇಣ ಸಮುದ್ರದ ನೀರು ಸರಿದು ಈಗ ಭೂಮಿಯ ಮೇಲು ಕಚ್ಛಾತೈಲ ಮತ್ತು ನೈಸರ್ಗಿಕ ಅನಿಲವನ್ನು ತೆಗೆಯುವುದನ್ನ ನೋಡುತ್ತೆವೆ. ಇಂಜನೀಯರಗಳು ಇಂತಹ ತೈಲ ನಿಕ್ಷೇಪಗಳನ್ನು ಗುರುತಿಸಿ ಭೂಮಿಯನ್ನು ಕೊರೆದು ಕೊಳವೆ ಜೋಡಿಸಿ ತೈಲ ಮತ್ತು ನೈಸರ್ಗಿಕ ಅನಿಲವನ್ನ ಹೊರತೆಗೆದು ಸಂಸ್ಕರಣೆ ಮಾಡಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ.

ಫೋಟೋ ಕೃಪೆ : tamil.goodreturns

೧೮೫೯ರಲ್ಲಿ ಎಡ್ವಿನ್ ಡ್ರೇಕ್ ಎನ್ನುವವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ಮೊಟ್ಟಮೊದಲ ತೈಲ ಕೊಳವೆಯನ್ನ ಕೊರೆದರು. ನಂತರ ೧೯೩೮ ರಲ್ಲಿ ಸೌದಿ ಅರೇಬಿಯಾದಲ್ಲಿ ಜನರು ನೀರಿಗಾಗಿ ಕೊಳವೆ ಕೊರೆದಾದ ಅವರಿಗೆ ಸಿಕ್ಕಿದ್ದು ಕಚ್ಚಾ ತೈಲ. ಕ್ರಮೇಣ ಮಧ್ಯಪ್ರಾಚ್ಯ ದೇಶಗಳಲ್ಲೆಲ್ಲ ತೈಲ ನಿಕ್ಷೇಪಗಳು ಪತ್ತೆಯಾಗಿ ಅ ರಾಷ್ಟ್ರಗಳ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಜೀವನವೇ ಬದಲಾಯಿತು. ಇಂದಿಗೂ ಮದ್ಯಪ್ರಾಚ್ಯ ರಾಷ್ಟ್ರಗಳು ಶ್ರೀಮಂತ ಎನ್ನಿಸಿಕೊಳ್ಳಲು ಕಾರಣ ಅವರಿಗೆ ಸಿಕ್ಕ ತೈಲ ನಿಕ್ಷೇಪಗಳೆ, ಆ ರಾಷ್ಟ್ರಗಳ ಆರ್ಥಿಕತೆ ಸುಮಾರು ೭೫ ಪ್ರತಿಶತ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲಗಳಿಂದಾಗಿಯೆ.

