‘ಪಂಥ ಪಗಡೆ ಮಾಡಿ ಪುಣ್ಯ ಜೀ ಹಾಳಾಗಿದೆಯೊ’…ಗುರುನಾಥ ಶೀಲವಂತರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ..
ಎಲ್ಲಿರುವೆಯೊ ದೇವ ಎಲ್ಲಿರುವೆಯೊ
ಎಲ್ಲಿದ್ದರೂ ನೀ ಬಂದು ಎನ್ನ ಕಾಯೊ!
ಹೀನ ಮತಿಯ ಜನರ ಕೂಡಿ ಬಾಳು
ಹಾನಿಯಾಗಿದೆಯೊ.
ಪಂಥ ಪಗಡೆ ಮಾಡಿ ಪುಣ್ಯ ಜೀವವು
ಹಾಳಾಗಿದೆಯೊ.
ಮಾರಿ ಹಿಂಡು ಮೈಗೆ ಮುತ್ತಿ ಮನವು
ಮಸಣವಾಗಿದೆಯೊ.
ಕಠಿಣ ಭವ ತೊರೆಯಲ್ಲಿ ಭಾವ ಭಿತ್ತಿ
ಸಿಲುಕಿದೆಯೊ.
ಯಜ್ಞ ಯಾಗ ಮಾಡಿದೆ ಕಾಲ ವ್ಯರ್ಥ
ಕಳೆದಿದೆಯೊ.
ಯೋಗಿ ಯತಿಗಳನು ನೋಡದೆ ವೇಳೆ
ಸರಿದಿದೆಯೊ.
ವಿಷಯ ಭೋಗದ ವ್ಯಸನಕೆ ಬದುಕು
ಬಲಿಯಾಗಿದೆಯೊ.
ಕಡು ಸಂಕಷ್ಟದ ವಿಷ ಸರ್ಪವು ಕಾಲಿಗೆ
ಸುತ್ತಿಕೊಂಡಿದೆಯೊ.
- ಗುರುನಾಥ ಶೀಲವಂತರ – ಸಾಹಿತಿಗಳು