ಕೆ ಎಮ್ ಗಜು ಹೆಗಡೆ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಪದ್ಮದ ಮೇಲಿರುವ ನಯನುಣುಪು
ಅನಂತ ಪದ್ಮನ ಪಾದಗಳು
ಎನಗೆ ದೊರಕಿದ ಭಾಗ್ಯ
ದಾರುಕನಾಗಿ ಸಲಿಲ ದಾಟಿಸಲು
ಸಿಕ್ಕಿದವು ಅಮಿತಾನಂದದಿ
ಏನ ಹೇಳಲಿ ಈ ಕಾರುಣ್ಯಕೆ
ದಿನವಿಡೀ ಅದೇ ನೆನಪು
ಎಂದು ಕಾಂಬೆನು ಮತ್ತೆ
ಎಣೆಯಿಲ್ಲದೀ ಸಂಧಿಯ ಕಾಲವ
ತಾಯಿ ಪದ್ಮಿನಿಗೂ
ನೋಡಿ ಕಿಚ್ಚಾಗಿರಬಹುದೆನ್ನ ಮೇಲೆ
ಮಮತೆಯ ಶ್ರೇಯವನು ನೀಡಿ
ಶಿರವ ನೇವರಿಸಿದಾಗೆಲ್ಲ ಪದ್ಮನಾಭ
ಪಾನೀಯವಲ್ಲ ಇದು
ಅಮ್ರತದ ಧಾರೆಯು ಗಂಗೆಗೂ ಮೀರಿ
ಸೇವಿಸಿ ಧನ್ಯನಾದೆ
ಸೇರಿಸಿ ಒಟ್ಟೂ ಇಹಪರವ
- ಕೆ ಎಮ್ ಗಜು ಹೆಗಡೆ
