‘ನನ್ನ ಬೆಳಗಿನ ವಾಕಿಂಗ್ ಜೊತೆಗಾರ ಶಂಭೂ ರಾಮ್, ಮುಂದಿನ ಮಾರ್ಚ್ ತಿಂಗಳಿಗೆ ಎರಡು ವರ್ಷ ತುಂಬುತ್ತದೆ. ಸಾಕು ನಾಯಿ ಇದ್ದರೆ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುವುದಕ್ಕೆ ನಾನೆ ಕಾರಣ’ ಎನ್ನುತ್ತಾರೆ ಶಂಭೂ ರಾಮ್ ಅವರ ಗೆಳೆಯ ಹಾಗೂ ಮಾಲೀಕ ಅರುಣ ಪ್ರಸಾದ್ ಅವರು, ತಪ್ಪದೆ ಓದಿ…
ಸಾಕು ನಾಯಿ ಇದ್ದರೆ ಹೃದಯದ ಆರೋಗ್ಯ ಉತ್ತಮ ಅಂತ ಗೆಳೆಯರು ಹೇಳಿದಾಗ ಯೋಚಿಸುತ್ತಿದ್ದೆ ಮನುಷ್ಯನ ಹೃದಯಕ್ಕೂ ಸಾಕು ನಾಯಿಗೂ ಎಲ್ಲಿಂದ ಸಂಬಂಧ ಅಂತ. ಇದು ಕಟ್ಟುಹಾಕದೆ ಸಾಕುವ ನಾಯಿಗಳಿಗೆ ಸಂಬಂದಿಸಿದ್ದಲ್ಲ ಆದರೆ ನೀವು ಕಟ್ಟುಹಾಕಿ ಸಾಕುವ ನಾಯಿಗಳು ಖಂಡಿತಾ ಅದನ್ನು ಸಾಕುವವರ ಆರೋಗ್ಯ ಫಿಟ್ ನೆಸ್ ಕಾಪಾಡುತ್ತದೆ.
ನಾನು ಸಾಕಿರುವ ರಾಟ್ ವೈಲರ್ ಹೆಸರು ಶಂಭೂ ನಾನು ಕರೆಯುವುದು ಶಂಭೂರಾಮ್ ಅಂತ ಮುಂದಿನ ಮಾರ್ಚ 23 ಕ್ಕೆ ಅವನಿಗೆ ಎರಡು ವಷ೯.
ಒಂದು ತಿಂಗಳ ಮರಿ ಬೆಂಗಳೂರಿನ ಕೆನಲ್ ಬ್ರೀಡರ್ ರಿಂದ ಖರೀದಿಸಿ ತಂದದ್ದು, ನನ್ನ ಮಗ ಅವನಿಗೆ ಸರಿಯಾದ ತರಬೇತಿ ನೀಡಿದ್ದರಿಂದ ಶಂಭೂರಾಮ್ ಫ್ರೆಂಡ್ಲಿ ಆಗಿ ಹೊಂದಾಣಿಕೆಯಲ್ಲಿ ಇದ್ದಾನೆ. ನಮ್ಮ ಜೊತೆ ಮನೆಯಲ್ಲೇ ಇರುವುದರಿಂದ ಹೊರಗಿನಿಂದ ಯಾರೂ ಮನೆಯ ಒಳಗೆ ಬರುವುದು ಕಷ್ಟ ಆಗಿದೆ, ಇದರಿ೦ದ ಮನೆಗೆ ಬರುವ ಗೆಳೆಯರು ಮತ್ತು ಅತಿಥಿಗಳಿಗೆ ನನ್ನ ಲಾಡ್ಜ್ ಆಫೀಸಿನಲ್ಲೇ ಅಪಥ್ಯೆ ಕೆಲವರಿಗೆ ಇದು ಅಪಥ್ಯ ಆದರೂ ನಮಗೆ ಅನಿವಾಯ೯ ಆಗಿದೆ.
ಸ್ನಾನ – ಹಲ್ಲು ಉಜ್ಜುವಾಗ – ಕಾಲ ಉಗುರು ಪೈಲ್ ಮಾಡುವಾಗ – ವೈದ್ಯರು ಚುಚ್ಚುಮದ್ದು ನೀಡುವಾಗ ಶಂಭು ರಾಮ ಪ್ರತಿರೋಧ ಮಾಡುವುದಿಲ್ಲ. ಹೆಚ್ಚಿನ ರಾಟ್ ವೈಲರ್ ಈ ಸಮಯದಲ್ಲಿ ವೈಲ್ಡ್ ಆಗುತ್ತದೆ. ಮಗ ಸಣ್ಣವನಿದ್ದಾಗಿಂದ ರಾಟ್ ವೈಲರ್ ಸಾಕುತ್ತೇನೆನ್ನುತ್ತಿದ್ದ, ನನಗೆ ಗಲ್ಫ್ ನಲ್ಲಿ ತೈಲೋತ್ಪಾದನೆಯಲ್ಲಿ ಇಂಜಿನಿಯರ್ ಆಗಿರುವ ಜಗನ್ ರಾಟ್ ವೈಲರ್ ಸಾಕುವ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದವರು.
