‘ಹಿಡಿಂಬೆಯಂತಹ, ಜಗಳಗಂಟಿ ಹೆಂಡತಿ’ ….ಕವಿ ಡಾ. ಲಕ್ಷ್ಮಣ ಕೌಂಟೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳ ಜೊತೆ ಒಂದು ಮನಸ್ಸಿಗೆ ಮುದ ನೀಡಿವ ಕವನ, ತಪ್ಪದೆ ಓದಿ …
ಬಹುಶಃ ಬರೆಯುವಾಗ
ವಿಧಿಯ ಮನದ ಮುಂದೆ
ನಿನ್ನ ತರಹದ
ರಂಭೆ ಊರ್ವಶಿ ಇರಲಿಕ್ಕಿಲ್ಲ..
ಇದ್ದರೂ ಇದ್ದಿರಬೇಕು
ಹಿಡಿಂಬೆಯಂತಹ
ಜಗಳಗಂಟಿ ಹೆಂಡತಿ..
ವಿಧಿಯ ಸಂಗಾತಿ
ಹೂವ್ವಿನಂತೆ ಕೋಮಲೆಯೇ ಆಗಿದ್ದು
ನಿತ್ಯ ಅಹರ್ನಿಶಿ
ಘಮಘಮಿಸುತ್ತ
ಅವನನ್ನು ಮತ್ತಿನಲ್ಲೇ
ಮುಳುಗಿ ಏಳಿಸುತ್ತಿದ್ದರೆ
ಹೆಂಗಳೆಯರೆಲ್ಲ
ಇವಳಂತೆಯೇ ಎಂದು ಬಗೆದು
ಅವರ ಹಣೆಬರಹವ
ಚಂದವೇ ಬರೆಯುತ್ತಿದ್ದನೇನೋ!!
ಬರಹ ಬಗೆಬಗೆಯಾಗಿರುವುದಕ್ಕೆ
ಕಾರಣ ಅವನಲ್ಲ ಬಿಡು
ನಿನ್ನಂಥವಳು ಜೀವನ ಸಂಗಾತಿಯಾಗಿ
ದೊರೆಯದಿದ್ದುದ್ದೇ ಆಗಿರಬೇಕು..!!
- ಡಾ. ಲಕ್ಷ್ಮಣ ಕೌಂಟೆ – ಕವಿ, ಲೇಖಕರು, ಉಪನ್ಯಾಸಕರು, ಕಲಬುರಗಿ.