‘ಶಕುನ’ ಕವನ – ಆಶಾ.ಎನ್.ಎಂ

ಅಪಶಕುನವೆಂದು ಭೂಮಿ ತಿರುಗದೆ ಸುಮ್ಮನಿರುವಳೇ….ಆಶಾ.ಎನ್.ಎಂ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನ ತಪ್ಪದೆ ಮುಂದೆ ಓದಿ…

ಗೂಬೆಯದು ಕೂಗಿತು
ಹಲ್ಲಿಯೊಂದು ಲೊಚಗುಟ್ಟಿತು
ಕಾಗೆಯೊಂದು ಕಾವ್ ಎಂದಿತು
ಕಾರ್ಯವದು ನಿಂತಾಯಿತು

ಕತ್ತೆ ಮುಖವ ಕಂಡೊಡನೆ
ಒಲಿವುದಂತೆ ಸಕಲ ಭಾಗ್ಯ
ಕರಿಬೆಕ್ಕು ಅಡ್ಡಬರಲು
ಸಮಯವಲ್ಲವಾಯ್ತು ಯೋಗ್ಯ

ಸೂರ್ಯ,ಚಂದ್ರ, ನಕ್ಷತ್ರಗಳು
ಶಕುನ ನೋಡಿ ಹೊಳೆವರೇ
ಅಪಶಕುನವೆಂದು ಭೂಮಿ
ತಿರುಗದೆ ಸುಮ್ಮನಿರುವಳೇ

ಸಾವು,ನೋವು,ಒಳಿತು,ಕೆಡುಕಿಗೆ
ಮೂಲವಾಯ್ತೇ ಈ ಶಕುನ?!
ಮೌಢ್ಯದ ನಂಬಿಕೆಯಿದು
ಇದಕಿಲ್ಲ ವೈಜ್ಞಾನಿಕ ಕಾರಣ

ಶಕುನವೋ ಅಪಶಕುನವೋ
ಬೇಡ ಯಾವ ಬಣ್ಣನೆ
ವಿಜ್ಞಾನವ ಅಣಕಿಸುವ
ಮೌಢ್ಯಕಿರಲಿ ಖಂಡನೆ


  • ಆಶಾ.ಎನ್.ಎಂ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading