ಕತ್ತಲ ಕೋಣೆಯಲ್ಲಿ ನಿಶಾ ಹುಚ್ಚಿಯಂತೆ ಅಳುತ್ತಿದ್ದಳು, ಅವಳನ್ನು ಸಮಾಧಾನ ಮಾಡಲು ಹೋದ ಸತೀಶನಿಗೆ ನಿಶಾ ಕೆನ್ನೆಗೆ ಎರಡು ಕೊಟ್ಟಳು, ನಿಶಾಳಿಗೆ ಏನಾಗಿತ್ತು?… ಸತೀಶ್ ಏನು ಮಾಡಿದ್ದಾ?…. ಎಲ್ಲ ಪ್ರಶ್ನೆಗಳಿಗೆ ಶಂಕರಾನಂದ ಹೆಬ್ಬಾಳ ಅವರು ಬರೆದಿರುವ ಈ ಕಿರುಕಥೆಯನ್ನು ತಪ್ಪದೆ ಮುಂದೆ ಓದಿ…
ಅವಳು ಕಿಟಾರನೆ ಕಿರುಚಿದಳು.
‘ಎನಾಯ್ತೆ….ನಿಶಾ….?’ ಎಂದು ಅಮ್ಮ ಬಾಗಿಲು ತಗೆದಾಗ ನಿಶಾ ತಲೆ ಕೆರೆದುಕೊಂಡು ಸೀರೆಯ ಸೆರಿಗಿನ ಪರಿವೆ ಇಲ್ಲದೆ ಹುಚ್ಚು ಹಿಡಿದವರಂತೆ ಕುಳಿತಿದ್ದಳು.
‘ಅಯ್ಯೋ….!! ಇವಳ ಸ್ಥಿತಿ ನೋಡುವಂತಿಲ್ಲ…. ಯಾಕೆ? ಹೀಗಾಗುತ್ತೋ ನಾ ಬೇರೆ ಕಾಣೆ, ಅವರು ಬೇರೆ ಮನೆಯಲ್ಲಿಲ್ಲ’…
‘ಲೋ….! ಸತೀಶಾ ಬೇಗ ಬಾರೋ’
‘ನಿಮ್ಮ ತಂಗಿ ಆವಸ್ಥೆ ನೋಡೋದಕ್ಕೆ ಆಗುತ್ತಿಲ್ಲ’…
‘ಸತೀಶ ತಂಗಿ ನಿಶಾಳ ಆವಸ್ಥೆಯನ್ನು ನೋಡಿ ತಾನೆ ಸೀರೆ ಹಾಕಿ ಸರಿಪಡಿಸಲು ಹೋದರೆ ಅವನ ಕೆನ್ನೆಗೆ ಎರಡು ಬಿಗಿದು…..ಹೊಡಿದು ಬಡಿದು ಕಳಿಸಿದಳು….
ಪಾಪ…..ಇವಳ ಸ್ಥಿತಿ ನೋಡಿ ಮರುಗಿದ.
‘ಅಮ್ಮ… ಏನಾಗಿದೆ….ನಿಶಾಗೆ…ಏಕೆ ಹೀಗಾಡುತ್ತಿದ್ದಾಳೆ’…? ಎಂದೆಲ್ಲಾ ….ಪ್ರಶ್ನಿಸಿದ….ಮನೆಯಲ್ಲಿ ದಿನಕ್ಕೆ ಒಂದು ಸಲವಾದರೂ ಈ ರೀತಿ ನಡೆಯುತ್ತಿತ್ತು…
ಸತೀಶ ಬೆಂಗಳೂರಿನಲ್ಲಿ ನ್ಯೂರಾಲಜಿಸ್ಟ ಮೆಡಿಕಲ್ ಕೋರ್ಸ ಓದುತ್ತಿದ್ದ ಕಾರಣ ಇದೆಲ್ಲ ಅವನಿಗೆ ಗೊತ್ತಿರಲಿಲ್ಲ.
