ತಾಳ್ಮೆಯ ಬೆಲೆ

ತಾಳ್ಮೆ ಎಂಬುವುದು ಬೆಳವಣಿಗೆಯ ಪ್ರತೀಕ. ಓಡುವ ಬಾಳಬಂಡಿಗೆ ತಾಳ್ಮೆಯ ಅವಶ್ಯಕತೆ ಇದೆ. ತಾಳ್ಮೆಯ ಬಗ್ಗೆ ಇನ್ನಷ್ಟು ವಿಷಯಗಳನ್ನು ಡಾ.ರೂಪೇಶ್ ಅವರು ಲೇಖನ ಮಾಲೆಯಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ …

ಔತಣಕೂಟದಲ್ಲಿ ಎಲ್ಲರೂ ಕೂತ ನಂತರ ಆಹಾರ ಬಡಿಸುವಾಗ ನಾವು ಕಾಯುತ್ತೇವೆ. ಎಲ್ಲರೂ ಊಟ ಮಾಡಿ ಮುಗಿಯುವವರೆಗೆ ಕೈ ತೊಳೆಯಲು ಕಾಯುತ್ತೇವೆ. ಇಲ್ಲಿ ನಾವು ಜೀವನದ ತಾಳ್ಮೆಯ ಬೆಲೆ ಗೊತ್ತಿಲ್ಲದೆ ಅರಿಯುತ್ತೇವೆ.

“ಯಾರಲ್ಲಾದರೂ ಸಿಟ್ಟು ಬಂದರೆ, ಅವರಿಗೆ ಸಿಟ್ಟಿನಿಂದ ನೀನು ಮರಳಿ ಕೊಡಬೇಕಾದ ಉತ್ತರ ನೀನು ಕಾಲಿನಿಂದ ಮಣ್ಣಿನಲ್ಲಿ ಬರೆಯಬೇಕು ಯಾಕೆಂದರೆ ಭೂಮಿ ಕ್ಷಮೆಯಿಂದ- ತಾಳ್ಮೆಯಿಂದ ಅದು ಮರೆಯುತ್ತದೆ. ಆದರೆ ನೀ ಅದು ನುಡಿದರೆ ನಿನ್ನ ಮಾತು ಕೇಳಿದವನ ಮನದಲ್ಲಿ ಅಚ್ಚಳಿಯದೆ ಬರೆದಿರುತ್ತದೆ” ಎಂದು ನನ್ನ ಅಮ್ಮಜ್ಜ ಹೇಳುತ್ತಿದ್ದರು.

ಫೋಟೋ ಕೃಪೆ : americanbazaaronline

ತಂದೆಗೆ ಸಿಟ್ಟು ಬಂದರೆ ಅವರು ಬಾವಿಯಿಂದ ನೀರು ಸೇದಿ ಬಾಳೆ- ತರಕಾರಿಗಳಿಗೆ ಹಾಸುತ್ತಿದ್ದರು.ಅಥವಾ ದೂರ ಹೋಗಿ ಹುಲ್ಲು ಕೊಯ್ದು ದನ- ಎಮ್ಮೆ- ಕೋಣಗಳಿಗೆ ಕೊಟ್ಟು ಬರುತ್ತಿದ್ದರು.ಅಪ್ಪಜ್ಜಿ ಹೇಳಿದ್ದು. ನಾನು ಆಗ್ರಹಿಸಿದ್ದು ತಡವಾಗಿ ಸಿಗುವುದರೊಂದಿಗೆ ಯಾವ ರೀತಿ ಕ್ಷಮೆಯಿಂದ ಅಭಿಮೂಖ(ಎದಿ)ರಿಸುತ್ತೀರಿ, ಅದನ್ನೇ ತಾಳ್ಮೆ ಎನ್ನಬಹುದು. ತಾಳ್ಮೆಯನ್ನು ಪ್ರಕೃತಿಯೇ ನಮಗೆ ಹೇಳಿಕೊಡುತ್ತದೆ ಅಲ್ಲವೇ?…. ಒಂದು ಗಿಡ ನೆಟ್ಟು ಕೂಡಲೇ ಮರವಾಗಿ ಹೂ ಹಣ್ಣು ಕೊಡಲ್ಲ ಅಲ್ಲವೇ?…

ತಾಳ್ಮೆ ಇದ್ದವರಿಗೆ ಒಳ್ಳೆಯ ದೀರ್ಘವೀಕ್ಷಣೆ ಇರುತ್ತದೆ. ಒಳ್ಳೆಯ ನಿರ್ಧಾರ (decision)ಗಳನ್ನು ತೆಗೆದುಕೊಳ್ಳುವುದಲ್ಲದೆ , ಆ ನಿರ್ಧಾರದಲ್ಲಿ ಅನಂತಕಾಲದ ಗುರಿ ( long time goal) ಇರುತ್ತದೆ. ಅಂದು ನಮ್ಮ ಹಿರಿಯರು ರಸ್ತೆ, ಆಸ್ಪತ್ರೆ , ಶಾಲೆಗಳನ್ನು ಕಟ್ಟಿದ್ದರಿಂದ, ಇಂದು ಅದರ ಸೌಕರ್ಯವನ್ನು ನಾವು ಜೀವನದಲ್ಲಿ ಸುಲಭವಾಗಿ ಪಡೆಯುತ್ತಿದ್ದೇವೆ.

ಇಂದು ನನ್ನ ಮಿತ್ರ ಎಳನೀರು, ತೆಂಗಿನಕಾಯಿ, ಮಾವಿನ ಹಣ್ಣು ಮಾರಿ ಸಂಪಾದನೆ ಮಾಡಲು ಕಾರಣ ಅಂದು ಅವನ ಪೂರ್ವಜರು ನೆಟ್ಟ ಇವುಗಳ ಗಿಡಗಳಾಗಿತ್ತು. ಅವನಿಗೆ ಈ ಜನ್ಮದಲ್ಲಿ ಇದರ ಫಲ ಮಾರಲು ಸುಲಭ.

ಫೋಟೋ ಕೃಪೆ : goqii

ಹಿಂದೆ ಇಂಟರ್ನೆಟ್ /ಅಂತರ್ಜಾಲ ಆಮೆ ಗತಿಯ ನಿಧಾನದಲ್ಲಿ ದೊರಕುತ್ತಿದ್ದರೂ ಅದರ ಮುಂದೆ ಕೂರುತ್ತಿದ್ದವರು ನಾವು, ಆದರೆ ಇಂದು ಅದು ನಿಧಾನವಾದರೆ ಮೊಬೈಲ್ ಎತ್ತಿ ಎಸೆಯುವುದು ನಾವು ಕಾಣುತ್ತೇವೆ.

ಸುಲಭ ಸೌಲಭ್ಯತೆಯಿಂದ ಕ್ಷಮೆಯ ಬೆಲೆ ಗೊತ್ತಿಲ್ಲದೆ ತಾಳ್ಮೆ ಕಳೆದುಕೊಂಡು , responsibility / ಜವಾಬ್ದಾರಿಯ -ಕರ್ತವ್ಯದಿಂದ ದೂರವಾಗುವವರನ್ನು ನಾವು ಇಂದು ನೋಡುತ್ತೇವೆ. ತಾಳ್ಮೆ ಕಳೆದುಕೊಳ್ಳಲು ಹಲವಾರು ಕಾರಣಗಳಿವೆ.

೧. ಅಸ್ವಸ್ಥತೆ (Discomfort) ನಾವು ಮಾಡುವ ಪ್ರವೃತ್ತಿಯಲ್ಲಿ ( ಮಾತು- ಕೆಲಸ- ನಡೆ) ಮನಸ್ಸು ಮಿಲನವಾಗದಿದ್ದಲ್ಲಿ, ಕಾಟಾಚಾರಕ್ಕೆ ಅಂತ ಮುಗಿಸುವುದರಲ್ಲಿ ಸಮಾಗಮವಾಗುತ್ತದೆ.

೨. ಬೇಡವಾದ ಚಿಂತೆಗಳನ್ನು ಸೇರಿಸಿ, ನಮ್ಮ ಗುರಿಯನ್ನು ನಾವೇ ಆಸ್ವಾದಿಸದಿರುವುದು.

೩. ಅವಸರವೇ ಅಪಘಾತಕ್ಕೆ ಕಾರಣ. ಯಾವುದರಲ್ಲೂ ನಾವು ಅವಸರ ತೋರಿದಾಗ , ಅದರ ಫಲ ಒಳ್ಳೆಯ ಗುಣಮಟ್ಟ ಕಳೆದು ಕೊಳ್ಳುವುದು.

೪. ಒಂದು ವಿಷಯ/ಕೆಲಸದ ಸಂಪೂರ್ಣ ಘಟಕವನ್ನು ಅರಿಯದಿರುವುದು. ಕೌಟಂಬಿಕ ಜೀವನದಲ್ಲಿ ಚಿಕ್ಕ ವಿಷಯಕ್ಕೆ ದೂರವಾಗುವವರನ್ನು ನಾವು ಕಾಣುತ್ತೇವೆ. ಅವರು ಕುಟುಂಬ ಜೀವನದ ವಿಸ್ತಾರತೆಯನ್ನು ಅರಿತರೆ, ಈ ದೂರವಾದ ವಿಷಯ ಆ ವಿಸ್ತಾರತೆಯಲ್ಲಿ ಕಾಣದಿರುವ ಒಂದು ಭಾಗ ಎಂದು ಅರಿವಾಗುವುದರಲ್ಲಿ ತಾಳ್ಮೆ ಇದೆ.

೫. ಪ್ರಾಯೋಗಿಕತೆ (practice/experiment) ತಾಳ್ಮೆ ಯನ್ನು ಹೆಚ್ಚಿಸುತ್ತದೆ. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಬೆಳಿಗ್ಗೆ 6ಘಂಟೆಗೆ ಹೋರಾಡಿ 10ಘಂಟೆಯ ಕಛೇರಿ ಸಮಯಕ್ಕೆ( office timeಗೆ)ಅಲ್ಲ. ಅದು ನಿಧಾನವಾಗಿ ವರುಷಗಳು ಸವೆದು ಸರಿದು ಪಡೆದಿದ್ದು.

೬. ತಾನು ಮಾತ್ರ ಕೀರ್ತಿವಂತನಾಗಬೇಕೆಂಬ ಅಹಂ , ಕ್ಷಮೆ-ತಾಳ್ಮೆಯನ್ನು ಕೊಂದು ಸುಳ್ಳಿನ ತೇರೇರಿ ಅಧಂಪತನದಲ್ಲಿ ಪರಿಸಮಾಪ್ತಿಯಾದ ಹಲವು ಚರಿತ್ರೆಗಳು ನಮ್ಮ ಮುಂದೆ ಇವೆ.

ಹತ್ತನೇ ತರಗತಿಯವರೆಗಷ್ಟೇ ಕನ್ನಡದಲ್ಲಿ ಓದಿದ ನನ್ನಂತವನ ಲೇಖನವನ್ನು ಓದುವ ನೀವೇ ಅತ್ಯಂತ ದೊಡ್ಡ ತಾಳ್ಮೇಶ್ವರರು…ಎನ್ನುತ್ತಾ

ನಿಮ್ಮವ ನಲ್ಲ
ರೂಪು


  • ಡಾ.ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು ವಿಜಯಾ ಕಾಲೇಜು ಬೆಂಗಳೂರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW