ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಅವರು ಕೊಡ ಮಾಡುವ 2023 ನೇ ಸಾಲಿನ ರಾಜ್ಯಮಟ್ಟದ “ಸಾಹಿತ್ಯ ಸಿಂಧು ಪ್ರಶಸ್ತಿ” ಪುರಸ್ಕಾರಕ್ಕೆ ಎ.ಎನ್.ರಮೇಶ್.ಗುಬ್ಬಿ ಅವರು ಭಾಜನನಾಗಿದ್ದೇನೆ. ಆಕೃತಿಕನ್ನಡದ ಪರವಾಗಿ ಅವರಿಗೆ ಅಭಿನಂದನೆಗಳು …
ಇದೇ ತಿಂಗಳು 19.03.2023 ರಂದು ಭಾನುವಾರ, ಮೈಸೂರಿನ ರೋಟರಿ ಸ್ಕೂಲ್ ಸಭಾಂಗಣದಲ್ಲಿ (ಮೂ.ಡ. ಕಛೇರಿ ಎದುರು) ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿದೆ.
ಎತ್ತಣ ಅರಮನೆ ನಗರಿ ಮೈಸೂರು.? ಎತ್ತಣ ಕಡಲ ತಡಿ ಕರಾವಳಿಯ ಸಹ್ಯಾದ್ರಿ ತಪ್ಪಲಿನ ಕೈಗಾ..? ದೂರದ ಗಡಿನಾಡಿನ ಕಾನನದ ಈ ಭಾವಜೀವಿಯ ಕಾವ್ಯ ಕಲರವವನ್ನು ಗುರುತಿಸಿ, ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಿದ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಹೆಸರಾಂತ ಕವಿ, ಕಾದಂಬರಿಕಾರ ಶ್ರೀಯುತ ಎಂ.ಬಿ. ಸಂತೋಷ್ ಹಾಗೂ ಪ್ರತಿಷ್ಠಾನದ ಸಮಸ್ತ ಪದಾಧಿಕಾರಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. ಸಾಹಿತ್ಯದ ಹಾದಿಯ ನನ್ನ ಪ್ರತಿ ಅಂಬೆಗಾಲನ್ನು ಸಂಭ್ರಮಿಸಿ, ಅಡಿಗಡಿಗೂ ಅನುಕ್ಷಣ ಆಶೀರ್ವದಿಸುವ ಮಾತೃ ಸ್ವರೂಪಿ ಶ್ರೀಮತಿ ಹೇಮಗಂಗಾ ಅಮ್ಮನಿಗೆ ನಾನು ನಿತ್ಯಋಣಿ.
ದಿನ ದಿನವೂ ನನ್ನ ಕಾವ್ಯಕುಸುಮಗಳನ್ನು ಒಪ್ಪಿಸಿಕೊಂಡು, ಮೆಚ್ಚಿ ಪ್ರತಿಘಳಿಗೆ ಹಾರೈಸಿ, ಪ್ರೋತ್ಸಾಹಿಸಿ ನಡೆಸುತ್ತಿರುವ ಅಕ್ಷರಬಂಧುಗಳೇ ನೀವೆ ಈ ಪ್ರತಿ ಸಂಭ್ರಮಕೂ ಪ್ರೇರಣ. ನಿಮ್ಮ ಅಕ್ಷರಪ್ರೀತಿಯೇ ನನ್ನೆಲ್ಲ ಸಕಲ ಸಾಹಿತ್ಯ ಸಡಗರಕೆ ಕಾರಣ. ನಿಮಗಿದೋ ಅಂತರಾಳದ ಅನಂತ ಪ್ರಣಾಮಗಳು.” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.ತಿಂಗಳು 19.03.2023 ರಂದು ಭಾನುವಾರ, ಮೈಸೂರಿನ ರೋಟರಿ ಸ್ಕೂಲ್ ಸಭಾಂಗಣದಲ್ಲಿ (ಮೂ.ಡ. ಕಛೇರಿ ಎದುರು) ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿದೆ.
ಎತ್ತಣ ಅರಮನೆ ನಗರಿ ಮೈಸೂರು.? ಎತ್ತಣ ಕಡಲ ತಡಿ ಕರಾವಳಿಯ ಸಹ್ಯಾದ್ರಿ ತಪ್ಪಲಿನ ಕೈಗಾ..? ದೂರದ ಗಡಿನಾಡಿನ ಕಾನನದ ಈ ಭಾವಜೀವಿಯ ಕಾವ್ಯ ಕಲರವವನ್ನು ಗುರುತಿಸಿ, ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಿದ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಹೆಸರಾಂತ ಕವಿ, ಕಾದಂಬರಿಕಾರ ಶ್ರೀಯುತ ಎಂ.ಬಿ. ಸಂತೋಷ್ ಹಾಗೂ ಪ್ರತಿಷ್ಠಾನದ ಸಮಸ್ತ ಪದಾಧಿಕಾರಿಗಳಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಸಾಹಿತ್ಯದ ಹಾದಿಯ ನನ್ನ ಪ್ರತಿ ಅಂಬೆಗಾಲನ್ನು ಸಂಭ್ರಮಿಸಿ, ಅಡಿಗಡಿಗೂ ಅನುಕ್ಷಣ ಆಶೀರ್ವದಿಸುವ ಮಾತೃ ಸ್ವರೂಪಿ ಶ್ರೀಮತಿ ಹೇಮಗಂಗಾ ಅಮ್ಮನಿಗೆ ನಾನು ನಿತ್ಯಋಣಿ.
ದಿನ ದಿನವೂ ನನ್ನ ಕಾವ್ಯ ಕುಸುಮಗಳನ್ನು ಒಪ್ಪಿಸಿಕೊಂಡು, ಮೆಚ್ಚಿ ಪ್ರತಿಘಳಿಗೆ ಹಾರೈಸಿ, ಪ್ರೋತ್ಸಾಹಿಸಿ ನಡೆಸುತ್ತಿರುವ ಅಕ್ಷರ ಬಂಧುಗಳೇ ನೀವೆ ಈ ಪ್ರತಿ ಸಂಭ್ರಮಕೂ ಪ್ರೇರಣ. ನಿಮ್ಮ ಅಕ್ಷರಪ್ರೀತಿಯೇ ನನ್ನೆಲ್ಲ ಸಕಲ ಸಾಹಿತ್ಯ ಸಡಗರಕೆ ಕಾರಣ. ನಿಮಗಿದೋ ಅಂತರಾಳದ ಅನಂತ ಪ್ರಣಾಮಗಳು.” – ಪ್ರೀತಿಯಿಂದ
- ಎ.ಎನ್.ರಮೇಶ್.ಗುಬ್ಬಿ.