ಈ ಮಳೆಗಾಲಕ್ಕೆ ಖಾರ ಖಾರವಾಗಿ, ರುಚಿ ರುಚಿಯಾಗಿ ಮತ್ತು ಆರೋಗ್ಯಕರವಾಗಿ ಏನಾದ್ರು ವಿಭಿನ್ನ ಅಡುಗೆ ಮಾಡಿ ತಿನ್ಬೇಕು ಅನಸುತ್ತೆ ಅಲ್ವಾ, ಹಾಗಿದ್ದರೆ ಈ ದೋಸೆ, ಚಟ್ನಿ ಮಾಡಿ ನೋಡಿ. ನಾಲಿಗೆ ಮತ್ತೆ ಮತ್ತೆ ಬೇಕು ಅನ್ನದೆ ಬಿಡದು – ದಿವ್ಯಾ ಫಣೀಶ್, ಮುಂದೆ ಓದಿ…
ಬೇಕಾಗುವ ಸಾಮಾನುಗಳು :
- ಚಿರೋಟಿ ರವೆ -2 ಕಪ್
- ಅಕ್ಕಿ ಹಿಟ್ಟು-1 ಕಪ್
- ಗೋಧಿ ಹಿಟ್ಟು -1/2 ಕಪ್
- ರಾಗಿ ಹಿಟ್ಟು -2 ಸ್ಪೂನ್
- ಮಿಲೆಟ್ ಪೌಡರ್ -2 ಸ್ಪೂನ್
- ರುಚಿಗೆ ತಕ್ಕಷ್ಟು ಉಪ್ಪು
- ಜೀರಿಗೆ – ಸ್ವಲ್ಪ
- ಹೆಚ್ಚಿದ ಹಸಿ ಮೆಣಸಿನಕಾಯಿ – ಸ್ವಲ್ಪ
- ಕೊತ್ತಂಬರಿ ಸೊಪ್ಪು, ಕರಿಬೇವು – ಸ್ವಲ್ಪ
- ನೀರು – 5-6 ಲೋಟ
ಮಾಡುವ ವಿಧಾನ :
ಮೇಲೆ ಹೇಳಿದ ಸಾಮಗ್ರಿಗಳನ್ನು ಎಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿ ಗಂಟಿಲ್ಲದಂತೆ ಮಿಕ್ಸ್ ಮಾಡಿದ ಮೇಲೆ, ಸ್ಟೋವ್ ಮೇಲೆ ದೋಸೆ ಹಂಚನ್ನಿಟ್ಟು ಹಾಕುತ್ತಾ ಹೋಗಿ ಸೂಪರ್ ಜಬರದಸ್ತ್ ದೋಸೆ ರೆಡಿ ಆಯ್ತು,ಈಗ ಅದಕ್ಕೆ ತಕ್ಕಟ್ಟೆ ಚಟ್ನಿ ಮಾಡೋದು ಹೇಳ್ತೀನಿ.
ಶೇಂಗಾಚಟ್ನಿ :
ಬೇಕಾಗುವ ಸಾಮಾನುಗಳು :
- ಶೇಂಗಾ – 2 ಸ್ಪೂನ್
- ಎಣ್ಣೆ – ಹುರಿಯಲು ಚೂರು
- ಕರಿಬೇವು, ಒಣ ಮೆಣಸಿನಕಾಯಿ – ಸ್ವಲ್ಪ
- ತೆಂಗಿನತುರಿ – ಸ್ವಲ್ಪ
- ಉಪ್ಪು, ಹುಣಸೆ ರಸ – ಸ್ವಲ್ಪ
ಮಾಡುವ ವಿಧಾನ : ಬಾಣಲೆಯಲ್ಲಿ 2 ಸ್ಪೂನ್ ಶೇಂಗಾ ಹುರಿದುಕೊಳ್ಳಿ. ಅನಂತರ ಸ್ವಲ್ಪ ಎಣ್ಣೆ ಹಾಕಿ ಕರಿಬೇವು, ಒಣ ಮೆಣಸಿನಕಾಯಿ ಹಾಕಿ ಬಾಡಿಸಿ, ಅದಕ್ಕೆ ತೆಂಗಿನ ತುರಿ ಹಾಕಿ ಫ್ರೈ ಮಾಡಿ. ಆಮೇಲೆ ಎಲ್ಲವನ್ನು ಮಿಕ್ಸರ್ ಜಾರ್ ಗೆ ಹಾಕಿ, ಉಪ್ಪು, ಹುಣಸೆ ರಸ ಹಾಕಿ ರುಬ್ಬಿದರೆ ಶೇಂಗಾ ಚಟ್ನಿ ರೆಡಿ.
ದೋಸೆ, ಶೇಂಗಾ ಚಟ್ನಿ ಎರಡೂ ತಿಂದು ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ…
- ದಿವ್ಯಾ ಫಣೀಶ್