ಪಾಂಡವರ ಬತ್ತಿ ಸಸ್ಯ ಎಣ್ಣೆಯನ್ನು ಹಣತೆಯಲ್ಲಿ ಹಾಕಿ ಹಸಿಯಾಗಿ ಇರುವ ಎಲೆಯನ್ನು ಬತ್ತಿಯಂತೆ ಹಚ್ಚಿದರೆ ಉರಿಯುತ್ತದೆ. ಈ ಸಸ್ಯದ ಕುರಿತು ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪಾಂಡವರ ವನವಾಸ ಸಮಯದಲ್ಲಿ ಹತ್ತಿಯ ಬತ್ತಿ ಕಾಲಿಯಾದಾಗ ಈ ಗಿಡದ ಎಲೆಯಿಂದ ಬೆಳಕು ಮಾಡಿಕೊಂಡ ದಂತಕಥೆ ನಮ್ಮಲ್ಲಿ ಪ್ರಚಲಿತವಿದೆ. ಗಿಡದ ಎಲೆಯ ಮೇಲೆ ಮತ್ತು ಗಿಡದ ಮೇಲೆ ರೋಮಯುಕ್ತ ಗಿಡ ಒಳಗಡೆ ಟೊಳ್ಳಾಗಿದ್ದು ಎಣ್ಣೆಯನ್ನು ಹೀರಿಕೊಳ್ಳುವ ವಿಶೇಷ ಗುಣ ಗಿಡ ಮತ್ತು ಕುಡಿಯಲ್ಲಿ ಇದೆ.
ಗಿಡವನ್ನು ನೋಡುತ್ತಿದ್ದಂತೆಯೇ ಸ್ವಲ್ಪ ವಿಶೇಷ ಎನಿಸುವಂತಿರುತ್ತದೆ. ಗೊಂಚಲು ನೀಲಿ ಬಣ್ಣದ ಹೂವು ದುಂಬಿಗಳಿಗೆ ಮತ್ತು ಜೇನಿಗೆ ಖುಷಿಯ ತಾಣ. ಗಿಡದ ಹತ್ತಿರದಿಂದ ದುಂಬಿಯನಾದ ಕೇಳುವುದೇ ಒಂದು ಖುಷಿ ಇದು ಬತ್ತಿಯಾಗಿ ಮಾತ್ರ ಅಲ್ಲ ಔಷಧೀಯ ಗುಣಗಳನ್ನು ಹೊಂದಿದೆ.
ಫೋಟೋ ಕೃಪೆ : google
1) ಇದರ ಕುಡಿಗಳನ್ನು ಜೀರಿಗೆ ಕಾಳುಮೆಣಸು ಸೇರಿಸಿ ಕುದಿಸಿ ಕುಡಿಯುವುದರಿಂದ ಮಲೇರಿಯಾ ಜ್ವರ ಗುಣವಾಗುತ್ತದೆ.
2) ಇದರ ತೊಗಟೆಯ ಕಷಾಯ ಮೂತ್ರಕೋಶದ ಹಲವು ರೋಗಗಳನ್ನು ನಿವಾರಿಸುತ್ತದೆ.
3) ಇದರ ಬೀಜದ ಪುಡಿಯನ್ನು ರಕ್ತದ ಒತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಉಪಯೋಗಿಸುತ್ತಾರೆ.
4) ಮೂರ್ಛೆರೋಗ ಮತ್ತು ಮಾನಸಿಕ ಕಾಯಿಲೆಗಳಿಗೆ ಈ ಗಿಡ ಉತ್ತಮ ಔಷಧಿಯನ್ನು ಹೊಂದಿದೆ
5) ಇದರ ಬೀಜದಿಂದ ತೆಗೆದ ಎಣ್ಣೆ ಪಾಶ್ವ ವಾಯುವಿಗೆ ಉತ್ತಮ ಔಷಧಿ.
6) ಇದರ ತೊಗಟೆಯ ಮತ್ತು ಸೊಪ್ಪಿನ ಕಷಾಯ ಯಕೃತ್ತಿನ ಯಾವುದೇ ಸಮಸ್ಯೆಯನ್ನು ಸರಿ ಪಡಿಸುವುದು.
- ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