‘ಶ್ರೀರಾಮ ಪಾದುಕಾ ಪಟ್ಟಾಭಿಷೇಕ’ ನಾಟಕದ ಸುಂದರ ದೃಶ್ಯವನ್ನು ರಂಗನಿರ್ದೇಶಕ ಕಿರಣ ಭಟ್ ಹೊನ್ನಾವರ ಅವರು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದ್ದಿದ್ದಾರೆ, ತಪ್ಪದೆ ನೋಡಿ ಆನಂದಿಸಿ…
ನಾಟಕ : ಶ್ರೀರಾಮ ಪಾದುಕಾ ಪಟ್ಟಾಭಿಷೇಕ
ನಿರ್ದೇಶನ: ಪ್ರಕಾಶ ಗರೂಡ.
ತಂಡ: ರಂಗಾಯಣ ರೆಪರ್ಟರಿ, ಧಾರವಾಡ.
ಹೂಬೇಹೂಬು ಕಂಪನಿ ನಾಟಕದ ಶೈಲಿಯಲ್ಲೇ, ಪರದೆ, ಬಣ್ಣಗಳೊಂದಿಗೆ ತಯಾರಾಗಿರೋ ನಾಟ್ಕ ಇದು. ಸುಮಾರು ನಲ್ವತ್ತು ಹಾಡುಗಳಿವೆ. ಪಾತ್ರದ ಎಲ್ಲ ಹಾಡುಗಳನ್ನೂ ಕಲಾವಿದರೇ ಹಾಡ್ತಾರೆ. ಮೂಲ ನಾಟಕವನ್ನ ಹಾಗೇ ಇಟ್ಕೊಂಡು ( ಗರೂಡ ಸದಾಶಿವರಾಯರು) ಅಲ್ಲಲ್ಲಿ ಕಂಟೆಂಪರರಿ ನಾಟ್ಕದ ಸೂಕ್ಷ್ಮ ಅಭಿನಯದ ಛಾಯೆಗಳನ್ನೂ ಇಟ್ಕೊಂಡು ಪ್ರಕಾಶ್ ಈ ನಾಟ್ಕ ಕಟ್ಟಿದಾರೆ.
ಕಲಾವಿದರು ಅಭಿನಯಕ್ಕೂ ಸೈ, ಹಾಡಿಗೂ ಸೈ. ಹಿನ್ನೆಲೆ ಸಂಗೀತವೂ ಫೈನ್.
- ಕ್ಯಾಮೆರಾ ಹಿಂದಿನ ಕಣ್ಣು : ಕಿರಣ ಭಟ್, ರಂಗಕರ್ಮಿ, ನಟರು, ನಿರ್ದೇಶಕರು, ಹೊನ್ನಾವರ.