ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ…

ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರತಿವರ್ಷ ಫೆಬ್ರವರಿ ೪ ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ. ಅದರ ಗುಣಲಕ್ಷಣಗಳ ಬಗ್ಗೆ ತಿಳಿಯಿರಿ…

ಪ್ರಾಸ್ಟೇಟ್ ಗ್ರಂಥಿಯು ಪುರುಷ ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಗ್ರಂಥಿಯಾಗಿದೆ. ವೀರ್ಯಾಣುಗಳ ಸರಾಗ ಹರಿಯುವಿಕೆಗೆ ನೆರವಾಗುವ ದ್ರವವನ್ನು ಈ ಗ್ರಂಥಿ ಉತ್ಪಾದಿಸುತ್ತದೆ. ೫೫ ವರ್ಷ ದಾಟಿದ ಶೇಕಡಾ ೭೫ ರಷ್ಟು ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು ಗೋಚರಿಸುತ್ತವೆ. ಆದರೆ ಇದನ್ನು ವಯೋಸಹಜ ಲಕ್ಷಣಗಳು ಎಂದು ಕಡೆಗಣಿಸುವವರೇ ಹೆಚ್ಚು ಎನ್ನುತ್ತವೆ ಅಧ್ಯಯನಗಳು. ವಿಶ್ವದಲ್ಲಿ ಪ್ರತಿವರ್ಷ ೧೩ ಲಕ್ಷಕ್ಕೂ ಹೆಚ್ಚು ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್ ಗೆ ಒಳಗಾಗುತ್ತಾರೆ. ಆದರೆ ಈ ಕ್ಯಾನ್ಸರ್ ನ ಬಗ್ಗೆ ಅರಿವು ಇರುವವರ ಪ್ರಮಾಣ ಅತ್ಯಂತ ಕಡಿಮೆ.

ಬಹುತೇಕ ಎಲ್ಲಾ ಪ್ರಕರಣಗಳಲ್ಲೂ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಅತ್ಯಂತ ನಿಧಾನ ಗತಿಯಲ್ಲಿ ಬೆಳೆಯುತ್ತದೆ. ಈ ಸ್ವರೂಪದ ಕ್ಯಾನ್ಸರ್ ಗೆ ಅತ್ಯಂತ ಕಡಿಮೆ ಪ್ರಮಾಣದ ಚಿಕಿತ್ಸೆಯ ಅಗತ್ಯವಿದೆ. ಕೆಲವು ಪ್ರಕರಣಗಳಲ್ಲಿ ಮಾತ್ರ ಕ್ಷಿಪ್ರವಾಗಿ ಬೆಳೆಯುತ್ತವೆ. ಇಂತಹ ಪ್ರಕರಣಗಳಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಬೇಕಾಗುತ್ತದೆ. ಚಿಕಿತ್ಸೆ ನಿಧಾನವಾದಷ್ಟೂ, ಅದು ಫಲಕಾರಿಯಾಗುವ ಪ್ರಮಾಣ ಕ್ಷೀಣಿಸುತ್ತದೆ ಎನ್ನುತ್ತದೆ ಗ್ಲೋಬಲ್ ಪ್ರಾಸ್ಟೇಟ್ ಕ್ಯಾನ್ಸರ್ ಪ್ರತಿಷ್ಠಾನ.

ಪ್ರಾಸ್ಟೇಟ್ ಗ್ರಂಥಿಯಲ್ಲಿರುವ ಜೀವಕೋಶಗಳ ಡಿ ಎನ್ ಎ ಯಲ್ಲಿ ಆಗುವ ಬದಲಾವಣೆಯಿಂದ ಕ್ಯಾನ್ಸರ್ ತಲೆದೋರುತ್ತದೆ. ಬದಲಾವಣೆಯಾದ ಜೀವಕೋಶಗಳ ಬೆಳವಣಿಗೆ ಕ್ಷಿಪ್ರಗತಿ ಪಡೆಯುತ್ತದೆ. ಆಗ ಸಾಮಾನ್ಯ ಮತ್ತು ಆರೋಗ್ಯವಂತ ಜೀವಕೋಶಗಳು ಸಾಯುತ್ತವೆ. ನಂತರ ಕ್ಯಾನ್ಸರ್ ಕ್ಷಿಪ್ರವಾಗಿ ಹರಡುತ್ತದೆ. ಈ ಹಂತದಲ್ಲಿ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಪ್ರಾಸ್ಟೇಟ್ ಕ್ಯಾನ್ಸರ್ ಕ್ಷಿಪ್ರವಾಗಿ ಹರಡಲು ಆರಂಭಿಸಿದ ನಂತರ, ಹತ್ತಿರದ ಭಾಗಗಳಿಗೆ ಮೊದಲು ವ್ಯಾಪಿಸುತ್ತದೆ. ರಕ್ತ, ಮೂಳೆ, ಮೂತ್ರಕೋಶ ಮತ್ತಿತರ ಭಾಗಗಳಿಗೆ ಇದು ಹರಡುವ ಸಾಧ್ಯತೆ ಹೆಚ್ಚು. ಈ ಹಂತದಲ್ಲೂ ಚಿಕಿತ್ಸೆ ನೀಡಿ ಅದನ್ನು ನಿಯಂತ್ರಿಸಬಹುದು. ಆದರೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಹೀಗಾಗಿ ಈ ಕ್ಯಾನ್ಸರ್ ಬರದಂತೆ ಎಚ್ಚರಿಕೆ ವಹಿಸುವುದು ಮತ್ತು ಆರಂಭದಲ್ಲೇ ಪತ್ತೆಮಾಡಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ ಎನ್ನುತ್ತದೆ ಗ್ಲೋಬಲ್ ಪ್ರಾಸ್ಟೇಟ್ ಕ್ಯಾನ್ಸರ್ ಪ್ರತಿಷ್ಠಾನ.

ಭಾರತೀಯರಲ್ಲಿ ಬೊಜ್ಜು ಮತ್ತು ಅನುವಂಶೀಯವಾಗಿ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ಈ ಕ್ಯಾನ್ಸರ್ ಗೆ ಶಸ್ತ್ರಚಿಕಿತ್ಸೆ, ರೇಡಿಯೋ ಥೆರಪಿ, ಕಿಮೋಥೆರಪಿ, ಹಾರ್ಮೋನ್ ಥೆರಪಿ ಚಿಕಿತ್ಸೆಗಳು ಲಭ್ಯವಿವೆ. ಪ್ರತಿವರ್ಷ ಫೆಬ್ರವರಿ ೪ ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ.

  • ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW