‘ಪಕ್ಷಿಗಳ ನಿವೇದನೆ’ ಕವನ – ಅಪ್ಪಯ್ಯ ಯು ಯಾದವ್

ನಾವೂ ನೀವೆಲ್ಲರೂ ದೇವರಸೃಷ್ಠಿ ಎಲ್ಲೆಲ್ಲೂ ಕಾಡುತಿದೆಯಲ್ಲ ಅನಾವೃಷ್ಠಿ … ಅಪ್ಪಯ್ಯ ಯು ಯಾದವ್ ಅವರ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಓ ಮಾನವಾ…..
ನೀವೆಲ್ಲ ಕುಡಿಯುವಿರಲ್ಲ
ಶುದ್ದ ನೀರು
ನಮಗೂ ಕೊಡಲಾರಿರಾ
ಒಂದು ಚೂರುl

ನಾವೂ ನೀವೆಲ್ಲರೂ ದೇವರಸೃಷ್ಠಿ
ಎಲ್ಲೆಲ್ಲೂ ಕಾಡುತಿದೆಯಲ್ಲ
ಅನಾವೃಷ್ಠಿ!

ನಿಮಗುಂಟು ಫಿಲ್ಟರ್ ನೀರು
ನಮಗೂ ಇಡಲಾರಿರಾ
ನೀವು ಬೇಡವೆಂದು ಚೆಲ್ಲುವ ನೀರುl
ಮನೆಯ ಅಂಗಳದಲ್ಲೋ
ಟೇರೆಸ್ಸಿನಲ್ಲೋ ಹಳತಾದ ಕುಂಡದಲ್ಲೋ
ಒಂದಿಷ್ಟು ನೀರಿಡಿl

ನಮಗೂ ನಿಮ್ಮಂತೆಯೇ ಇದೆಯಲ್ಲ ನೀರಡಿಕೆ
ಮನಮಾಡಲಾರಿರಾ
ನೀವದಕೆl

ಮರಿಗಳನು ಪೊಟರೆಯೊಳಗೆ
ಬಿಟ್ಟು ಬಂದೆವು ನೀರನುಡುಕಿ
ಅವುಗಳೂ ರೆಕ್ಕೆ ಬಲಿತು ಹಾರಬೇಕು ಬದುಕಿl

ರಸ್ತೆ ಬದಿಯ ನಳ್ಳಿಕೂಡ ಖಾಲಿ
ಕೊಕ್ಕಲ್ಲಿ ಕುಕ್ಕಿ ತೆರೆದೆವು ಬಂತು
ಬರೇ ಸುಯ್ಯೆಂದು ಗಾಳಿ
ನಮ್ಮಂತ ಪ್ರಾಣಿಪಕ್ಷಿಗಳಿಗೂ
ಬದುಕಲು ಬಿಡಿ
ನೀವೂ ಬಾಳಿ ನಮ್ಮನ್ನೂ
ಬದುಕಿಸಲು ನೀರಿಡಿl


  • ಅಪ್ಪಯ್ಯ ಯು ಯಾದವ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading