‘ಮಾತಾಡಿದಷ್ಟು ಮೌನ, ನೋಡಿದಷ್ಟು ಸಿಗಲಾರೆ ನೀ ಎಂಬ ನಗ್ನ ಸತ್ಯ’…ಶೃತಿ ಆನಂದ ಅವರ ಲೇಖನಿಯಲ್ಲಿ ಮೂಡಿ ಬಂದ ಹನಿಗವನಗಳು, ಮುಂದೆ ಓದಿ…
ಪ್ರೀತಿಯ ಭಾವಗಳ ಬೆರಸಿ
ಬಡಿಸುವಾಸೆ
ತೋಳಲ್ಲಿ ಬಂದಿಯಾಗುವ
ಬವಣೆ
ತಂಗಾಳಿಯಾಗಿ ಒಮ್ಮೆ ನನ್ನ
ಇನಿಯನ ಸೇರುವಾಸೆ
ಕಣ್ಣ ಎದುರು ಇದ್ದರು
ಮಾತಾಡಿದಷ್ಟು ಮೌನ
ನೋಡಿದಷ್ಟು ಸಿಗಲಾರೆ ನೀ
ಎಂಬ ನಗ್ನ ಸತ್ಯ
****
ಮುಂದಿದೆ ಉದಯರಾಗ
ಮನಸ್ಸಿನ ಮೊಲೆಯಲ್ಲೊಂದೇ
ಕೂಗುತಿದೆ ಕೋಗಿಲೆ
ಹಾಡು ಬಾ ಪ್ರೇಮರಾಗವ ಒಂದೇ
ಮಲ್ಲಿಗೆ ಹೂವು ಎಸೆಳ ಬಿಟ್ಟಿ
ಕರೆಯುತಿದೆ ಒಂದೇ
ಮಾತು ಮಾತಿನೊಳಗೆ ಮುತ್ತು
ಕರಿಗೆ ಹೋಗುತಿದೆ ಒಂದೇ
ಮುತ್ತಿನೊಳಗಿದ್ದ ಮೌನ – ಮೌನದಿಂದ
ಕೊನೆಯಾಗುತಿದೆ ಇಲ್ಲಿ
ಜೀವನವು ಒಂದೇ
****
ಕನಸುಗಳ ಕಾರ್ಮೋಡ
ಮರೆಯಾಗತ್ತಿದೆ ಮಳೆಯೊಳಗೆ
ನೋವಿನ ತಾಪವು
ಬೋಗೆರೆಯುತ್ತಿದೆ ಮನದೊಳಗೆ
ಪ್ರೀತಿಯೋ ಬವಣೆಯ ಬದುಕೋ
ಒಂದು ಅರಿಯದೆ
ನನ್ನ ಒಲವೆ
- ಶೃತಿ ಆನಂದ (ಗೃಹಿಣಿ, ಯುವ ಕವಿಯತ್ರಿ)