ಅವರ ಸ್ವಂತ ಕೆನಲ್ ಪಾರಂ ಊಟಿಯಲ್ಲಿದೆ ಅಲ್ಲಿ ಹೆಚ್ಚು ರಾಟ್ ವೈಲರ್ ಬ್ರೀಡಿಂಗ್ ಮಾಡುತ್ತಾರೆ ನನಗೆ ಗಿಫ್ಟ್ ಆಗಿ ರಾಟ್ ವೈಲರ್ ಮರಿ ನೀಡುವ ಅವರ ಭರವಸೆ ಕೊರೋನಾ ಕಾರಣದಿಂದ ಮುಂದೆ ಹೋಯಿತು. ಅವರು ನಮ್ಮಲ್ಲಿಗೆ ಬಂದಾಗ ತಿಳಿಸಿದಂತೆ ಜಾಲರಿ ಗೇಟ್ ಗಳನ್ನು ಅಳವಡಿಸಿದ್ದೆ, ತಪ್ಪಿಸಿಕೊಂಡು ಯಾರಿಗಾದರೂ ಅಕ್ರಮಣ ಮಾಡದಂತೆ ಎರೆಡು ಸುತ್ತಿನ ರಕ್ಷಣಾ ಬೇಲಿಯಂತೆ, ಆಗಲೇ ಶಂಭೂರಾಮ್ ತಂದು ಬಿಟ್ಟೆ.
ನನ್ನ ತೂಕ ಇಳಿಸಲು ಮತ್ತು ಆರೋಗ್ಯ ಸುಧಾರಣೆಗೆ ಟ್ರೆಡ್ ಮಿಲ್ ಖರೀದಿಸುವ ಯೋಚನೆ ಇತ್ತು, ನನ್ನ ತೂಕದವರಿಗೆ ಸರಿಹೊಂದುವ ಬ್ರಾಂಡೆಡ್ ಥ್ರೆಡ್ ಮಿಲ್ ಬೆಲೆ ಒಂದು ಲಕ್ಷಕ್ಕೂ ಹೆಚ್ಚು ಆದರೆ ಅದು ಖರೀದಿಸಿದ ಬಹುಪಾಲು ಜನ ನಂತರದ ದಿನಗಳಲ್ಲಿ ಏಕತಾನತೆಯಿ೦ದ ಬಳಸದೇ ಇರುವ ಅನೇಕರನ್ನು ನೋಡಿದ್ದೆ ಆದ್ದರಿಂದ ಅದನ್ನು ಕೈ ಬಿಟ್ಟೆ.
ಶಂಭೂರಾಮ ಬಂದಿದ್ದರ ಲಾಭ ಬೆಳಿಗ್ಗೆ 6 ರಿಂದ ನನ್ನನ್ನು ಎಬ್ಬಿಸುತ್ತಾನೆ ವಾಕಿಂಗ್ ಗೆ, ನಮ್ಮಿಬ್ಬರ ಬೆಳಿಗಿನ ಒಂದು ಗಂಟೆ ವಾಕಿಂಗ್ ತಪ್ಪುವುದಿಲ್ಲ. ಇದರ ಜೊತೆಗೆ ಮನೆ ಹಿಂದೆ ವಾಕಿಂಗ್ ಗಾಗಿಯೇ ಇಂಟರ್ ಲಾಕ್ ಪೇವರ್ಸ್ ಹಾಕಿಸಿ (ಥ್ರೆಡ್ ಮಿಲ್ ಬಜೆಟ್ ನಲ್ಲಿ) ಪಾಟ್ ಗಳಲ್ಲಿ ಹೂವಿನ ಗಿಡದ ಸಣ್ಣ ಹೂವಿನ ತೋಟವೂ ಮಾಡಿದ್ದೇನೆ. ಅದಕ್ಕೆ ನಿತ್ಯ ನೀರುಣಿಸುವ ಕೆಲಸದ ಜೊತೆ ಶಂಭೂರಾಮ್ ಇರುತ್ತಾನೆ.
ನಿತ್ಯ ವಾಕಿಂಗ್ ಪ್ರೇರೇಪಿಸುವ ಶಂಭೂರಾಮ್, ನಿತ್ಯ ಬೆಳಿಗ್ಗೆ ನೀರು ಕೇಳುವ ಹೂವಿನ ಗಿಡಗಳು ಮತ್ತು ಅದರ ತರಹಾವಾರಿ ಹೂವುಗಳು ಪ್ರತಿ ದಿನವೂ ನಿತ್ಯ ನೂತನವಾಗಿಸುತ್ತದೆ.
ಇದರಿಂದ ಸಾಕು ನಾಯಿಗಳು ಇದ್ದರೆ ಹೃದಯದ ಆರೋಗ್ಯ ಸರಿ ಆಗುತ್ತದೆಂಬ ಮಾತು ಅಕ್ಷರಶಃ ಅನುಭವ ಆಗಿದೆ.
- ಅರುಣ ಪ್ರಸಾದ್