ಈಗ ಗೊತ್ತು ಪಡಿಸಲು ತಾಯಿ ಮುಂದಾದಳು. ನಿಶಾ ಸಂಸ್ಕಾರವಂತ ಹೆಣ್ಣು. ಆಚಾರ -ವಿಚಾರ, ಭಯ – ಭಕ್ತಿಯಲ್ಲಿ ತಾಯಿಗಿಂತ ಒಂದು ಹೆಜ್ಜೆ ಮುಂದು ಎಂದರೂ ಅಡ್ಡಿಯಿಲ್ಲ. ನಿಶಾ ಮತ್ತು ಸತೀಶ ಬಾಲ್ಯದಿಂದಲೂ ಕೂಡಿ ಬೆಳೆದರೂ ಸತೀಶನನ್ನು ಮೆಡಿಕಲ್ ಓದಿಸುವ ಉದ್ದೇಶದಿಂದ ಬೆಂಗಳೂರಿಗೆ ಕಳಿಸಲಾಯಿತು.
ಇತ್ತ ನಿಶಾ ಹೈಸ್ಕೂಲ ಮುಗಿಸಿ ಕಾಲೇಜಿಗೆ ಕಾಲಿಟ್ಟಳು.
ಫೋಟೋ ಕೃಪೆ : google
ನವ ಯೌವ್ವನ ತುಂಬಿ ಅರಳಿದ ಸುಮದಂತೆ ಮೊಗವು ಹೊಳೆಯುತಿತ್ತು. ಕಂಗಳು ಜೋಡಿ ದುಂಬಿಗಳಂತೆ ತುಟಿಯ ಮೇಲಿನ ನಗೆ ಸ್ವಾತಿ ಮುತ್ತಿನಂತಿತ್ತು. ಜಡೆಯಲ್ಲಿನ ಸಂಪಿಗೆ ಭೃಂಗಮಾಲೆ ನೋಡುವವರನ್ನು ಕೈಬೀಸಿ ಕರೆಯುತ್ತಿತ್ತು. ಧರೆಗಿಳಿದ ಸುಂದರಿಯಾಗಿ ಕಾಲೇಜಿನ ಪಡ್ಡೆ ಮನಕೆಡಿಸಿದ್ದಳು ನಿಶಾ. ಹೀಗಿರುವಾಗ ಅವಳ ಸೌಂದರ್ಯ ದಿನೆ ದಿನೆ ಇಮ್ಮಡಿಗೊಳ್ಳುತ್ತಿತ್ತು.
ಪ್ರಥಮ ವರ್ಷದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆದ ದಿನದಿಂದ ಸಂಪ್ರದಾಯಿಸ್ಥ ಹೆಣ್ಣಂತೆ ತಲೆ ತಗ್ಗಿಸಿ ಹೋಗಿ ಬರುತ್ತಿದ್ದಳು ಈಕೆ. ಮಧ್ಯೆ ಕೈಕೆಗೆ ಮಂಥರೆ ಸಿಕ್ಕಂತೆ ಈಕೆಯ ನೆಚ್ಚಿನ ಗೆಳತಿಯಾಗಿ ಪರಿಚಯವಾದವಳು ವಾಣಿಶ್ರೀ, ನೋಡಲು ಗುಂಗುರು ಕೂದಲಿನ ಸ್ವಲ್ಪ ಕಪ್ಪು ದುಂಡು ಮುಖದ ಕಳೆಯುಳ್ಳ ತರುಣಿ. ಈಕೆ ತಂದೆ ತಾಯಿಗಳು ಇಲ್ಲ ಒಬ್ಬ ಅನಾಥೆ.
ಅಜ್ಜನ ಆಶ್ರಯದಲ್ಲಿ ಮುದ್ದಿನ ಮಗಳಾಗಿ ಬೆಳೆದ ಕರುಣೆಯ ಮೊಮ್ಮಗಳು. ಇವಳು ನಿಶಾಳ ನೆಚ್ಚಿನ ಗೆಳತಿಯಾಗಿದ್ದಳು.
ಮೊದ ಮೊದಲು ಸಭ್ಯಸ್ಥಳಾಗಿದ್ದ ನಿಶಾ ಗೊತ್ತಿಲ್ಲದಂತೆ ಸಮಂತನನ್ನು ಪ್ರೀತಿಸ ತೊಡಗಿದಳು. ನಯವಾಗಿ ಅರಳು ಹುರಿದಂತೆ ಮಾತನಾಡುತ್ತಿದ್ದ ಇವನು ನಿಶಾಳನ್ನು ತನ್ನ ಬಲೆಯಲ್ಲಿ ಬೀಳಿಸಿಕೊಂಡ. ಮುಗ್ದ ಹೆಣ್ಣಾದ ಇವಳು ಸಮಂತನ ಸಹವಾಸದಿಂದ ಪರಿಪೂರ್ಣ ಬದಲಾಗಿ ಬಿಟ್ಟಳು. ಸಿಗರೇಟ, ಮಧ್ಯ, ಮಾಂಸವನ್ನು ಸೇವಿಸಿ ಅದರ ದಾಸಿಯಾದಳು. ಈ ಮಧ್ಯೆ ಪರೀಕ್ಷೆ ಮುಗಿಯುವ ಸಮಯದಲ್ಲಿ ಎಲ್ಲರೂ ಗ್ರ್ಯಾಂಡ ಪಾರ್ಟಿ ಮಾಡಬೇಕೆಂದು ಯೋಚಿಸಿದರು.
ಅದು ವಿಶೇಷ ಸ್ಥಳವಾಗಿರಬೇಕು ಎಂಬುದು ಎಲ್ಲರ ನಿರ್ಧಾರ ಸರಿ…ಹಾಗೇ ಮಾಡೋಣ ಎಂದು ಕಾಡಿನೊಳಗಿನ ಒಂದು ಹಾಳುಬಿದ್ದ ಬಂಗಲೆಗೆ ತಮ್ಮ ಬೈಕಿನಲ್ಲಿ ಎಲ್ಲ ಹುಡುಗ ಮತ್ತು ಹುಡುಗಿಯರು ಎರಡು ಡಜನ್ ಬೀಯರ್, ರಮ್, ವಿಸ್ಕಿ ಜೊತೆಗೆ ಗೋಬಿ ಮಂಚೂರಿ ಖುಷ್ಕಾ ರೈಸ್, ಮತ್ತು ಚಿಪ್ಸ ಪಾಕೆಟ್ ಗಳನ್ನು ತಂದು ಇಟ್ಟರು ರಾತ್ರಿಯಾಯಿತು. ಪಾರ್ಟಿ ಪ್ರಾರಂಭವಾಯಿತು, ಎಲ್ಲರೂ ಕುಡಿತ ಕುಣಿತದೊಂದಿಗೆ ಮೋಜು ಮಸ್ತಿ ಹುಡುಗಿಯರಿಗೆ ಮೊದಲೆ ಬೀಯರನಲ್ಲಿ ವಿಸ್ಕಿ ಬೆರೆಸಿ ಮೊದಲೆ ಇಟ್ಟಿದ್ದರು. ಕುಡಿದ ಅಮಲಿನಲ್ಲಿ ಏನೋನೋ ನಡೆದು ಹೋಯಿತು…..ಶಿವಾ...ಶಿವಾ…
ಎಲ್ಲರೂ ಲೋಕದ ಚಿಂತೆಯನ್ನು ದೂರ ಮಾಡಿ ಸ್ವರ್ಗದಲ್ಲಿ ತೇಲಾಡುತ್ತಿದ್ದರು. ಇತ್ತ ಸಹಜ ಸುಂದರಿಯಾದ ನಿಶಾಳು ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದಳು. ಸಮಂತ ಅವಳನ್ನು ಇದೆ ಸುಸಮಯವೆಂದು ಬಲತ್ಕಾರ ಮಾಡಿದ. ಅವಳ ಪವಿತ್ರ ಶೀಲವನ್ನು ಹಾಳು ಮಾಡಿದ. ಮತ್ತಿನಲ್ಲಿ ಏನು ಗೊತ್ತಾಗಲಿಲ್ಲ ಪಾಪ ಆಕೆಗೆ…
ಮರುದಿನ ಅರುಣೋದಯವಾಗುತ್ತಿದ್ದಂತೆ ಹುಡುಗರೆಲ್ಲರೂ ತಮ್ಮ ವಾಹನದೊಂದಿಗೆ ಪರಾರಿಯಾಗಿದ್ದರು. ಹುಡುಗಿಯರೆಲ್ಲ ಎದ್ದು ತಮ್ಮ ಡ್ರೆಸ್ ಗಳನ್ನು ಸರಿಪಡಿಸಿಕೊಂಡು ಸ್ಕೂಟಿಯೊಂದಿಗೆ ಹೊರಟರು. ಇತ್ತ ನಿಶಾಳ ಸುಳಿವಿಲ್ಲ, ಶೋಧಿಸುತ್ತ ಹೊರಟಾಗ ದೊಡ್ಡ ಬಂಡೆಯ ಪಕ್ಕ ಬಟ್ಟೆ ಸರಿಪಡಿಸುತ್ತ ಕಣ್ಣೀರು ಸುರಿಸುತ್ತ ಅಳುತ್ತ ಕೂತಿದ್ದಳು.
‘ಗೆಳತಿಯರೆಲ್ಲ ಇದೆಲ್ಲ ಕಾಮನ್…ಡೊಂಟ ವರಿ’….!! ಎಂದು ಅವಳನ್ನು ಸಂತೈಸಿ ಸ್ಕೂಟಿ ಮೇಲೆ ಹತ್ತಿಸಿಕೊಂಡು ಮನೆಗೆ ತಂದು ಬಿಟ್ಟರು. ಹಾಗೆ ಅಮ್ಮ ಬೈ ಅಮ್ಮ……ಎಂದು ಹೊರಟು ಹೋದರು.
ಇತ್ತ ವಿಚಿತ್ರವಾದ ವೇಷದಲ್ಲಿ ಮನೆಗೆ ಬಂದ ಮಗಳನ್ನು ನೋಡಿ ತಾಯಿ ಗಾಬರಿಗೊಂಡಳು. ಅದರೆ ನಿಶಾ ನಿಸ್ಸಹಾಯಕಳಾಗಿದ್ದಳು. ಏನನ್ನು ಹೇಳುವ ಸ್ಥಿತಿಯಲ್ಲಿರಲಿಲ್ಲ. ಇರಲಿ ಬಿಡು ಎಂದು ತಾಯಿ ಅವಳನ್ನು ಫ್ರೆಶ್ ಆಗಲು ಹೇಳಿ ರೂಮಲ್ಲಿ ರೆಸ್ಟ ತಗೆದುಕೊಳ್ಳುವಂತೆ ಅಜ್ಞಾಪಿಸಿದಳು, ಸರಿ ಎಂದು ಅಳುತ್ತಾ…..ಹೋದಳು.
ನಡೆದಿದ್ದೇನು?… ಹೋಗುವಾಗ ನಗುತ್ತಾ ಹೋದ ನಿಶಾ ಹೀಗೇಕೆ ಆದಳು ಎಂಬುದು ಗೊತ್ತಾಗಲೆ ಇಲ್ಲ. ಕೊನೆಗೆ ಅವಳನ್ನು ಸಮಾಧಾನ ಪಡಿಸುವ ನೆಪದಲ್ಲಿ ನಡೆದ ವಿಷಯವನ್ನು ಕೆದಕಲು ಪ್ರಾರಂಭಿಸಿದಳು.
‘ಲೇ…ನಿಶಾ…ಏನಾಯ್ತೆ’….?
‘ಹೋಗುವಾಗ ಚನ್ನಾಗಿದ್ದ ನೀನು ಹೀಗೇಕಾದೆ…..ಹೇಳೆ’…?
‘ಅಮ್ಮ… ಎಲ್ಲಾ ಮುಗಿದು ಹೋಯಿತು… ಅಮ್ಮಾ’…….ಹೆಣ್ಣಿಗೆ ಇರಬೇಕಾದ ವಸ್ತುವನ್ನು ಕಳೆದು ಕೊಂಡಿರುವೆ ಎಂದು ಕಣ್ಣೀರು ಸುರಿಸಲಾರಂಭಿಸಿದಳು. ‘ಅಯ್ಯೋ….ದೇವರೆ…. ನನ್ನ ಮಗಳೆ….ದೇವರೆ…..ಏಕೆ ಈ ಶಿಕ್ಷೆ’… ಎನ್ನುವಾಗ ಚಿಟ್ಟನೆ ಚೀರಿದಳು. ಹಾಕಿರುವ ಬಟ್ಟೆಗಳ ಅರಿವಿಲ್ಲದೆ ಭಯಗೊಂಡ ಮಗುವಂತೆ ಒದ್ದಾಡ ಹತ್ತಿದಳು. ಆ ರಾತ್ರಿಯ ವೇದನೆ ಈಕೆಯನ್ನು ಹುಚ್ಚಿಯನ್ನಾಗಿ ಮಾಡಿತು.
ಫೋಟೋ ಕೃಪೆ : google
ಅವಳ ಆ ವೇದನೆಯನ್ನು ನೋಡಲಾರದೆ ಮಗನನ್ನು ಕರೆದಳು. ಇವಳ ಸ್ಥಿತಿ ನೋಡಿ ಮರುಗುತ್ತ ನಂತರ ಅವಳನ್ನು ಧಾರವಾಡದ ಪ್ರಸಿದ್ದ ನ್ಯೂರಾಲಜಿಸ್ಟ ಸ್ಪೇಶಲಿಸ್ಟ ಹತ್ತಿರ ಕರೆದೊಯ್ದು ನಡೆದ ಎಲ್ಲ ಘಟನೆಗಳ ಉಸುರಿದ. ಸರಿಯಾದ ಚಿಕಿತ್ಸೆ ಕೊಟ್ಟು ಇದು ಬೇಗನೆ ವಾಸಿಯಾಗುವ ಕಾಯಿಲೆಯಲ್ಲ ಎಂದು ಒಂದಿಷ್ಟು ಮಾತ್ರೆಗಳನ್ನು ಕೊಟ್ಟು ಕಳಿಸಿದ.
ಇಲ್ಲಿಯವರೆಗೂ ನಿಶಾಳ ಜವಾಬ್ದಾರಿಯನ್ನು ಅಣ್ಣನೆ ವಹಿಸಿದ್ದಾನೆ. ಯಾವದೆ ಸ್ಪೆಶಲಿಸ್ಟ ಅವಳ ರೋಗ ಗುಣಪಡಿಸಲು ಸಾಧ್ಯವಿಲ್ಲ….ತಾನೆ ತನ್ನ ಮಗಳಂತೆ ಸತೀಶ ಅವಳನ್ನು ನೋಡಿಕೊಳ್ಳುತ್ತಿದ್ದಾನೆ. ದಿನವು ನರಕದಲ್ಲಿ ತೊಳಲಾಡುವಂತೆ ಬಳಲಿ ಬೆಂಡಾಗಿದ್ದಾಳೆ, ಇವಳ ವೇದನೆ ಕೊನೆಯಾಗುವದು ಯಾವಾಗ….?
ಸಮಾಜದಲ್ಲಿ ಇಂತಹ ಘಟನೆಗಳು ಹಲವಾರು ನಡೆಯುತ್ತಿವೆ .ನಿಶಾಳಂತ ಮುಗ್ದಮನಸುಗಳು ಅದೇಷ್ಟೋ ಕಾಮ ಪಿಪಾಸೆಗೆ ತುತ್ತಾಗಿ ನರಳಾಡುತ್ತಿವೆ. ಇದಕ್ಕೆ ಮೋಜು ಮಸ್ತಿಗಳ ನೆಪದಲ್ಲಿ ಹೆಣ್ಣುಮಕ್ಕಳನ್ನು ಮತ್ತು ಬರುವಂತೆ ಕುಡಿಸಿ ಹಾಳು ಮಾಡಿ ಬಲತ್ಕರಿಸುವವರನ್ನು ಘೋರ ಶಿಕ್ಷೆಗೆ ಒಳಪಡಿಸಬೇಕು ಆಗಲಾದರೂ ಸಮಾಜ ಬದಲಾವಣೆ ಸಾಧ್ಯವೆ….
- ಶಂಕರಾನಂದ ಹೆಬ್ಬಾಳ – ಕನ್ನಡ ಉಪನ್ಯಾಸಕರು, ಇಲಕಲ್ಲ, ಬಾಗಲಕೋಟ ಜಿಲ್ಲೆ.