ಫೋಟೋ ಕೃಪೆ : oceaneering

ಒಂದು ಬ್ಯಾರೆಲ್ ಕಚ್ಛಾತೈಲ ಅಂದರೆ, ಸುಮರು ೧೫೮ ಲೀಟರಗಳಷ್ಟು. ಇದು ರಿಫ಼ೈನರಿಯಲ್ಲಿ ಸಂಸ್ಕರಣೆಗೊಂಡಾಗ ೭೧ ಲೀಟರ ಪೆಟ್ರೋಲ್, ೪೬ ಲೀಟರ ಡೀಜೆಲ್ ಮತ್ತು ೪೧ ಲೀಟರನಷ್ಟು ಪ್ಲಾಸ್ಟಿಕ ಉತ್ಪನ್ನಗಳು ಹುಟ್ಟುತ್ತವೆ. ಕಚ್ಛಾತೈಲದಿಂದ ಪೆಟ್ರೋಲ, ಡಿಜೆಲ್, ಕೆರೋಸಿನ್, ವಿಮಾನ ಇಂಧನ, ಪ್ರೊಪೆನ್, ಬ್ಯುಟೆನ್ ಮತ್ತು ಪೆಟ್ರೋಲಿಯಮ್ ಅನಿಲ ಇಂಧನಗಳು ಮಾತ್ರವಲ್ಲದೆ, ಟೈರು, ಪ್ಲಾಸ್ಟಿಕ್, ಬಿಟುಮೆನ್ ಡಾಂಬರ್, ಪೆಂಟು, ಪಾಲಿಷ್ಟರ್ ಬಟ್ಟೆ, ಶೂ ಪಾಲಿಶ, ಗ್ರೀಸು, ಸೋಪು, ಮೊಬೈಲ್ ಫೋನ್, ಕಂಪ್ಯೂಟರ, ಟೂಥ್ ಪೇಸ್ಟ್, ಶೇವಿಂಗ ಕ್ರೀಮ್, ಲಿಪ್ ಸ್ಟಿಕ್ ಮತ್ತು ಇತರೆ ಕಾಂತಿವರ್ಧಕ ಉತ್ಪನ್ನಗಳು ಹೀಗೆ ಸುಮಾರು ೬೦೦೦ ಉತ್ಪನ್ನಗಳಿಗೆ ಕಚ್ಚಾತೈಲವೇ ಮೂಲ ಸರಕು.ಜಗತ್ತಿನಲ್ಲಿ ಅತಿ ಹೆಚ್ಛು ಕಚ್ಛಾತೈಲವನ್ನು ರಪ್ತು ಮಾಡುವ ದೇಶಗಳೆಂದರೆ ಸೌದಿ ಅರೇಬಿಯ, ಕುವೈತ್, ಕತಾರ್, ಒಮಾನ್, ರಶಿಯಾ, ಅಮೇರಿಕಾ ಮತ್ತು ಕೆನಡಾ. ಅಮೇರಿಕಾ ದಿನಕ್ಕೆ ೧೧ ಮಿಲಿಯನ್ ಬ್ಯಾರೆಲ್ ಕಚ್ಛಾತೈಲ ಉತ್ಪಾದಿಸಿದರು ಇದರ ದುಪ್ಪಟ್ಟು ತನ್ನ ದೇಶದಲ್ಲೆ ಬಳಕೆಯಾಗುತ್ತದೆ. ಒಂದು ತೈಲ ನಿಕ್ಷೇಪದಿಂದ ನಮಗೆ ಸಿಗುವುದು ಕೇವಲ ೪೦ ರಿಂದ ೫೦ ಪ್ರತಿಶತ ಮಾತ್ರ ಉಳಿದದ್ದೆಲ್ಲ ನೀರು ಮತ್ತು ಇನ್ನಿತರೆ ಬಳಕೆಗೆ ಬಾರದಂತದ್ದು. ಜಗತ್ತಿನ ಒಟ್ಟಾರೆ ತೈಲನಿಕ್ಷೇಪಗಳನ್ನ ಲೆಕ್ಕ ಹಾಕಿದರೆ ಸುಮಾರು ೩ ಟ್ರಿಲಿಯನ್ ಬ್ಯಾರೆಲನಷ್ಟು ಕಚ್ಛಾತೈಲವಿದೆ. ಅದರಲ್ಲಿ ಇಗಾಗಲೆ ೧ ಟ್ರಿಲಿಯನ್ ಬಳಕೆಯಾಗಿದೆ. ಈಗ ಉಳಿದಿರುವ ಕಚ್ಚಾತೈಲ ಕೇವಲ ೫೦ ವರ್ಷಕ್ಕೆ ಸಾಕಾಗುವಷ್ಟು ಮಾತ್ರ. ಅಂದರೆ ಬರುವ ೨೦೭೦ನೆ ಇಸವಿಯವರೆಗೆ ಮಾತ್ರ. ಪರ್ಯಾಯ ಇಂಧನವನ್ನು ಶೋಧಿಸಿ ಅಭಿವ್ರದ್ದಿಪಡಿಸದೆ ಹೋದಲ್ಲಿ ಜಗತ್ತು ಕತ್ತಲಾಗುವುದರಲ್ಲಿ ಸಂಶಯವೆ ಇಲ್ಲ. ಹಾಗಾಗಿ, ವಿಜ್ನಾನಿಗಳು, ಸರಕಾರಗಳು ಇಂದೆ ಪರ್ಯಾಯ ಇಂಧನಕ್ಕಾಗಿ ಕಾರ್ಯೋನ್ಮುಕವಾದರೂ ಪರ್ಯಾಯ ಇಂಧನ ಬಳಕೆಯಲ್ಲಿ ಬಂದು ಸಾಮಾನ್ಯರಿಗೆ ತಲುಪವಷ್ಟರಲ್ಲಿ ೫೦ ವರ್ಷಗಳ ಕಾಲ ಸಾಕಾಗುವುದಿಲ್ಲ.

ಇಂಧನದ ಹಿಂದನ ಮತ್ತು ಮುಂದನ ಕಥನ ಮುಂದುವರೆಯುವುದು..


  • ಪ್ರಕಾಶ್ ಉಳ್ಳೆಗಡ್ಡಿ (ಮೆಕ್ಯಾನಿಕಲ್ ಇಂಜನೀಯರಿಂಗ್ ಪದವೀಧರ, ಒಮಾನ್ ಮಸ್ಕತ್ ನಲ್ಲಿ ಅಂತಾರಾಷ್ಟ್ರೀಯ ಆಯಿಲ ಅಂಡ್ ಗ್ಯಾಸ್ ಇಂಜನೀಯರಿಂಗ್ ಕನ್ಸಲ್ಟನ್ಸಿಯಲ್ಲಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾಗಿ ಕೆಲಸ.ಮಾಡುತ್ತಿದ್ದಾರೆ) ಮಸ್ಕತ್ತ

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW